ಬೆಂಗಳೂರು: ಮದುವೆಯಾಗಿ ವರ್ಷ ಪೂರೈಸಿದ್ರೆ ಅದೊಂದು ರೀತಿಯ ಸಂಭ್ರಮವೇ. ಜೊತೆಯಾಗಿ ಎಷ್ಟೇ ವರ್ಷಗಳು ಕಳೆದರು ಪ್ರತಿ ವರ್ಷವೂ ವಾರ್ಷಿಕೋತ್ಸವವನ್ನ ಆಚರಿಸುತ್ತಾರೆ. ಆದ್ರೆ ಮೊದಲ ವಾರ್ಷಿಕೋತ್ಸವ ಒಂದು ರೀತಿಯ ಸ್ಪೆಷಲ್ ಅಂತಾನೇ ಹೇಳಬಹುದು. ಅಂತ ವಿಶೇಷ ದಿನವನ್ನ ಕುಲವಧು ಧಾರಾವಾಹಿ ನಟಿ ಧನ್ಯಾ ಖ್ಯಾತಿಯ ದೀಪಿಕಾ ಹಂಚಿಕೊಂಡಿದ್ದಾರೆ.
ಹೌದು ಇಂದು ಧೀಪಿಕಾ ಮೊದಲ ಮದುವೆ ವಾರ್ಷಿಕೋತ್ಸವವನ್ನ ಆಚರಿಸಿಕೊಳ್ಳುತ್ತಿದ್ದಾರೆ. ನಟ ಆಕರ್ಷ್ ಮತ್ತು ದೀಪಿಕಾ ಪ್ರೀತಿಸಿ ಮದುವೆಯಾಗಿದ್ದರು. ಇಂದಿಗೆ ಒಂದು ವರ್ಷ ತುಂಬಿದ ಖುಷಿಯಲ್ಲಿದ್ದಾರೆ. ಆ ಸಂಭ್ರಮವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಮುದ್ದಿನ ಪತ್ನಿಗೆ ಪತಿ ಆಕರ್ಷ್ ಸ್ಪೆಷಲ್ ಗಿಫ್ಟ್ ಕೊಟ್ಟಿದ್ದು, ಆ ಬಗ್ಗೆ ದೀಪಿಕಾ ಬರೆದುಕೊಂಡಿರುವುದು ಹೀಗೆ, ಮದುವೆ ಎಂಬುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ. ಆದರೆ ನಾವು ಇದನ್ನು ಭೂಮಿಮೇಲೆ ಅನುಭವಿಸುತ್ತೇವೆ. ಇದು ನಿಜಕ್ಕೂ ಸುಂದರವಾದ ದಿನ. ಈ ವಿಶೇಷವಾದ ದಿನಕ್ಕೆ ಇಷ್ಟೊಂದು ಅರೆಂಜ್ ಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು. ನಿಜಕ್ಕೂ ಇಷ್ಟವಾಯಿತು. ಒಂದು ವರ್ಷ ಕಳೆದದ್ದೆ ಗೊತ್ತಾಗಿಲ್ಲ. ನಿಮ್ಮ ಜೊತೆ ಇದ್ದಾಗ ಕ್ಷಣ ಹೇಗೆ ಹೋಯಿತು ಅರ್ಥವಾಗಿಲ್ಲ. ಎಲ್ಲದಕ್ಕೂ ಧನ್ಯವಾದ ಅಂತ ಬರೆದುಕೊಂಡಿದ್ದಾರೆ.
https://www.instagram.com/p/CHb59JJAqeX/?igshid=1qj2mok9zykpa