Monday, January 24, 2022
No menu items!
Home Latest ಹೇಗೆ, ಯಾರು, ಯಾವಾಗ ಉಪವಾಸ ಮಾಡಬೇಕು..?

ಹೇಗೆ, ಯಾರು, ಯಾವಾಗ ಉಪವಾಸ ಮಾಡಬೇಕು..?

ಸಾಮಾನ್ಯವಾಗಿ ಗಣೇಶ ಚತುರ್ಥಿ, ನಾಗರ ಪಂಚಮಿ, ಸಂಕಷ್ಟಹರ ಚತುರ್ಥಿ ಅಂತೆಲ್ಲಾ ಜನ ಉವಾಸ ಮಾಡ್ತಾರೆ. ಆಐುರ್ವೇದದ ಪ್ರಕಾರ, ಮನುಷ್ಯನ ಎಲ್ಲಾ ರೋಗಗಳಿಗೂ ಆತನ ದೇಹದ ಅಸಮರ್ಪಕ ಜೀರ್ಣಕ್ರಿಯೆ ಹಾಗೂ ಉತ್ಪತ್ತಿಯಾಗುವ ಮಲ ವಿಷವೇ ಮುಖ್ಯ ಕಾರಣ. ಜೀರ್ಣಕ್ರಿಯೆಯನ್ನು ಸಮತೋಲನದಲ್ಲಿ ಇಡಲು ಹಿಂದಿನವರು ವಾರ-ತಿಂಗಳಿಗೊಮ್ಮೆ ಉಪವಾಸವಿರುವ ಪದ್ಧತಿ ರೂಢಿಸಿಕೊಂಡಿದ್ದರು. ಧಾರ್ಮಿಕ ಹಿನ್ನೆಲೆಯಲ್ಲಿ ಉಪವಾಸ ಮಾಡುತ್ತಿದ್ದರಾದರೂ, ಅದರ ಹಿಂದಿನ ಉದ್ದೇಶ ಆರೋಗ್ಯವೇ ಆಗಿತ್ತು.

ಪ್ರಾಚೀನ ಕಾಲದಿಂದಲೂ ಚಾಲ್ತಿಯಲ್ಲಿದ್ದ ಈ ಪರಿಕಲ್ಪನೆ ದೇಹ ಮತ್ತು ಮನಸ್ಥಿತಿಯನ್ನು ಉತ್ತಮ ರೀತಿಯಲ್ಲಿ ಇರಿಸಿಕೊಳ್ಳುವ ಉದ್ದೇಶದ್ದಾಗಿತ್ತು. ಉಪವಾಸ ಪದದಲ್ಲಿಉಪ ಎಂದರೆ ಹತ್ತಿರ, ವಾಸ ಎಂದರೆ ಇರುವಿಕೆ. ಅಂದರೆ, ದೇವರ ಹತ್ತಿರವಿರುವುದು ಅಥವಾ ಒಳ್ಳೆಯ ಆಲೋಚನೆಗಳಲ್ಲಿ ಉಳಿಯುವುದು. ಇಂದ್ರಿಯಗಳನ್ನು ನಿಗ್ರಹಿಸಿ, ಆಹಾರ ಸೇವನೆಯನ್ನು ನಿಯಂತ್ರಿಸಿ, ದೇವರ ಆರಾಧನೆ, ಉಪಾಸನೆ ಮಾಡುವುದು ಎಂದರ್ಥ.
ಉಪವಾಸವನ್ನು ಯಾರು, ಹೇಗೆ, ಯಾವಾಗ ಮಾಡಬೇಕು / ಮಾಡಬಾರದು ಎಂಬುದನ್ನು ಪ್ರಕೃತಿ ಚಿಕಿತ್ಸೆಯಲ್ಲಿ ವಿವರವಾಗಿ ಹೇಲಲಾಗಿದೆ. ಉಪವಾಸವೆಂದರೆ ಕೇವಲ ನಿರಾಹಾರಿಯಾಗಿ ಇರುವುದು ಎಂದರ್ಥವಲ್ಲ. ಬದಲಿಗೆ, ಆಹಾರ ಸೇವನೆಯ ಕ್ರಮಗಳನ್ನು ಪಾಲಿಸುವ ವ್ರತ ಅಥವಾ ಚಿಕಿತ್ಸಾ ಪದ್ಧತಿ ಎನ್ನಬಹುದು. ಶರೀರ ಪ್ರಕೃತಿಯನ್ನು ಅನುಸರಿಸಿಕೊಂಡು ಅವುಗಳಿಗೆ ತಕ್ಕಂತೆ ತಣ್ಣನೆ, ಬಿಸಿ, ಹಗುರ ಹಾಗೂ ಕಠಿಣ ಆಹಾರ ಸೇವಿಸಬಹುದು.

ಉಪವಾಸದಲ್ಲಿ ಜಲೋಪವಾಸ, ರಸೋಪವಾಸ ಹಾಗೂ ಫಲೋಪವಾಸ ಎಂದ ಮೂರು ವಿಧಗಳಿವೆ. ವ್ಯಕ್ತಿಯ ದೇಹದ ತೂಕಕ್ಕೆ ತಕ್ಕಂತೆ ಆಹಾರ ಬಿಟ್ಟು ನೀರನ್ನು ಮಾತ್ರ ಕುಡಿಯುವುದಕ್ಕೆ ಜಲೋಪವಾಸ ಎನ್ನಲಾಗುತ್ತದೆ. ಜೇನು, ನಿಂಬೆರಸ, ತಾಜಾ ಹಣ್ಣಿನ ರಸಗಳ ಸಾಧಾರಣ ಹತಗತು ದಿನಗಳ ಅವಧಿಯ ಉಪವಾಸ ರಸೋಪವಾಸ. ದೇಹ ಶುದ್ಧೀಕರಿಸಲು ಸೇವಿಸುವ ತಾಜಾ ಹಣ್ಣುಗಳ ಉಪವಾಸ ಫಲೋಪವಾಸ ಎನ್ನುತ್ತಾರೆ.

ಜೀರ್ಣ ಕ್ರಿಯೆಗೆ ಸುಲಭವಾದ ಗಂಜಿ, ಕಿಚಡಿ ಮೊದಲಾದವುಗಳ ಸೇವನೆ, ಕೇವಲ ನೀರು ಮತ್ತು ಕಷಾಯ ಸೇವನೆ, ಹಣ್ಣು ಹಾಗೂ ತರಕಾರಿಉ ಜ್ಯೂಸ್‌ ಸೇವನೆ ಮತ್ತು ಸಂಪೂರ್ಣವಾಗಿಆಹಾರ, ನೀರು ಸೇವಿಸದಿರುವುದು ಉಪವಾಸದಲ್ಲಿನ ವಿವಿಧ ಪ್ರಕಾರಗಳು.

ಉಪವಾಸದ ಅಔಧಿಯಲ್ಲಿ ವ್ಯಕ್ತಿ ಸಾಧ್ಯವಾದಷ್ಟು ದೈಹಿಕ ವಿಶ್ರಾಂತಿ ಹಾಗೂ ಮಾನಸಿಕ ನೆಮ್ಮದಿ ಹೊಂದುವುದು ಬಹಳ ಅವಶ್ಯ. ಉಪವಾಸ ಒಂದು ದಿನವಾಗಿರಬಹುದು, ಏಳು ದಿನಗಳ ಅವಧೀ ಅಥವಾ ದೀರ್ಘ ಕಾಲ ಉಪವಾಸ ಆಗಿರಬಹುದು. 8-9 ವಯಸ್ಸು ದಾಟಿದ ನಂತರ ಉಪವಾಸ ಮಾಡಬಹುದು. ಅಶಕ್ತರು, ಗರ್ಭಿಣಿಯರು ಕಠಿಣ ಉಪವಾಸ ಕೈಗೊಳ್ಳಬಾರದು. ಉಪವಾಸದ ಅಔಧಿಯಲ್ಲಿ ಹಾಗೂ ನಂತರ ಜೀರ್ಣಾಂಗವ್ಯೂಹದ ಶುದ್ಧತೆಗಾಗಿ ಎನಿಮಾ ಮಾಡುವುದು ಅತ್ಯವಶ್ಯ.

ಬೊಜ್ಜು ಕರಗುವುದು ಹಾಗೂ ತೂಕ ನಿಯಂತ್ರಣಕ್ಕೆ ಬರುವುದು. ರೋಗ ನಿರೋಧಕ ಶಕ್ತಿ ಹೆಚ್ಚುವುದು. ದೇಹದಲ್ಲಿ ಹೊಸ ಚೈತನ್ಯ ಮೂಡುವುದು. ಮಲಬದ್ಧತೆ ಮುಂತಾದ ಜೀರ್ಣಕ್ರಿಯೆ ಸಂಬಂಧಿ ರೋಗಗಳನ್ನು ನಿವಾರಿಸುವುದು. ಉಪವಾಸವನ್ನು ಮುರಿಯುವುದು ಕೂಡಾ ಅಷ್ಟೇ ಮುಖ್ಯ. ದಿನವಿಡೀ ಉಪವಾಸ ವಿದ್ದು, ಆಹಾರ ನಿಯಂತ್ರಣಬವಿಲ್ಲದೆ ಅವಸರದಿಂದ ಏನೇಣೋ ಸೇವಿಸಬಾರದು. ಆಹಾರವನ್ನು ನಿಧಾನವಾಗಿ ಸಾಕಷ್ಟು ಜಗಿದು ತಿನ್ನಬೇಕು. ಹಿತ, ಮಿತ ಸಾತ್ವಿಕ ಆಹಾರ ಸೇವಿಸುವುದು ಉತ್ತಮ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments