ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸೋಂಕು ನಿಯಂತ್ರಣ ಕ್ರಮಗಳ ಬಗ್ಗೆ ಚರ್ಚಿಸಲು ಇಂದು ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಸಭೆ ವೇಳೆ ಮಾಸ್ಕ್ ದಂಡ ಹೆಚ್ಚಿಸುವ ಬಗ್ಗೆಯೂ ಕ್ರಮ ಕೈಗೊಳ್ಳಲಾಗಿದೆ.
ಸಭೆ ಬಳಿಕ ಮಾತನಾಡಿರುವ ಕೇಜ್ರಿವಾಲ್, ‘ಸಾಕಷ್ಟು ಜನರು ಮಾಸ್ಕ್ಗಳನ್ನು ಧರಿಸುತ್ತಿದ್ದಾರೆ. ಆದರೆ ಕೆಲವರು ಇನ್ನೂ ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ದಂಡವನ್ನು ₹ 500ರ ಬದಲು ₹ 2000ಕ್ಕೆ ಹೆಚ್ಚಿಸಲಾಗಿದೆ’ ಎಂದು ತಿಳಿಸಿದ್ದಾರೆ.
ಸೋಂಕು ಹರಡದಿರುವಂತೆ ತಡೆಯಲು ಮಾಸ್ಕ್ ಅತ್ಯವಶ್ಯಕ. ಅದೇ ಕಾರಣದಿಂದ ಎಲ್ಲ ರಾಜ್ಯಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯ ಮಾಡಲಾಗಿದೆ. ಹಾಗಿದ್ದರೂ ಕೆಲವರು ಮಾಸ್ಕ್ ಅನ್ನು ಬಾಯಿ, ಮೂಗಿನ ಬದಲು ಕುತ್ತಿಗೆಗೆ ಹಾಕಿಕೊಳ್ಳುವ ಅಭ್ಯಾಸ ಮಾಡಿಕೊಂಡಿದ್ದಾರೆ. ಇಂತವರಿಗೆ ಬುದ್ಧಿ ಕಲಿಸುವ ಸಲುವಾಗಿ ದಂಡ ವಿಧಿಸಲಾಗುತ್ತಿದೆ. ಅಲ್ಪ ಸ್ವಲ್ಪ ದಂಡಕ್ಕೆ ಹೆದರದೆ ಮತ್ತೆ ತಪ್ಪು ಮುಂದುವರಿಸುತ್ತಿರುವುದರಿಂದಾಗಿ ದಂಡದ ಪ್ರಮಾಣವನ್ನು ಹೆಚ್ಚು ಮಾಡಲು ದೆಹಲಿ ಸರ್ಕಾರ ನಿರ್ಧರಿಸಿದೆ.
ಈ ಮಧ್ಯೆ ದೆಹಲಿಯಲ್ಲಿ ಕೊರೊನಾ ವೈರಸ್ ನ 3ನೇ ಅಲೆಯು ಇನ್ನೂ ಪ್ರಬಲವಾಗುತ್ತಿದೆ. ದೀಪಾವಳಿಯ ನಂತರ ಮಳೆಯ ನಂತರ ಮಾಲಿನ್ಯದ ಮಟ್ಟವು ಗಮನಾರ್ಹವಾಗಿ ಇಳಿಕೆಯಾಗುವ ಸಾಧ್ಯತೆ ಇದೆ. ವರದಿಯ ಪ್ರಕಾರ, ರಾಷ್ಟ್ರ ರಾಜಧಾನಿಯಲ್ಲಿ ಕೊರೊನಾ ವೈರಸ್ ಪರೀಕ್ಷೆ ಇನ್ನೂ 13% ಪಾಸಿಟಿವ್ ಆಗುವ ಸಾಧ್ಯತೆ ಇದೆ. ಉನ್ನತ ಪರೀಕ್ಷೆಗಳ ಹೊರತಾಗಿಯೂ ಇದು ದೇಶದಲ್ಲಿಯೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ನಗರವಾಗಿದೆ.
ಮುಂದುವರಿದು, ‘ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ದೆಹಲಿ ಜನರ ಪಾಲಿಗೆ ಸಂಕಷ್ಟದ ಸಮಯವಾಗಿದೆ ಎಂದು ಎಲ್ಲ ಪಕ್ಷದವರಿಗೆ ತಿಳಿಸಿದ್ದೇನೆ. ಇದು ರಾಜಕೀಯ ಮಾಡುವ ಸಮಯವಲ್ಲ. ಅದಕ್ಕಾಗಿ ಜೀವನದುದ್ದಕ್ಕೂ ಸಮಯವಿದೆ. ನಾವು ಕೆಲವು ದಿನಗಳ ಕಾಲ ರಾಜಕೀಯ ಮತ್ತು ಆರೋಪಗಳನ್ನು ಪಕ್ಕಕ್ಕಿಡಬೇಕು. ಇದು ಜನರಿಗೆ ಸೇವೆ ಸಲ್ಲಿಸುವ ಸಮಯ. ಇದನ್ನು ಎಲ್ಲ ಪಕ್ಷಗಳೂ ಒಪ್ಪಿಕೊಂಡಿವೆ’ ಎಂದು ಹೇಳಿದರು.
आज सर्वदलीय बैठक में सभी दलों का सहयोग माँगा। ये वक़्त राजनीति का नहीं बल्कि सेवा का है। सभी दलों से निवेदन किया कि वे अपने कार्यकर्ताओं से सभी सार्वजनिक स्थलों पर मास्क बँटवाएं। सभी दलों ने आश्वासन दिया कि वे राजनीति छोड़कर जनसेवा करेंगे। pic.twitter.com/Ft2iqiUWrd
— Arvind Kejriwal (@ArvindKejriwal) November 19, 2020