Saturday, July 24, 2021
No menu items!
Home Karnataka ಮುಖದ ಮೇಲಿನ ಬಂಗಿಗೆ ಇಲ್ಲಿದೆ ಟಿಪ್ಸ್

ಮುಖದ ಮೇಲಿನ ಬಂಗಿಗೆ ಇಲ್ಲಿದೆ ಟಿಪ್ಸ್

ಎಲ್ಲರಿಗೂ ಮುಖದ ಸೌಂದರ್ಯ ತುಂಬಾ ಮುಖ್ಯವಾಗುತ್ತದೆ. ಮುಖದ ಮೇಲೆ ಒಂದು ಕಪ್ಪು ಕಲೆಯಾದರೂ ತುಂಬಾ ಬೇಸರವಾಗುತ್ತದೆ. ಅಂಥದ್ರಲ್ಲಿ ಮುಖದ ಮೇಲೆ ಬಂಗು ಬಂದರೆ, ಸೌಂದರ್ಯ ಎಷ್ಟು ಹಾಳಾಗುತ್ತೆ. ಇದಕ್ಕೆ ಒಂದಷ್ಟು ಟಿಪ್ಸ್ ಇಲ್ಲಿದೆ.

* ಒಂದು ಮಧ್ಯಮ ಗಾತ್ರದ ಟೊಮೊಟೊವನ್ನು ತೆಗೆದುಕೊಂಡು ಅದರ ರಸವನ್ನು ಹಿಂಡಿ ಶೋಧಿಸಿಕೊಳ್ಳಿ. ನಂತರ ಆ ರಸಕ್ಕೆ ಒಂದು ಚಮಚೆ ನಿಂಬೆಹಣ್ಣಿನ ರಸವನ್ನು ಬೆರೆಸಿ ಚೆನ್ನಾಗಿ ಕಲಸಿ. ಅದನ್ನು ಮುಖಕ್ಕೆ ಹಚ್ಚಿಕೊಂಡು ಇಪ್ಪತ್ತು ನಿಮಿಷಗಳ ನಂತರ ಬೆಚ್ಚಗಿನ ನೀರಿನಲ್ಲಿ ಮುಖ ತೊಳೆದುಕೊಳ್ಳಿರಿ.

* ಲೊಳೆಸರದ – Alovera ತಿರುಳನ್ನು ತೆಗೆದು ಬಿಸಿಲಿನಲ್ಲಿ ಐದು ನಿಮಿಷ ಒಣಗಿಸಿ ಇಡೀ. ನಂತರ ಒಣಗಿದ ತಿರುಳಿಗೆ ಹಲವು ಹನಿ ನಿಂಬೆ ರಸವನ್ನು ಬೆರೆಸಿ ಆ ಮಿಶ್ರಣವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಳ್ಳಿ ಹಾಗೂ ಹದಿನೈದು ನಿಮಿಷಗಳ ನಂತರ ತೊಳೆಯಿರಿ. ಇದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

* ಈರುಳ್ಳಿಯಲ್ಲಿ ಸೂಕ್ಷ್ಮಾಣು ವಿರೋಧಿ ಗುಣಗಳು ( anti bacterial ) ಯಥೇಚ್ಚವಾಗಿರುವುದರಿಂದ ಕಲೆಗಳನ್ನು ಕಡಿಮೆ ಮಾಡುವಲ್ಲಿ ಇದು ಬಹಳ ಪರಿಣಾಮಕಾರಿ. ಒಂದು ಈರುಳ್ಳೀಯನ್ನು ತೆಗೆದುಕೊಂಡು ಸಣ್ಣಗೆ ಹೆಚ್ಚಿ, ನಂತರ ಆ ಹೊಳುಗಳನ್ನು ಮಿಕ್ಸಿಮಾಡಿ ಅದರಿಂದ ರಸವನ್ನು ಹಿಂಡಿ ತೆಗೆದುಕೊಳ್ಳಿ. ರಸವನ್ನು ನಿಮ್ಮ ಮುಖಕ್ಕೆ ಹಚ್ಚಿಕೊಂಡು ಕೆಲವು ನಿಮಿಷಗಳ ನಂತರ ನೀರಿನಿಂದ ತೊಳೆಯಿರಿ.

* ಶ್ರೀಗಂಧವನ್ನು – ಗಂಧದ ಚೆಕ್ಕೆ ಸ್ವಲ್ಪ ಪನ್ನೀರಿನ ( Rose Water) ಜೊತೆ ಎರಡು ಚಮಚದಷ್ಟು ತೇಯ್ದುಕೊಂಡು ಕಲೆಗಳಿರುವ ಜಾಗಕ್ಕೆ ಅಥವಾ ಇಡೀ ಮುಖಕ್ಕೆ ಹಚ್ಚಿಕೊಳ್ಳಿ. ಈ ಮಿಶ್ರಣವನ್ನು ತಿಳಿಯಾಗಿ ಮಾಡಿಕೊಳ್ಳುವುದರಿಂದ ಅದು ಒಣಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತದೆ ಹಾಗಾಗಿ ಹೆಚ್ಚು ಲಾಭವನ್ನು ಪಡೆಯಬಹುದು. ಮುಖಕ್ಕೆ ಹಚ್ಚಿದ ಮಿಶ್ರಣ ಒಣಗಿದ ನಂತರ ನೀರಿನಿಂದ ತೊಳೆಯಿರಿ.

* ಒಂದು ಚಿಟಿಕೆ ಅರಿಶಿನವನ್ನು ತೆಗೆದುಕೊಂಡು ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನಂತರ ಈ ಮಿಶ್ರಣವನ್ನು ಕಲೆಗಳಿರುವ ಕಡೆಗೆ ಹಚ್ಚಿರಿ. ಈ ಮಿಶ್ರಣ ನಿಮ್ಮ ಕಲೆಗಳನ್ನು ಬಹಳ ಸಮರ್ಥವಾಗಿ ನಿವಾರಿಸುತ್ತದೆ. ಈ ಮಿಶ್ರಣವನ್ನು ದಿನವೂ ಬಳಸುವುದರಿಂದ ಒಂದು ವಾರದಲ್ಲೇ ಫಲಿತಾಂಶವನ್ನು ಕಾಣಬಹುದು.

* ಒಂದು ಸಣ್ಣ ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ರುಬ್ಬಿಕೊಳ್ಳಿ ಹಾಗೂ ರುಬ್ಬಿಕೊಂಡ ಆಲೂಗಡ್ದೆಗೆ ಸ್ವಲ್ಪ ಜೇನುತುಪ್ಪವನ್ನು ಬೆರಸಿ ಈ ಮಿಶ್ರಣವನ್ನು ಕಲೆಗಳ ಮೇಲೆ ಹಚ್ಚಿಕೊಳ್ಳಿ ಅಥವಾ ಇಡೀ ಮುಖಕ್ಕೂ ಹಚ್ಚಿಕೊಳ್ಳಬಹುದು. ಹದಿನೈದು ನಿಮಿಷಗಳ ನಂತರ ಮಿಶ್ರಣವನ್ನು ನೀರಿನಿಂದ ತೊಳೆಯಬಹುದು. ಆಲ್ಲದೆ ಒಂದು ಅಲೂಗೆಡ್ಡೆ ಹೋಳನ್ನು ತೆಗೆದುಕೊಂಡು ( ಸಿಪ್ಪೆ ಸಮೇತ ) ಕಲೆಗಳ ಮೇಲೆ ನೇರವಾಗಿ, ಮೃದುವಾಗಿ ಉಜ್ಜಿಕೊಂಡು ಹದಿನೈದು ನಿಮಿಷಗಳಲ್ಲಿ ಬಿಟ್ಟು ತೊಳೆಯಬಹುದು. ಆಲೂಗಡ್ಡೆಯನ್ನು ಬಳಸುವ ಮತ್ತೊಂದು ವಿಧಾನವೆಂದರೆ ಅಲೂಗೆಡ್ಡೆಯನ್ನು ಮಿಕ್ಸಿ ಮಾಡಿ ರಸವನ್ನು ತೆಗೆದು ಅದನ್ನು ನೇರವಾಗಿ ಕಲೆಗಳ ಮೇಲೆಯೇ ಹಚ್ಚಿ. ಅರ್ದಘಂಟೆ ಬಿಟ್ಟು ಮುಖ ತೊಳೆಯಿರಿ. ಇದರಿಂದ ಬಂಗು ( ಕಪ್ಪು pigmentation ) ನಿವಾರಣೆಯಾಗುತ್ತೆ.
-ಮಂಜುನಾಥ್ ಪ್ರಸಾದ್

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments