ದುಬೈ: ಇಲ್ಲಿ ನಡೆಯುತ್ತಿರುವ ನಡೆಯುತ್ತಿರುವ 13 ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಾವಳಿ ರೋಚಕ ಘಟ್ಟ ತಲುಪುತ್ತಿದೆ. ಯಾವ ತಂಡ ಪ್ಲೇ ಆಫ್ ಹಂತ ಪ್ರವೇಶಿಸಲಿದೆ ಎಂಬುದನ್ನು ಅಂದಾಜಿಸಲೂ ಅಸಾಧ್ಯವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಈ ಆವೃತ್ತಿಯಿಂದ ಹೊರನಡೆದಿದ್ದರೆ, ಮುಂಬೈ ಇಂಡಿಯನ್ಸ್ ತಂಡ ಮಾತ್ರ ತನ್ನ ಪ್ಲೇ ಆಫ್ ಹಂತ ಖಚಿತಪಡಿಸಿಕೊಂಡಿದೆ. ಉಳಿದಂತೆ ಎಲ್ಲಾ ತಂಡಗಳು ತಮ್ಮ ಹಾದಿಯನ್ನ ಕಠಿಣಗೊಳಿಸಿಕೊಂಡಿದ್ದು ಮುಂದಿನ ಹಂತ ತಲುಪಬೇಕಾದರೆ ಮುಂದಿನ ಪಂದ್ಯವೊಂದನ್ನ ಗೆಲ್ಲಲೇಬೇಕಾದ ಅಡಕತ್ತರಿಯಲ್ಲಿ ಸಿಲುಕಿವೆ.
ಇಂದು ಕನ್ನಡಿಗ ಕೆ.ಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲವೆನ್ ಪಂಜಾಬ್ ತಂಡಕ್ಕೆ ಎಂ.ಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿದ್ದು ಪಂಜಾಬ್ ಪಡೆ ಇಂದಿನ ಪಂದ್ಯ ಗೆಲ್ಲಲೇ ಬೇಕಾದ ಇಕ್ಕಟ್ಟಿನಲ್ಲಿ ಸಿಲುಕಿದೆ.ಇಂದಿನ ಪಂದ್ಯ ಗೆದ್ದರಷ್ಟೇ ಪಂಜಾಬ್ ಪಡೆಗೆ ಮುಂದಿನ ಹಾದಿ ಸುಗಮವಾಗಲಿದೆ.
ಮೊದಲು ಸತತ ಸೋಲುಗಳಿಂದ ಕಂಗೆಟ್ಟು ನಂತರ ಪುಟಿದೆದ್ದ ಪಂಜಾಬ್ ಪಡೆ ಆಡಿರುವ 13 ಪಂದ್ಯಗಳಲ್ಲಿ 6 ರಲ್ಲಿ ಗೆದ್ದು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿದೆ. ಆದರೆ ಇಂದಿನ ಪಂದ್ಯ ಗೆದ್ದರಷ್ಟೇ ಪಂಜಾಬ್ ತಂಡದ ಮುಂದಿನ ಹಾದಿ ಸುಗಮವಾಗಿರಲಿದೆ.
ಇತ್ತ ಪ್ಲೇ ಆಫ್ ಪ್ರವೇಶವನ್ನ ಇದೀಗಾಗಲೇ ಕಳೆದುಕೊಂಡಿರುವ ಮೊದಲ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ಪಂಜಾಬ್ ಜೊತೆ ಸೆಣೆಸಲಿದೆ. ಒಂದು ವೇಳೆ ಪಂಜಾಬ್ ತಂಡ ಗೆದ್ದರೂ ಪಂಜಾಬ್ ತಂಡ ಪ್ಲೇ ಆಫ್ ಪ್ರವೇಶಕ್ಕಾಗಿ ಇತರ ತಂಡಗಳ ಫಲಿತಾಂಶಕ್ಕಾಗಿ ಕಾಯಬೇಕಾಗುತ್ತದೆ. ಒಂದು ವೇಳೆ ಸೋತರೆ ಚೆನ್ನೈ ತಂಡದ ಜೊತೆ ಎರಡನೇ ತಂಡವಾಗಿ ಅಧಿಕೃತವಾಗಿ ಐಪಿಲ್ ಟೂರ್ನಿಯಿಂದ ಹೊರನಡೆಯಲಿದೆ.
ಅಬುದಾಭಿಯ ಕ್ರೀಡಾಂಗಣದಲ್ಲಿ ಇಂದಿನ ಪಂದ್ಯ ನಡೆಯಲ್ಲಿದ್ದು, ಈ ಕ್ರೀಡಾಂಗಣದಲ್ಲಿ ನಡೆದ ಇತ್ತೀಚಿನ ಪಂದ್ಯಗಳಿಗೆ ಹೋಲಿಸಿದರೆ ಮೊದಲು ಫೀಲ್ಡ್ ಮಾಡುವ ತಂಡಕ್ಕೆ ಗೆಲುವಿನ ಅವಕಾಶ ಸಿಕ್ಕಿದೆ.ಆದ್ದರಿಂದ ಇಂದಿನ ಪಂದ್ಯದಲ್ಲಿ ಟಾಸ್ ಕೂಡಾ ಪ್ರಮುಖ ಪಾತ್ರ ವಹಿಸಲಿದೆ.ರಾತ್ರಿ ವೇಳೆಯಲ್ಲಿ ಇಲ್ಲಿ ಇಬ್ಬನಿಯ ಅಂಶ ಕೂಡಾ ಜಾಸ್ತಿ ಇರಲಿದ್ದು ಇದು ಕೂಡಾ ಆಟದಲ್ಲಿ ಪ್ರಮುಖ ಪಾತ್ರ ವಹಿಸಿದನ್ನ ನಾವು ಈ ಹಿಂದಿನ ಪಂದ್ಯಗಳಿಂದ ಗಮನಿಸಬಹುದಾಗಿದೆ.