ಬೆಂಗಳೂರು: ಚಂದನವನದ ಸುಂದರಿ ನಟಿ ದೀಪಿಕಾ ಕಾಮಯ್ಯ ಇನ್ಸ್ಟಾಗ್ರಾಂ ಖಾತೆ ಎರಡು ಮೂರು ದಿನಗಳಿಂದ ಹ್ಯಾಕ್ ಆಗಿದೆ.
ಆರಂಭದಲ್ಲಿ ಬೇರೆ ಬೇರೆ ರೀತಿಯ ಲೋಗೋಗಳನ್ನು ಶೇರ್ ಮಾಡಲಾಗುತ್ತಿತ್ತು. ನಂತರ ದೀಪಿಕಾ ಅವರ ಎಲ್ಲ ಪೋಸ್ಟ್ ಗಳನ್ನು ಡಿಲೀಟ್ ಮಾಡಲಾಗಿದೆ. ಅತಿ ಹೆಚ್ಚಾಗಿ ಬಳಸುತ್ತಿದ್ದ ಇನ್ಸ್ಟಾಗ್ರಾಂ ಖಾತೆಯನ್ನು ಯಾರೋ ಕಿಡಿ ಕೇಡಿಗಳು ಹ್ಯಾಕ್ ಮಾಡಿದ್ದಾರೆ. ಸುಮಾರು ಎರಡು-ಮೂರು ದಿನಗಳಿಂದ ಹ್ಯಾಕ್ ಆಗಿದೆ.
ಹ್ಯಾಕ್ ಮಾಡಿದ ಕಿಡಿಗೇಡಿಗಳು ಸ್ಟೋರಿಯಲ್ಲಿ ಇಂಗ್ಲಿಷ್ ಹಾಡಿನ ಲಿಂಕ್ ಗಳನ್ನು ಶೇರ್ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇಬ್ಬರು ಖಾತೆಯನ್ನು ನಿರ್ವಹಿಸುತ್ತಿರಬಹುದು ಎಂದು ಅನುಮಾನಿಸಲಾಗಿದೆ.
ಇನ್ನು, ನೆಟ್ಟಿಗರು ಗಮನಿಸುತ್ತಿರುವ ಪ್ರಕಾರ ಇಬ್ಬರು ಖಾತೆಯನ್ನು ಹ್ಯಾಂಡಲ್ ಮಾಡುತ್ತಿದ್ದಾರೆ. ಬೆಳಗ್ಗೆ ಒಬ್ಬರು ಇನ್ಸ್ಟಾ ಫೋಟೋ ಅಪ್ಲೋಡ್ ಮಾಡಿದರೆ, ರಾತ್ರಿ ವೇಳೆ ಯಾವುದೋ ಹುಡುಗರ ಬಗ್ಗೆ ಮಾಹಿತಿ ಹೊಂದಿರುವ ಹಾಡಗಳು ಹಾಗೂ ಸಿನಿಮಾಗಳ ಬಗ್ಗೆ ಶೇರ್ ಮಾಡಿಕೊಳ್ಳುತ್ತಾರೆ.
ದೀಪಿಕಾ ಕಾಮಯ್ಯ ಅವರ ಖಾತೆಯಲ್ಲಿ 2 ಸಾವಿರಕ್ಕೂ ಹೆಚ್ಚು ಫೋಟೋಗಳಿದ್ದು, 87 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ಖಾತೆ ಕೂಡ ವೆರಿಫೈಡ್ ಆಗಿದೆ. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮೇಲೆ ದೀಪಿಕಾ ಸದ್ಯ ವಿದೇಶದಲ್ಲಿ ನೆಲೆಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬಗ್ಗೆ ಅಪ್ಡೇಟ್ ಮಾಡುವ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿದ್ದರು.