Friday, September 24, 2021
No menu items!
Home Karnataka ಹೊಸಗುಡ್ಡದಹಳ್ಳಿ ಬೆಂಕಿ ಅವಘಡ : ಮಾಲೀಕರ ಬಂಧನ

ಹೊಸಗುಡ್ಡದಹಳ್ಳಿ ಬೆಂಕಿ ಅವಘಡ : ಮಾಲೀಕರ ಬಂಧನ

ಬೆಂಗಳೂರು: ನಗರದ ಬಾಪೂಜಿನಗರದ ರೇಖಾ ಕೆಮಿಕಲ್ ಫ್ಯಾಕ್ಟರಿಯಲ್ಲಿ ಬೆಂಕಿ ಹೊತ್ತಿಕೊಂಡು ಅಪಾರ ನಷ್ಟವುಂಟಾಗಿದ್ದು, ಪೊಲೀಸರು ಫ್ಯಾಕ್ಟರಿಯ ಮಾಲೀಕರನ್ನು ಬಂಧಿಸಿದ್ದಾರೆ. ಮಾಲೀಕ ಸಜ್ಜನ್ ರಾಜ್ ಮತ್ತು ಪತ್ನಿ ಕಮಲಾ ಅವರನ್ನು ಪೊಲೀಸರು ನಿನ್ನೆ ಶಂಕರಪುರಂನಲ್ಲಿರುವ ಅವರ ಮನೆಯಲ್ಲಿಯೇ ಬಂಧಿಸಿದ್ದಾರೆ.

ಕೆಮಿಕಲ್ ಫ್ಯಾಕ್ಟರಿ ಮಾಲೀಕ ಸಜ್ಜನ್ರಾಜ್ ತನ್ನ ಪತ್ನಿ ಕಮಲಾ ಹೆಸರಿನಲ್ಲಿ ಪರವಾನಗಿ ಪಡೆದಿದ್ದರು. ಬೊಮ್ಮಸಂದ್ರದ ರೇಖಾ ಕೆಮಿಕಲ್ ಇಂಡಸ್ಟ್ರಿ ಹೆಸರಿನಲ್ಲಿ ಪರವಾನಗಿ ಇದೆ. ಆದರೆ, ಹೊಸಗುಡ್ಡದಹಳ್ಳಿಯ ಗೋದಾಮಿನಲ್ಲಿ ಕೆಮಿಕಲ್ ಸಂಗ್ರಹ ಮಾಡಲು ಅನುಮತಿ ಪಡೆದಿರಲಿಲ್ಲ. ನಿನ್ನೆ ಬೆಳಗ್ಗೆ ಚಾಮರಾಜಪೇಟೆಯ ಉಮಾ ಟಾಕೀಸ್ ಬಳಿಯ ಗೋದಾಮಿನಿಂದ ಕೆಮಿಕಲ್ ತುಂಬಿದ್ದ ಬ್ಯಾರಲ್ ತಂದಿದ್ದರು. ಹೀಗೆ ಕೆಮಿಕಲ್ ಅನ್ನು ಹೊಸಗುಡ್ಡದಹಳ್ಳಿಯ ಗೋದಾಮಿನಲ್ಲಿ ಶೇಖರಿಸಿ ಇಡುವಾಗ ಸ್ಪೋಟ ಆಗಿತ್ತು. ಸುಮಾರು 1,000 ಬ್ಯಾರಲ್ ಗಳನ್ನು ಮುಂಜಾನೆ ತಗೊಂಡು ಹೋಗಿದ್ದರು. ಅದನ್ನು ಅನ್ಲೋಡ್ ಮಾಡುವಾಗ ಬೆಂಕಿ ಸ್ಫೋಟಗೊಂಡಿತ್ತು.

ಈ ಬೆಂಕಿ ಅವಘಡ ಸಂಭವಿಸುತ್ತಿದ್ದಂತೆ ರೇಖಾ ಕೆಮಿಕಲ್ ಫ್ಯಾಕ್ಟರಿಯ ಮಾಲೀಕ ಸಜ್ಜನ್ ರಾಜ್ ಹಾಗೂ ಕಮಲ ಇಬ್ಬರೂ ನಾಪತ್ತೆಯಾಗಿದ್ದರು. ಪೊಲೀಸರ ಬಲೆಗೆ ನಿನ್ನೆ ಸಂಜೆ ಬಿದ್ದಿದ್ದಾರೆ.

ಬಿಬಿಎಂಪಿ, ಫೈರ್ ಮತ್ತು ಎಮರ್ಜೆನ್ಸಿ ಸರ್ವಿಸ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಅನುಮತಿ ಇಲ್ಲದೆ ಹಲವು ವರ್ಷಗಳಿಂದ ಗೋದಾಮು ನಡೆಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬಂಧಿಸಲಾಗಿದೆ. ಸಜ್ಜನ್ ರಾಜ್ ಅವರ ಮಗ ಅನಿಲ್ ಕುಮಾರ್ ಫ್ಯಾಕ್ಟರಿಯ ವ್ಯವಹಾರ ನೋಡಿಕೊಳ್ಳುತ್ತಿದ್ದ. ಹೀಗಾಗಿ, ಆತನನ್ನು ಕೂಡ ಬಂಧಿಸಲಾಗಿದೆ.

ಈ ಅಗ್ನಿ ಅವಘಡದಿಂದ ಕೋಟ್ಯಾಂತರ ರೂಪಾಯಿ ನಷ್ಟವಾಗಿದೆ. ಅಕ್ಕಪಕ್ಕದ ಮನೆಗಳಿಗೆ ಹಾನಿಯಾಗಿ ನಷ್ಟವುಂಟಾಗಿದೆ. ಅದರಲ್ಲಿ ಒಂದು ಮನೆಯಲ್ಲಿಟ್ಟಿದ್ದ 80 ಸಾವಿರ ನಗದು ಹಾಗೂ 50 ಗ್ರಾಂ ಚಿನ್ನ ಕೂಡ ಸುಟ್ಟು ಕರಕಲಾಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ಸುಟ್ಟು ಭಸ್ಮವಾಗಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments