Tuesday, August 3, 2021
No menu items!
Home Bharata ಟೇಬಲ್ ಟಾಪರ್ 'ಡೆಲ್ಲಿ'ಗಿಂದು 'ಪಂಜಾಬ್' ಸವಾಲ್…

ಟೇಬಲ್ ಟಾಪರ್ ‘ಡೆಲ್ಲಿ’ಗಿಂದು ‘ಪಂಜಾಬ್’ ಸವಾಲ್…

ದುಬೈ : 13 ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ನಲ್ಲಿ ಅಂಕಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಕಳೆದ ಪಂದ್ಯದಲ್ಲಿ ಡಬಲ್ ಸೂಪರ್‌ ಓವರ್ ನಲ್ಲಿ ಜಯಗಳಿಸಿದ ಆತ್ಮವಿಶ್ವಾಸದಲ್ಲಿರು ಕಿಂಗ್ಸ್ ಇಲವೆನ್ ಪಂಜಾಬ್ ತಂಡಗಳು ಇಂದು ಮುಖಾಮುಖಿಯಾಗಲಿವೆ.

ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೆ.ಎಲ್ ರಾಹುಲ್‌ ನಾಯಕತ್ವದ ಕಿಂಗ್ಸ್ ಇಲವೆನ್ ಪಂಜಾಬ್ ಕ್ರಿಸ್ ಗೇಲ್ ಆಗಮನದ ನಂತರ ಪುಟಿದೇಳುತ್ತಿದೆ. ಸತತ 5 ಸೋಲುಗಳ ಬಳಿಕ ಕಳೆದೆರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ರಾಹುಲ್ ಪಡೆ ಇಂದಿನ ಪಂದ್ಯವನ್ನೂ ಗೆಲ್ಲಲೇ ಬೇಕಾಗಿದೆ. ಆರ್ ಸಿಬಿ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿರುವ ಪಂಜಾಬ್ ಗೆ ಮುಂದೆ ಉಳಿದಿರುವ ಎಲ್ಲಾ 5 ಪಂದ್ಯಗಳಲ್ಲಿ ಗೆದ್ದರಷ್ಟೇ ಪ್ಲೇ ಆಫ್ ಹಂತ ತಲುಪಲು ಸಾಧ್ಯ.

ಇತ್ತ ಐಪಿಲ್ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ವಿರಾಜಮಾನವಾಗಿರುವ ಶ್ರೇಯಸ್ ಅಯ್ಯರ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ ಪಡೆ ಇಂದಿನ ಪಂದ್ಯವನ್ನೂ ಗೆದ್ದು ಬೀಗುವ ಆತ್ಮವಿಶ್ವಾಸದಲ್ಲಿದೆ. ಬೌಲಿಂಗ್ ಲೈನ್ ಅತ್ಯುತ್ತಮವಾಗಿದ್ದರೂ ಬ್ಯಾಟಿಂಗ್‌ ನಲ್ಲಿ ಆರಂಭಿಕ ಆಟಗಾರರು ಎಡವುತ್ತಿರುವುದು ಡೆಲ್ಲಿ ತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ . ಆದರೂ ಸಂಘಟಿತ ಹೋರಾಟ ನಡೆಸುತ್ತಿರುವ ತಂಡ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ.

ಡೆಲ್ಲಿ ಸಂಭಾವ್ಯ ತಂಡ:ಪೃಥ್ವಿ ಶಾ, ಶಿಖರ್ ಧವನ್, ಶ್ರೇಯಸ್ ಅಯ್ಯರ್(ನಾಯಕ), ಅಜಿಂಕ್ಯ ರಹಾನೆ/ ಶಿಮ್ರೋನ್ ಹೆಟ್ಮೆಯರ್, ಮಾರ್ಕರ್ ಸ್ಟೊಯಿನಿಸ್, ಅಲೆಕ್ಸ್ ಕ್ಯಾರಿ/ ರಿಷಭ್ ಪಂತ್(ವಿ.ಕೀ), ಅಕ್ಷರ್ ಪಟೇಲ್ , ಆರ್ ಅಶ್ವಿನ್, ತುಷಾರ್ ದೇಶ್ ಪಾಂಡೆ, ರಬಾಡ, ಅನ್ರಿಚ್ ನೋರ್ಜೆ

ಪಂಜಾಬ್ ಸಂಭಾವ್ಯ ತಂಡ: ಕೆ.ಎಲ್ ರಾಹುಲ್ ( ನಾಯಕ & ವಿ.ಕೀ) ,ಮಯಾಂಕ್ ಅಗರ್ವಾಲ್ , ಕ್ರಿಸ್ ಗೇಲ್, ನಿಕೋಲಸ್ ಫೂರನ್, ಗ್ಲೆನ್ ಮ್ಯಾಕ್ಸ್ ವೆಲ್, ದೀಪಕ್ ಹೂಂಡಾ , ಕ್ರಿಸ್ ಜೂರ್ಡಾನ್, ಎಂ.ಅಶ್ವಿನ್/ಕೆ. ಗೌತಮ್ ಮೊಹಮ್ಮದ್ ಶಮಿ, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments