ಕಳೆದ ಕೆಲವು ತಿಂಗಳಿನಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರೀ ಏರುಮುಖವಾಗಿತ್ತು. ದಿನಕ್ಕೆ 10 ಸಾವಿರದವರೆಗೆ ಸೋಂಕಿತರ ಸಂಖ್ಯೆ ಹೋಗುತ್ತಿತ್ತು. ಒಂದರಲ್ಲೇ 5 ಸಾವಿರ ಕೇಸ್ ಗಳು ದಾಖಲಾಗುತ್ತಿದ್ದವು. ಪ್ರತಿ ದಿನ ಬರುತ್ತಿದ್ದ ಕೇಸ್ ಗಳನ್ನ ನೋಡಿಯೇ ಜನ ಗಾಬರಿಯಾಗಿದ್ದು. ಅದೆಷ್ಟೋ ದಿನಗಳ ಮೇಲೆ ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಾ ಬರುತ್ತಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಇವತ್ತು 5018 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 7,70,604 ಕ್ಕೆ ಏರಿಕೆಯಾಗಿದೆ.
ಅದರಲ್ಲಿ ಬೆಂಗಳೂರು 2481, ಒಟ್ಟು ಸೋಂಕಿತರ ಸಂಖ್ಯೆ 3,10,021 ಕ್ಕೆ ಏರಿಕೆಯಾಗಿದೆ. ಇವತ್ತು ಒಂದೇ ದಿನ ಬೆಂಗಳೂರಿನಲ್ಲಿ 17 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 3542 ಮಂದಿ ಮೃತಪಟ್ಟಿದ್ದಾರೆ. 2363 ಮಂದಿ ಇವತ್ತು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 2,41,942 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 64,536 ಸಕ್ರಿಯ ಪ್ರಕರಣಗಳಿವೆ.
ಉಳಿದಂತೆ ತುಮಕೂರು 253, ಚಿಕ್ಕಬಳ್ಳಾಪುರ 193, ಬಳ್ಳಾರಿ 186, ಬೆಂ.ಗ್ರಾಮಾಂತರ 173, ಮೈಸೂರು 151, ಮಂಡ್ಯ 130, ದಕ್ಷಿಣ ಕನ್ನಡ 107, ಚಿತ್ರದುರ್ಗ 106, ಕೊಪ್ಪಳ 106, ಹಾಸನ 105, ದಾವಣಗೆರೆ 104, ಉಡುಪಿ 101 ಕೇಸ್ ಗಳು ದಾಖಲಾಗಿವೆ.
ರಾಜ್ಯದಲ್ಲಿ ಇಂದು 64 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಇದುವರೆಗೆ 10,542 ಜನ ಸೋಂಕಿತರು ಮೃತಪಟ್ಟಿದ್ದಾರೆ. ಇಂದು ಒಂದೇ ದಿನ 8005 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇದುವರೆಗೆ 6,53,829 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 1,06,214 ಸಕ್ರಿಯ ಪ್ರಕರಣಗಳಿವೆ.