ಬೆಂಗಳೂರು : ಕೊರೊನಾ ಸಂಕಷ್ಟದಿಂದ ಮುಚ್ಚಿದ್ದ ಕಾಲೇಜು ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ. ನವೆಂಬರ್ 17 ರಿಂದ ಆರಂಭವಾಗಲಿದೆ ಎಂದು ಅಶ್ವತ್ಥ ನಾರಾಯಾಣ್ ತಿಳಿಸಿದ್ದಾರೆ.
ಮೊದಲಿಗೆ ಡಿಗ್ರಿ ಕಾಲೇಜು, ಇಂಜಿನಿಯರಿಂಗ್, ಡಿಪ್ಲೋಮಾ ಕಾಲೇಜು ಗಳನ್ನು ಆರಂಭ ಮಾಡಲಾಗುವುದು ಎಂದು ತಿಳಿಸಿದರು.
ಯುಜಿಸಿ ಗೈಡ್ ಲೈನ್ ಮೂಲಕ ನವೆಂಬರ್ 17 ರಿಂದ ಆರಂಭ ಮಾಡಲಾಗುತ್ತದೆ. ಮೊದಲಿಗೆ ಪದವಿ, ಇಂಜಿನಿಯರಿಂಗ್, ಡಿಪ್ಲೋಮಾ ಕಾಲೇಜು ಗಳು ಓಪನ್ ಆಗಲಿವೆ. ವಿದ್ಯಾರ್ಥಿಗಳು ಹಾಸ್ಟೆಲ್ ಗಳಲ್ಲಿ ಇರುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ನೇರವಾಗಿ ಕಾಲೇಜಿಗೆ ಬಂದು ಕಲಿಯುವವರಿಗೆ ಅವಕಾಶ ನೀಡಲಾಗಿದೆ. ಕಾಲೇಜಿಗೆ ಬರದೇ ಇರುವವರಿಗೆ ಆನ್ ಲೈನ್ ನಲ್ಲಿ ಕ್ಲಾಸ್ ನಡೆಸಲಾಗುತ್ತದೆ ಎಂದು ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ.
ಇನ್ನು ಕಾಲೇಜಿಗೆ ಬರುವುದು ಬಿಡುವುದನ್ನು ವಿದ್ಯಾರ್ಥಿಗಳ ನಿರ್ಧಾರಕ್ಕೆ ಬಿಟ್ಟಿದ್ದಾರೆ. ವಿದ್ಯಾರ್ಥಿಗಳಿಗೆ ಇಷ್ಟವಿದ್ದರೆ ಕಾಲೇಜಿಗೆ ಬಂದು ಕಲಿಯಬಹುದು. ಇಲ್ಲವಾದರೇ ಆನ್ ಲೈನ್ ಕ್ಲಾಸ್ ನ್ನು ಆಯ್ಕೆ ಮಾಡಿಕೊಳ್ಳಬಹುದು. ಪೋಷಕರ ಅನುಮತಿ ಕೂಡ ಕಡ್ಡಾಯವಾಗಿದೆ ಎಂದು ತಿಳಿಸಿದ್ದಾರೆ.