Tuesday, June 15, 2021
No menu items!
Home Karnataka "735371" ಇದು ರಾಜ್ಯದಲ್ಲಿರುವ ಕೊರೋನಾ ಸೋಂಕಿತರು…!!!!

“735371” ಇದು ರಾಜ್ಯದಲ್ಲಿರುವ ಕೊರೋನಾ ಸೋಂಕಿತರು…!!!!

ಬೆಂಗಳೂರು: ಮಾರಕ ಚೀನಿ ಕೋರಸ್ ಹಾವಳಿ ರಾಜ್ಯದಲ್ಲಿ ಸದ್ಯ ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಆದರೆ ನಮ್ಮ ಜನಕ್ಕೆ ಮಾತ್ರ ಇದೊಂದು ಸಾಮಾನ್ಯ ಜ್ವರದಂತೆ ಭಾಸವಾಗತೊಡಗಿದೆ. ಆದ್ದರಿಂದ ಯಾರೂ ಕೂಡಾ ಕೊರೋನಾ ಬಗ್ಗೆ ತಲೆಕೆಡಿಸಕೊಂಡಂತೆ ಕಾಣುತ್ತಿಲ್ಲ ಮತ್ತು ಸರ್ಕಾರದ ರೂಲ್ಸ್‌ಗಳಿಗೂ ಕವಡೆ ಕಾಸಿನ ಕಿಮ್ಮತ್ತು ಕೊಡುತ್ತಿಲ್ಲ. ಜೇಬಿಗೆ ಕತ್ತರಿ ಬೀಳುವ ಭಯದಿಂದ ಕೆಲವರಾದರೂ ಮಾಸ್ಕ್ ಧರಿಸುತ್ತಿದ್ದರಾದರೂ , ಸಾಮಾಜಿಕ ಅಂತರ ಮರೆತೇ ಹೋದಂತಿದೆ.ಯಾಕೀ ಈ ಪೀಠಿಕೆ ಅಂದಿರಾ,ಕೊರೋನಾ ಅಂಕಿ ಅಂಶಗಳನ್ನು ನೀವೂ ಗಮನಿಸಿ.

ಆದರೆ ಈ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಬಿಡುಗಡೆ ಮಾಡುತ್ತಿರುವ ಹೆಲ್ತ್ ಬುಲೆಟಿನ್ ಅತ್ತ ಕಣ್ಣು ಹಾಯಿಸಿದರೆ ನಿಮ್ಮ ಕಣ್ಣು ಕೆಂಪಾಗುವುದು ಖಂಡಿತ.
ಸದ್ಯ ಒಟ್ಟು ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆಯು 735371ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲೇ 9265 ಮಂದಿಗೆ ಕೊವಿಡ್-19 ಸೋಂಕು ಅಂಟಿಕೊಂಡಿರುವುದು ವೈದ್ಯಕೀಯ ತಪಾಸಣೆಯಲ್ಲಿ ಖಾತ್ರಿಯಾಗಿದೆ.
ಕೊವಿಡ್-19 ಸೋಂಕಿತ ಪ್ರಕರಣ ಸಂಬಂಧ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು , ಕರ್ನಾಟಕದಲ್ಲಿ ಒಂದೇ ದಿನ ಕೊರೊನಾವೈರಸ್ ಸೋಂಕಿಗೆ 75 ಜನರು ಪ್ರಾಣ ಬಿಟ್ಟಿದ್ದು, ಒಟ್ಟು ಸಾವಿನ ಸಂಖ್ಯೆ 10198ಕ್ಕೆ ಏರಿಕೆಯಾಗಿದೆ. ಕೊರೊನಾವೈರಸ್ ಒಟ್ಟು 735371 ಸೋಂಕಿತ ಪ್ರಕರಣಗಳ ಪೈಕಿ 611167 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ವರದಿ ತಿಳಿಸಿದೆ.

ಇನ್ನು ರಾಜ್ಯದಲ್ಲಿ ಒಟ್ಟು 9265 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 158, ಬಳ್ಳಾರಿ 275, ಬೆಳಗಾವಿ 297, ಬೆಂಗಳೂರು ಗ್ರಾಮಾಂತರ 344, ಬೆಂಗಳೂರು 4574, ಬೀದರ್ 19, ಚಾಮರಾಜನಗರ 97, ಚಿಕ್ಕಬಳ್ಳಾಪುರ 137, ಚಿಕ್ಕಮಗಳೂರು 97, ಚಿತ್ರದುರ್ಗ 162, ದಕ್ಷಿಣ ಕನ್ನಡ 292, ದಾವಣಗೆರೆ 82, ಧಾರವಾಡ 136, ಗದಗ 41, ಹಾಸನ 227, ಹಾವೇರಿ 66, ಕಲಬುರಗಿ 39, ಕೊಡಗು 160, ಕೋಲಾರ 93, ಕೊಪ್ಪಳ 60, ಮಂಡ್ಯ 212, ಮೈಸೂರು 614, ರಾಯಚೂರು 44, ರಾಮನಗರ 42, ಶಿವಮೊಗ್ಗ 83, ತುಮಕೂರು 341, ಉಡುಪಿ 119, ಉತ್ತರ ಕನ್ನಡ 192, ವಿಜಯಪುರ 128, ಯಾದಗಿರಿ 27 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಇಲಾಖೆ ತಿಳಿಸಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments