Wednesday, June 16, 2021
No menu items!
Home Karnataka ಮೈಸೂರಿನಲ್ಲಿ ಮಾಲ್ ಗಳಲ್ಲೂ ಶುರುವಾಯ್ತು ಕೊರೊನಾ ಟೆಸ್ಟ್..!

ಮೈಸೂರಿನಲ್ಲಿ ಮಾಲ್ ಗಳಲ್ಲೂ ಶುರುವಾಯ್ತು ಕೊರೊನಾ ಟೆಸ್ಟ್..!

ಮೈಸೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ಆರಂಭದಲ್ಲಿ ಹೆಚ್ಚಾಗಿ ಆನಂತರ ಸಂಪೂರ್ಣವಾಗಿ ಕಡಿಮೆಯಾಗಿತ್ತು. ಗ್ರೀನ್ ಝೋನ್ ಎಂಬ ಹೆಗ್ಗಳಿಕೆಯನ್ನು ಪಡೆದಿತ್ತು. ಅದಾದ ನಂತರ ಮತ್ತೆ ಅರಮನೆ ನಗರಿಯಲ್ಲಿ ಕೊರೊನಾ ವೈರಸ್ ಹೆಚ್ಚಾಗಿದ್ದು, ಆತಂಕಕ್ಕೆ ಕಾರಣವಾಗಿದೆ. ಜಿಲ್ಲೆಗೆ ನೂತನ ಡಿಸಿಯಾಗಿ ನೇಮಕವಾದ ರೋಹಿಣಿ ಸಿಂಧೂರಿಯವರು ಕೂಡ ಕೊರೊನಾ ನಿಯಂತ್ರಣಕ್ಕೆ ಪಣತೊಟ್ಟಿದ್ದಾರೆ.

ಈ ನಿಟ್ಟಿನಲ್ಲಿ ಎರಡನೇ ಹಂತದ ಕೊರೊನಾ ಅಲೆಯಿಂದ ಮೈಸೂರಿಗರನ್ನು ರಕ್ಷಿಸಲು ಕೋವಿಡ್ ಟೆಸ್ಟ್ ಸಂಖ್ಯೆ ಹೆಚ್ಚಿಸಿದೆ. ಅಲ್ಲದೆ ಒಂದೇ ದಿನದಲ್ಲಿ ಕೋವಿಡ್ ಟೆಸ್ಟ್ ಫಲಿತಾಂಶ ಪ್ರಕಟಿಸಲು ಕ್ರಮ ಕೈಗೊಳ್ಳ ಲಾಗಿದ್ದು, ನಾಳೆಯಿಂದ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಕೋಟಿ ರೂ. ಮೌಲ್ಯದ `ಲಿಕ್ವಿಡ್ ಹ್ಯಾಂಡಲಿಂಗ್ ಸಿಸ್ಟಮ್ ಯಂತ್ರದ ಮೂಲಕ ಟೆಸ್ಟ್ ಆರಂಭಿಸಲಾಗುತ್ತಿದೆ.

ಒಟ್ಟಾರೆ ಒಂದು ದಿನ ದಲ್ಲಿ 4 ಸಾವಿರ ಕೊರೊನಾ ಸೋಂಕಿತರ ಸ್ಯಾಂಪಲ್ ಅನ್ನು ಪರೀಕ್ಷಿಸಿ, ಫಲಿತಾಂಶ ನೀಡುವ ವ್ಯವಸ್ಥೆ ಮೈಸೂರಲ್ಲಿ ಚಾಲ್ತಿಯಲ್ಲಿದೆ. ಇದೀಗ ಕೊರೊನಾ ಸೋಂಕಿತರನ್ನು ಪತ್ತೆಹಚ್ಚಿ ತ್ವರಿತಗತಿ ಯಲ್ಲಿ ಚಿಕಿತ್ಸೆ ನೀಡಿ, ಅಪಾಯದಿಂದ ಪಾರು ಮಾಡುವುದರೊಂದಿಗೆ ಸೋಂಕು ಹರಡುವಿಕೆ ತಡೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇದೀಗ ಮಾಲ್ಗಳಲ್ಲೂ ಕೋವಿಡ್-19 ಟೆಸ್ಟ್ ನಡೆಸಲು ಮುಂದಾಗಿದೆ.

ಪ್ರಾಥಮಿಕ ಹಂತದಲ್ಲಿ ನಜ್ಹರ್ ಬಾದ್ನಲ್ಲಿರುವ ಫೋರಂ ಮಾಲ್ ಹಾಗೂ ಮಾಲ್ ಆಫ್ ಮೈಸೂರ್ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ವಾರಾಂತ್ಯ ರಜೆ ದಿನಗಳಲ್ಲಿ ಶಾಪಿಂಗ್ಗಾಗಿ ಮಾಲ್ಗಳಿಗೆ ಹೆಚ್ಚಿನ ಜನರು ಬರುವುದರಿಂದ ಸೋಂಕು ಹರಡಬಹುದೆಂಬ ಆತಂಕ ವ್ಯಕ್ತವಾದ ಹಿನ್ನೆಲೆಯಲ್ಲಿ ಮಾಲ್ಗಳ ಸಿಬ್ಬಂದಿಗಳಿಗೆ ಮೊದಲ ಹಂತ ದಲ್ಲಿ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಮಾಲ್ಗಳಲ್ಲಿ ಹೆಚ್ಚು ಜನರ ಸಂಪರ್ಕದಲ್ಲಿ ಸಿಬ್ಬಂದಿ ಇರುವುದರಿಂದ ಮೊದಲು ಸಿಬ್ಬಂದಿಗೆ ಟೆಸ್ಟ್ ಮಾಡಿದ ನಂತರ ಶಾಪಿಂಗ್ಗೆ ಬರುವ ಸಾರ್ವ ಜನಿಕರಿಗೆ ಟೆಸ್ಟ್ ನಡೆಸಲಾಗಿದೆ.

ವಿವಿಧೆಡೆ ಕೊರೊನಾ ಸೋಂಕು ಹರಡುವಿಕೆಯಲ್ಲಿ ಶಾಪಿಂಗ್ ಮಾಲ್ಗಳು ಪ್ರಮುಖ ಸ್ಥಳವಾಗಿ ಗುರುತಿಸಿಕೊಂಡಿರುವುದರಿಂದ ಮೈಸೂರಲ್ಲಿ ಇದೀಗ ಮಾಲ್ ಗಳಲ್ಲಿನ ಸಿಬ್ಬಂದಿಗಳಿಗೆ ಹಾಗೂ ಖರೀದಿಗಾಗಿ ಬರುವ ಸಾರ್ವ ಜನಿಕರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಮೈಸೂರಲ್ಲಿ 22 ಸ್ಥಳಗಳಲ್ಲಿ ಕೋವಿಡ್ ಟೆಸ್ಟ್ ನಡೆಸಲಾಗುತ್ತಿದೆ. ಇದೀಗ ವಾರಾಂತ್ಯ ರಜೆ ದಿನದಂದು ಮಾಲ್ಗಳು ಟೆಸ್ಟ್ ಕೇಂದ್ರವಾಗಲಿದೆ

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments