ದುಬೈ: ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಮಿಂಚಿದ ಹಾಲಿ ಚಾಂಪಿಯನ್ , ಕೀರನ್ ಪೊಲಾರ್ಡ್ ನಾಯಕತ್ವದ ಮುಂಬೈ ಪಡೆ ,ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಮಣಿಸಿ ಕ್ವಾಲಿಫೈಯರ್ ಟಿಕೆಟ್ ಪಕ್ಕಾ ಮಾಡಿಕೊಂಡಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿಯಲ್ಪಟ್ಟ ಡೆಲ್ಲಿ ತಂಡಕ್ಕೆ ಜಸ್ಪ್ರೀತ್ ಬುಮ್ರಾ (21ಕ್ಕೆ 3)ಮತ್ತು ಟ್ರೆಂಟ್ ಬೌಲ್ಟ್(17 ಕ್ಕೆ 3 ) ಮಾರಕ ದಾಳಿ ನಡೆಸಿ ಆಘಾತ ನೀಡಿದರು. ಇಬ್ಬರೂ ಬೌಲರ್ಗಳು ತಲಾ 3 ವಿಕೆಟ್ ಕಬಳಿಸಿ ಡೆಲ್ಲಿ ತಂಡ ಅತ್ಯಂತ ಕಡಿಮೆ ಮೊತ್ತಕ್ಕೆ ಕುಸಿಯುವಂತೆ ಮಾಡಿದರು. ಅಂತಿಮವಾಗಿ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 110 ರನ್ ಪೇರಿಸಲಷ್ಟೆ ಶಕ್ತವಾಯಿತು.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಸುಲಭ ಮೊತ್ತವನ್ನ ಬೆನ್ನತ್ತಿದ್ದ ಮುಂಬೈ ಪಡೆ ಮೊದಲ ವಿಕೆಟ್ ಜೊತೆಯಾಟಕ್ಕೆ 68 ರನ್ ಪೇರಿಸಿತು. ಕ್ವಿಂಟನ್ ಡಿ ಕಾಕ್ ಮತ್ತು ಇಶಾನ್ ಕಿಶಾನ್ ಜೋಡಿ 10.2 ಓವರ್ಗಳಲ್ಲಿ 68 ರನ್ ಗಳ ಕಾಣಿಕೆ ನೀಡಿದರು.26 ರನ್ ಗಳಿಸುತ್ತಿದ್ದಂತೆ ಡಿ ಕಾಕ್ ಔಟಾದರು .ನಂತರ ಇಶಾನ್ ಕಿಶಾನ್ ಜೊತೆಯಾದ ಸೂರ್ಯಕುಮಾರ್ ಯಾದವ್ ತಂಡವನ್ನು ಸುಲಭಾವಾಗಿ ಗುರಿ ಮುಟ್ಟಿಸಿದರು. ಅಂತಿಮವಾಗಿ 14.2 ಓವರ್ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು.
ಈ ಗೆಲುವಿನೊಂದಿಗೆ ಮುಂಬೈ ತಂಡ ಆಡಿರುವ 13 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿ 18 ಅಂಕಗಳೊಂದಿಗೆ ಮುಂದಿನ ಹಂತವನ್ನ ಕನ್ಫರ್ಮ್ ಮಾಡಿಕೊಂಡಿದೆ ಜೊತೆಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಿಯಾಗಿ ವಿರಾಜಮಾನವಾಗಿದೆ. ಇತ್ತ ಡೆಲ್ಲಿ ತಂಡ ಸತತ 4 ಸೋಲು ಕಂಡು 14 ಅಂಕಗಳೊಂದಿಗೆ 3 ನೇ ಸ್ಥಾನದಲ್ಲಿ ಉಳಿದು ತನ್ನ ಪ್ಲೇ ಆಫ್ ಹಾದಿ ಕಠಿಣಗೊಳಿಸಿಕೊಂಡಿದೆ