ಬೆಂಗಳೂರು : ಮುನಿರತ್ನಗೆ ಆರ್ ಆರ್ ನಗರ ಗೆಲ್ಲುವುದು ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಮುನಿರತ್ನ ಪರ ಪ್ರಚಾರಕ್ಕೆ ಸಿಎಂ ಯಡಿಯೂರಪ್ಪ ಕೂಡ ಪ್ರಚಾರ ನಡೆಸಲಿದ್ದಾರೆ. ಇತ್ತೀಚೆಗಷ್ಟೇ ಬಿಜೆಪಿ ಸೇರಿರುವ ನಟಿ ಖುಷ್ಭೂ ಕೂಡ ಅವರ ಪರ ಇಂದು ಪ್ರಚಾರ ನಡೆಸಲು ಮುಂದಾಗಿದ್ದಾರೆ. ಅಷ್ಟೇ ಅಲ್ಲ ನಾಳೆಯಿಂದ ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಮುಂದಾಗಿದ್ದಾರೆ.
ಮುನಿರತ್ನ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉತ್ತಮ ಸ್ನೇಹವನ್ನು ಹೊಂದಿದ್ದು, ಈ ಹಿನ್ನಲೆ ದರ್ಶನ್ ಆರ್ಆರ್ನಗರ ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಮುಂದಾಗಿದ್ದಾರೆ. ದರ್ಶನ್ ಪ್ರಚಾರದಿಂದ ಕ್ಷೇತ್ರ ಮತ್ತಷ್ಟು ರಂಗೇರಲಿದೆ. ನಾಳೆ ದರ್ಶನ್ ಆರ್ ಆರ್ ನಗರದಲ್ಲಿ ರೋಡ್ ಶೋ ನಡೆಸುವ ಮೂಲಕ ಮುನಿರತ್ನ ಪರ ಪ್ರಚಾರ ನಡೆಸಲಿದ್ದಾರೆ.
ಮುನಿರತ್ನ ನಿರ್ಮಾಣ ಮಾಡಿದ್ದ ಅದ್ಧೂರಿ ಬಜೆಟ್ನ ಕುರುಕ್ಷೇತ್ರದಲ್ಲಿ ನಟ ದರ್ಶನ್ ಮಿಂಚಿದ್ದರು. ಬಿಗ್ ಬಜೆಟ್ ಸಿನಿಮಾವಾದ ಇದರಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಕೂಡ ಅಭಿಮನ್ಯು ಪಾತ್ರನಿರ್ವಹಿಸಿದ್ದರು. ಚುನಾವಣಾ ಕಣದಲ್ಲಿ ಸದ್ಯ ಎದುರಾಳಿಗಳಾಗಿರುವ ನಿಖಿಲ್, ಮುನಿರತ್ನ ಜೊತೆಗಿನ ಸಂಬಂಧ ಚಿತ್ರ ಮುಗಿಯುತ್ತಿದ್ದಂತಲೇ ಮುಕ್ತಾಯವಾಗಿದೆ. ಈಗ ಅವರು ನಮ್ಮ ವಿರೋಧಿ ಅಭ್ಯರ್ಥಿ ಅವರ ವಿರುದ್ಧ ನಾನು ಪ್ರಚಾರ ಮಾಡುತ್ತೇನೆ ಎಂದಿದ್ದಾರೆ.
ನವೆಂಬರ್ 3 ರಂದು ಆರ್ ಆರ್ ನಗರ ಚುನಾವಣೆ ನಡೆಯಲಿದೆ. ನವೆಂಬರ್ 9 ರಂದು ಅಭ್ಯರ್ಥಿಗಳು ಯಾರ ಕೈ ಹಿಡಿದಿದ್ದಾರೆಂಬು ತಿಳಿಯುತ್ತದೆ.