Saturday, December 4, 2021
No menu items!
Home Bharata ಕಂಜಾರ್ಭತ್ ಸಮುದಾಯದಲ್ಲಿದೆಯಂತೆ ಕನ್ಯತ್ವ ಪರೀಕ್ಷಿಸುವ ಪದ್ಧತಿ: ಅದ್ಕೆ ಇವ್ರು ಮಾಡುವ ಕೆಲಸ ಏನು ಗೊತ್ತಾ..?

ಕಂಜಾರ್ಭತ್ ಸಮುದಾಯದಲ್ಲಿದೆಯಂತೆ ಕನ್ಯತ್ವ ಪರೀಕ್ಷಿಸುವ ಪದ್ಧತಿ: ಅದ್ಕೆ ಇವ್ರು ಮಾಡುವ ಕೆಲಸ ಏನು ಗೊತ್ತಾ..?

ಮುಂಬೈ: ಮೂಢನಂಬಿಕೆಯಿಂದ ನಮ್ಮ ಸಮಾಜದಲ್ಲಿ ಕ್ರೂರ ಘಟನೆಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ. ಕೆಲವೊಂದು ಸಂಪ್ರದಾಯಗಳು ನಡೆಸಿಕೊಂಡು ಬರುತ್ತಿರುವ ಪದ್ಧತಿ ಹೆಣ್ಣಿಗೆ ಸಾಕಷ್ಟು ನೋವುಂಟು ಮಾಡುತ್ತವೆ. ಆದ್ರೂ ಕೂಡ ಆ ಪದ್ಧತಿಯನ್ನ ಸರಿ ಮಾಡಿಕೊಳ್ಳುವ ಉಸಾಬರಿಗೆ ಹೋಗಿಲ್ಲ. ಇಂಥದ್ದೇ ಹೀನಾಯ ಪದ್ಧತಿಯೊಂದು ಕಂಜಾರ್ಭತ್ ಸಮುದಾಯದಲ್ಲಿ ಇನ್ನು ಜೀವಂತವಾಗಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ವಾಸಿಸುತ್ತಿರುವ ಸಮುದಾಯದ ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಡುವ ಮುನ್ನ ಕನ್ಯತ್ವ ಪರೀಕ್ಷೆ ಮಾಡುತ್ತಾರೆ. ಆ ಪರೀಕ್ಷೆ ಹೇಗೆ ಮಾಡ್ತಾರೆ ಗೊತ್ತಾ..? ಕೇಳಿದ್ರೆ ಒಂದು ಕ್ಷಣ ಕೋಪ ಬರುತ್ತೆ.
ಮದುವೆ ದಿನದ ರಾತ್ರಿ ವರ ಮತ್ತು ವಧುವನ್ನು ಕೋಣೆಯಲ್ಲಿ ಕೂಡಿ ಹಾಕಿ ಬಾಗಿಲ್ ಬಂದ್ ಮಾಡುತ್ತಾರೆ. ಅದಕ್ಕೂ ಮುನ್ನ ಬಿಳಿ ಬಣ್ಣದ ಬೆಡ್‌ಶೀಟನ್ನು ಮಲಗುವ ಬೆಡ್ ಮೇಲೆ ಹಾಕಿರಲಾಗುತ್ತದೆ. ಬಳಿಕ ಯಾರೂ ಒಳಗೆ ಅಥವಾ ಹೊರಗೆ ಬರಲು ಸಾಧ್ಯವಾಗದಂತೆ ಎಲ್ಲ ಜನರು ಕೋಣೆಯ ಹೊರಗೆ ಕುಳಿತುಕೊಳ್ಳುತ್ತಾರೆ. ವರ ಮತ್ತು ವಧುವಿನ ಮೊದಲ ರಾತ್ರಿ ಮುಗಿದ ಬಳಿಕ ಜನರು ಕೋಣೆಯೊಳಗೆ ಹೋಗಿ ಬೆಡ್‌ಶೀಟ್‌ ನೋಡುತ್ತಾರೆ. ಒಂದು ವೇಳೆ ಬೆಡ್‌ಶೀಟ್‌ನಲ್ಲಿ ರಕ್ತದ ಕಲೆ ಏನಾದರೂ ಇದ್ದರೆ ಜನರ ಪ್ರಕಾರ ವಧು ಕನ್ಯೆ ಎಂದರ್ಥ.
ಕೆಲವೊಂದು ಕಾರಣಗಳಿಂದ ವಧು ಮೊದಲೇ ಕನ್ಯತ್ವ ಕಳೆದುಕೊಂಡು, ಬೆಡ್‌ ಶೀಟ್‌ನಲ್ಲಿ ಏನಾದರೂ ರಕ್ತದ ಕಲೆ ಇರದೇ ಹೋದರೆ, ವಧುವಿಗೆ ತುಂಬಾ ಕಿರುಕುಳ ನೀಡಲಾಗುತ್ತದೆ. ಸ್ವಾತಂತ್ರ್ಯ ಬಂದು ಅನೇಕ ವರ್ಷಗಳೇ ಕಳೆದಿದ್ದರೂ ಇಂದಿಗೂ ಕೆಟ್ಟ ಆಚರಣೆಯಿರುವುದು ದುರ್ದೈವದ ಸಂಗತಿಯೇ. ಆದರೆ, ಸರ್ಕಾರಕ್ಕೂ ಸಹ ಈ ಬಗ್ಗೆ ಇಂದಿಗೂ ತಿಳಿದಿಲ್ಲ ಎಂಬುದು ನಂಬಲು ಸಾಧ್ಯವೇ? ಒಂದು ವೇಳೆ ಯಾಕೆ ಹೀಗೆ ಮಾಡುತ್ತೀರಾ ಎಂದು ಪ್ರಶ್ನಿಸಿದರೆ, ಬರುವ ಉತ್ತರ ಅದು ನಮ್ಮ ಆಚರಣೆ ಎನ್ನುತ್ತಾರೆ. ಮನುಷ್ಯ ಸಂಪೂರ್ಣ ಶಿಕ್ಷಿತನಾಗುವವರೆಗೂ ಇಂತಹ ಆಚರಣೆಗಳು ತಪ್ಪಿದ್ದಲ್ಲ.
Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments