ಬೆಂಗಳೂರು: ಹತ್ರಾಸ್ ಗ್ಯಾಂಗ್ ರೇಪ್ ಪ್ರಕರಣ ಭಾರೀ ಕೋಲಾಹಲವೆಬ್ಬಿಸುತ್ತಿರುವ ಬೆನ್ನಲ್ಲೇ, ಸಾಮಾಜಿಕ ತಾಲದಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಮಾಗಡಿಯ ಕುದೂರು ಬಳಿ ನಡೆದಿದ್ದ ವಿದ್ಯಾರ್ಥಿನಿ ಹೇಮಲತಾ ನಾಪತ್ತೆ ಹಾಗೂ ಕೊಲೆ ಪ್ರಕರಣದ ತನಿಖೆಯನ್ನು ಗ್ರಾಮಾಂತರ ಎಸ್ಪಿ ರವಿ ಡಿ. ಚನ್ನಣ್ಣನವರ್ ಅವರಿಗೆ ವಹಿಸಲಾಗಿದೆ.
ರಾಮನಗರ ಎಸ್ ಪಿ ಗಿರೀಶ್ ಅವರಿಗೆ ಕೊರೊನಾ ಸೋಂಕು ತಗುಲಿರುವುದರಿಂದ ಡಿ. ಚನ್ನಣ್ಣನವರಿಗೆ ಈ ತನಿಖೆಯನ್ನು ವಹಿಸಲಾಗಿದೆ. ಕಳೆದ ಅ.8ರಂದು ಸಂಜೆ ಬಿಕಾಂ ಮೊದಲ ವರ್ಷದ ವಿದ್ಯಾರ್ಥಿನಿ ಹೇಮಲತಾ ನಾಪತ್ತೆಯಾಗಿ ಮರುದಿನ ಆಕೆಯ ಮೃತದೇಹ ಜಮೀನಿನಲ್ಲಿ ಮಣ್ಣಿನಲ್ಲಿ ಹೂತ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಹೇಮಲತಾ ಬಟ್ಟೆಗಳು ಬೇರೆ ಕಡೆ ಪತ್ತೆಯಾಗಿತ್ತು. ಶವವನ್ನು ಎಳೆದು ತಂದು ಹೂತು ಹಾಕಿರುವುದು ಖಚಿತವಾಗಿತ್ತು, ಶವದ ಹಣೆ ಭಾಗದಲ್ಲಿ ಗಾಯದ ಗುರುತುಗಳು ಪತ್ತೆಯಾಗಿದ್ದವು. ಆದ್ದರಿಂದ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ.
ಹೇಮಲತಾ ಪೋಷರು ಆಕೆಯ ಪ್ರಿಯಕರ ಪುನೀತ್ ಮೇಲೆ ಅನುಮಾ ವ್ಯಕ್ತಪಡಿಸಿದ್ದಾರೆ.ಅನ್ಯ ಜಾತಿಯ ಯುವಕನನ್ನು ಹೇಮಲತಾ ಪ್ರೀತಿಸುತ್ತಿದ್ದಳು. ಆದ್ದರಿಂದ, ಇದು ಮರ್ಯಾದಾ ಹತ್ಯಯೇ ಎಂದು ಸಹ ತನಿಖೆ ನಡೆಸಲಾಗುತ್ತಿದೆ. ದೊಡ್ಡಪ್ಪನ ಜಮೀನನಲ್ಲಿ ಶವ ಸಿಕ್ಕಿರುವುದು ಹಲವು ಅನುಮಾಕ್ಕೆ ಕಾರಣವಾಗಿದೆ.
ಸಾಮಾಜಿಕ ತಾಲತಾಣಗಳಲ್ಲಿ ಹೇಮಲತಾ ಸಾವಿನ ಕುರಿತು ಹಲವಾರು ಪೋಸ್ಟ್ಗಳನ್ನು ಹಾಕಲಾಗುತ್ತಿದೆ. ಸಾವಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಲಾಗುತ್ತಿದೆ.