ಈಗಾಗಲೇ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡು ಬಂದಿದ್ದು, ಇತ್ತೀಚೆಗೆ ಇಳಿದಿದ್ದ ಚಿನ್ನದ ಬೆಲೆ ಈಗ ಮತ್ತೆ ಏರುತ್ತಿದೆ.
ದೀಪಾವಳಿ ಹಬ್ಬದ ಪ್ರಾರಂಭವಾಗುವ ಮುನ್ನವೇ ಚಿನ್ನದ ಬೆಲೆಯಲ್ಲಿ 791 ರೂ.ಏರಿಕೆ ಕಂಡುಬಂದಿದೆ ಎಂದು ಎಚ್ಡಿಎಫ್ಸಿ ಸೆಕ್ಯುರಿಟೀಸ್ ಹೇಳಿದೆ. ಈ ಬೆಲೆ ಏರಿಕೆಯಿಂದ ಹತ್ತು ಗ್ರಾಂ ಚಿನ್ನದ ಬೆಲೆ 51,717 ರೂ.ಗೆ ಏರಿಕೆಯಾಗಿದೆ.
ಕಳೆದ ವಹಿವಾಟಿನಲ್ಲಿ ಇದು 10 ಗ್ರಾಂಗೆ 50,926 ರೂ. ಇತ್ತು. ಚಿನ್ನದ ಬೆಲೆ ಏರಿಕೆಯೊಂದಿಗೆ ಬೆಳ್ಳಿ ದರ ಸಹ ಏರಿಕೆಯಾಗಿದ್ದು ಕೆ.ಜಿ.ಗೆ 2,147 ರೂ ಏರಿಕೆ ದಾಖಲಾಗಿದೆ. ಇದರಿಂದಾಗಿ ಹಿಂದಿನ 62,431 ರೂ.ಗಳಿಂದ ಕೆಜಿ ಬೆಳ್ಳಿ ಬೆಲೆ 64,578 ರೂ.ಗೆ ಜಿಗಿತ ಕಂಡಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಚಿನ್ನಔನ್ಸ್ ಗೆ 1,950 ಡಾಲರ್ ಬೆಳ್ಳಿ ಔನ್ಸ್ ಗೆ ಗೆ 25.44 ಡಾಲರ್ ಬೆಲೆ ದಾಖಲಿಸಿದೆ.
ಎಚ್ಡಿಎಫ್ಸಿ ಸೆಕ್ಯುರಿಟೀಸ್ ಹಿರಿಯ ವಿಶ್ಲೇಷಕ (ಕಮಾಡಿಟೀಸ್)ತಪನ್ ಪಟೇಲ್ ಮಾತನಾಡಿ, ಹೆಚ್ಚಿನ ಉತ್ತೇಜಕ ಪ್ಯಾಕೇಜ್ ನಿರೀಕ್ಷೆಯ ಮೇರೆಗೆ ಚಿನ್ನದ ಬೆಲೆ ಏರಿಕೆಯಾಗಿದೆ ಎಂದಿದ್ದಾರೆ.
ನವೆಂಬರ್ ತಿಂಗಳ ಆರಂಭದಿಂದ ನಿರಂತರವಾಗಿ ಇಳಿಕೆ ಕಾಣುತ್ತಿದ್ದ ಚಿನ್ನದ ಬೆಲೆ ಇಂದು ಕೂಡ ಇಳಿಕೆ ಆಗುತ್ತೆ ಅಂತಾ ಆಭರಣ ಪ್ರಿಯರು ನಿರೀಕ್ಷೆ ಮಾಡಿದ್ದರು. ಆದರೆ ಇಂದು ನಿರೀಕ್ಷೆಗೂ ಮೀರಿ ದಿಢೀರನೇ ಬೆಲೆ ಏರಿಕೆಯಾಗಿದ್ದು ಚಿನ್ನ ಖರೀದಿಸುವವರಿಗೆ ಶಾಕ್ ನೀಡಿದೆ.