Wednesday, June 16, 2021
No menu items!
Home Latest ಫ್ರಾನ್ಸ್ ಮೇಲೆ ನಿಲ್ಲದ ಉಗ್ರರ ಅಟ್ಟಹಾಸ : ಇಂದು ಕೂಡ ಮೂವರ ಹತ್ಯೆ..!

ಫ್ರಾನ್ಸ್ ಮೇಲೆ ನಿಲ್ಲದ ಉಗ್ರರ ಅಟ್ಟಹಾಸ : ಇಂದು ಕೂಡ ಮೂವರ ಹತ್ಯೆ..!

ಫ್ರಾನ್ಸ್ : ಕಳೆದ ಕೆಲವು ವರ್ಷಗಳಿಂದಲೂ ಫ್ರಾನ್ಸ್ ಉಗ್ರವಾದದಿಂದಾಗಿ ತತ್ತರಿಸುತ್ತಲೇ ಇದೆ. ಅದರಲ್ಲೂ 2015ರ ಚಾರ್ಲಿ ಹೆಬೊ ಘಟನೆಯ ಅನಂತರದಿಂದ ಈ ಪಶ್ಚಿಮ ಐರೋಪ್ಯ ರಾಷ್ಟ್ರ ಭಯೋತ್ಪಾದಕ ಕೃತ್ಯಗಳಿಗೆ ಈಡಾಗುತ್ತಲೇ ಬಂದಿದೆ. ಅಂದಿನ ಉಗ್ರದಾಳಿಯಲ್ಲಿ 12 ಜನ ಕಾರ್ಟೂನಿಸ್ಟ್ಗಳು ಹಾಗೂ ಪತ್ರಕರ್ತರು ಸಾವಿಗೀಡಾಗಿದ್ದರು. ಅನಂತರದ ವರ್ಷಗಳಲ್ಲಿ ಮಾರುಕಟ್ಟೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 17 ಮಂದಿ, ಬಾಟ್ಲಾಕಾನ್ ಥಿಯೇಟರ್ ಹಾಗೂ ಸರಣಿ ದಾಳಿಗಳಲ್ಲಿ 130 ಮಂದಿ ಪ್ರಾಣಕಳೆದುಕೊಂಡಿದ್ದರು.

ಇಂದು ಕೂಡ ವಿವಿಧೆಡೆ ಇಸ್ಲಾಂ ಉಗ್ರಗಾಮಿಗಳ ಹಿಂಸಚಾರ ಮುಂದುವರೆದಿದೆ. ಉಗ್ರರು ದಾಳಿ ನಡೆಸಿದ್ದು, ಮೆಡಿಟರೇನಿಯನ್ ನಗರಿ ನೈಸ್ನ ನೋರ್ಟೆ ಡೇಮ್ ಬ್ಯಾಸಿಲಿಕಾ ಚರ್ಚ್ ಮೇಲೆ ದಾಳಿ ನಡೆದಿದೆ. ದಾಳಿಯಿಂದ ಮೂವರು ಭೀಕರವಾಗಿ ಹತ್ಯೆಯಾಗಿದ್ದಾರೆ. ನೈಸ್ ನಗರದಲ್ಲಿ ಈ ಎರಡು ತಿಂಗಳಲ್ಲಿ ನಡೆದ ಮೂರನೇ ಹತ್ಯಾಕಾಂಡ ಇದಾಗಿದೆ.

ಟುನಿಷಿಯಾ ಮೂಲದ ಉಗ್ರಗಾಮಿ ನಡೆಸಿದ ಈ ದಾಳಿಯಲ್ಲಿ ಕೆಲವರಿಗೆ ಗಾಯಗಳಾಗಿವೆ. ಈ ದಾಳಿ ನಂತರ ಪೊಲೀಸರು ಉಗ್ರನ ಮೇಲೆ ಗುಂಡು ಹಾರಿಸಿದ್ದು, ಆತ ತೀವ್ರ ಗಾಯಗೊಂಡಿದ್ದಾನೆ.

ನಿನ್ನೆ ಫ್ರಾನ್ಸ್ನ ನೀಸ್ ನಗರದ ಚರ್ಚ್ ಬಳಿ ಉಗ್ರನೊಬ್ಬ ಮೂವರನ್ನು ಚೂರಿಯಿಂದ ಹತ್ಯೆಗೈದಿದ್ದ. ಇದರಲ್ಲಿ ಇಬ್ಬರ ಶಿರಚ್ಛೇದನವನ್ನೂ ಮಾಡಿ ಕ್ರೌರ್ಯ ಮೆರೆದಿದ್ದ. ಇತ್ತೀಚೆಗೆ ತರಗತಿಯಲ್ಲಿ ಪ್ರವಾದಿಯವರ ವ್ಯಂಗ್ಯಚಿತ್ರ ತೋರಿಸಿದರೆಂಬ ಕಾರಣಕ್ಕಾಗಿ ಉಗ್ರನೊಬ್ಬ ಶಿಕ್ಷಕರೊಬ್ಬರ ಶಿರಚ್ಛೇದನ ಮಾಡಿದ್ದ. ಈ ಘಟನೆ ಮಾಸುವ ಮುನ್ನವೇ, ಅಂಥದ್ದೇ ರಕ್ತಪಾತ ನಡೆದಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments