ರಾಮನಗರ: ಇಂದು ಬೆಳಿಗ್ಗೆ ದಿ.ಮುತ್ತಪ್ಪ ರೈ ಮನೆಗೆ ಸಿಸಿಬಿ ದಾಳಿ ನಡೆಸಲಾಗಿದೆ. ಮುತ್ತಪ್ಪ ರೈಗೆ ಸೇರಿದ ಎರಡು ಮನೆಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ. ದಿ.ಮುತ್ತಪ್ಪ ರೈ ಪುತ್ರನಿಗೆ ಡ್ರಗ್ಸ್ ಕೇಸ್ ವಿಚಾರವಾಗಿ ಸಿಸಿಬಿ ನೋಟಿಸ್ ನೀಡಿದ್ದು ಈ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಎಸಿಬಿ ವೇಣುಗೋಪಾಲ್ ನೇತೃತ್ವದಲ್ಲಿ ಸಿಸಿಬಿ ಶೋಧ ಕಾರ್ಯ ನಡೆದಿದ್ದು, ಬಿಡದಿ ಮತ್ತು ಬೆಂಗಳೂರಿನ ವೈಯಾಲಿಕಾವಲ್ ಮನೆ ಮೇಲೆ ಸಿಸಿಬಿ ದಾಳಿ ಮಾಡಲಾಗಿದೆ. ಮುತ್ತಪ್ಪ ರೈ ಮಗ ರಿಕ್ಕಿ ಕುರಿತು ಡ್ರಗ್ ಪೆಡ್ಲರ್ ಮಾಹಿತಿ ನೀಡಿದ ಹಿನ್ನೆಲೆ ಡ್ರಗ್ ಪೆಡ್ಲರ್ಗಳೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಬೆಳ್ಳಂಬೆಳಗ್ಗೆ ಸುಮಾರು 6 ಗಂಟೆಗೆ ಸಿಸಿಬಿ ರಿಕ್ಕಿ ರೈ ಮನೆಗೆ ದಾಳಿ ನಡೆಸಿದ್ದು, ಏಳು ಕಾರುಗಳಲ್ಲಿ ಸಿಸಿಬಿ ಅಧಿಕಾರಿಗಳು ಬಂದಿದ್ದರು. ನಾವು ಪೆÇಲೀಸರು, ಯಾರನ್ನೂ ಒಳ ಬಿಡಬೇಡಿ ಎಂದು ಸೆಕ್ಯುರಿಟಿ ಬಳಿ ಹೇಳಿ ಹೋಗಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಈಚೆಗಷ್ಟೇ ಮೃತಪಟ್ಟಿರುವ ಮುತ್ತಪ್ಪ ರೈ ಅವರ ಮಗ ಡ್ರಗ್ಸ್ ಜಾಲದ ನಂಟು ಹೊಂದಿದ್ದಾರೆ ಎನ್ನುವ ಗುಮಾನಿಯ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ರಿಕ್ಕಿ ಮಂಗಳೂರು ಹಾಗೂ ಮುಂಬೈ ಡ್ರಗ್ ಪೆಡ್ಲರ್ಗಳ ಜತೆ ಸಂಪರ್ಕ ಹೊಂದಿದ ಶಂಕೆ ಇದೆ ಎಂದು ತಿಳಿದು ಬಂದಿದೆ.