Tuesday, October 26, 2021
No menu items!
Home Bharata ಬಾಲಿವುಡ್ ಬಿಗ್ "ಬಿ" ಗಿಂದು ಹುಟ್ಟುಹಬ್ಬದ ಸಂಭ್ರಮ

ಬಾಲಿವುಡ್ ಬಿಗ್ “ಬಿ” ಗಿಂದು ಹುಟ್ಟುಹಬ್ಬದ ಸಂಭ್ರಮ

ಮುಂಬೈ : ಬಾಲಿವುಡ್ ಬಿಗ್ ‘ಬಿ’,   ಅಮಿತಾಭ್ ಬಚ್ಚನ್  ಅವರಿಗೆ ಇಂದು  78ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ.
ಬರ್ತಡೇಗೂ ಎರಡು ದಿನ ಮುಂಚೆ ಅಷ್ಟೇ ಸೌತ್ ಇಂಡಿಯಾದ ದೊಡ್ಡ ಪ್ರಾಜೆಕ್ಟ್‌ವೊಂದಕ್ಕೆ ಸಹಿ ಮಾಡಿದ್ದಾರೆ. 78ನೇ ವಯಸ್ಸಿನಲ್ಲಿ ಬಿಟೌನ್‌ನ ಬಹುಬೇಡಿಕೆಯ ಹಾಗೂ ಅತ್ಯಂತ ಬ್ಯುಸಿ ನಟ ಅಮಿತಾಭ್.
ಬಹುಶಃ ಭಾರತೀಯ ಸಿನಿಮಾರಂಗದಲ್ಲಿ ಇತಿಹಾಸದಲ್ಲಿ 78 ವರ್ಷದ ಬಳಿಕವೂ ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ಸೂಪರ್ ಸ್ಟಾರ್ ಹೀರೋ ಅಮಿತಾಭ್ ಇರಬಹುದು. ಈಗಲೂ ಅವರ ಕೈಯಲ್ಲಿ ಐದಕ್ಕಿಂತ ಹೆಚ್ಚು ಪ್ರಾಜೆಕ್ಟ್‌ಗಳಿವೆ.
ತಮ್ಮ ಸುದೀರ್ಘವಾದ ಈ ಸಿನಿಮಾ ಪಯಣದಲ್ಲಿ ಅಮಿತಾಭ್ ಬಚ್ಚನ್ ಎಲ್ಲ ಅನುಭವಗಳನ್ನು ಕಂಡಿದ್ದಾರೆ. ಯಶಸ್ಸು, ಸೋಲು, ಅವಮಾನ, ಆರೋಗ್ಯ ಸಮಸ್ಯೆ, ವಿವಾದ, ಟೀಕೆ, ಇಂಡಸ್ಟ್ರಿಯಿಂದ ಬ್ರೇಕ್ ಹೀಗೆ ಈ ಎಲ್ಲದರ ನಡುವೆಯೂ ಯಶಸ್ವಿ ಕಲಾವಿದನಾಗಿ ಜೀವಿಸುತ್ತಿದ್ದಾರೆ.
ಹಿಂದಿ, ತೆಲುಗು ಹಾಗೂ ಕನ್ನಡದಲ್ಲೂ  ನಟಿಸಿದ್ದ ಅಮಿತಾಭ್ ಬಚ್ಚನ್ ಈಗ ತಮಿಳಿಗೂ ಪ್ರವೇಶ ಮಾಡಿದ್ದಾರೆ. ತಮಿಳ್‌ವಣ್ಣನ್ ನಿರ್ದೇಶನ ‘ಉನ್ನತ ಮನಿಧನ್’ ಚಿತ್ರದಲ್ಲಿ ಅಮಿತಾಭ್ ನಟಿಸುತ್ತಿದ್ದಾರೆ.
ಇನ್ನು ಬರ್ತಡೆಗೂ ಎರಡು ದಿನಗಳ ಹಿಂದೆಯಷ್ಟೇ ಅಮಿತಾಭ್ ಬಚ್ಚನ್  ಇನ್ನು ಹೆಸರಿಡದ ಹೊಸ  ಚಿತ್ರವೊಂದಕ್ಕೆ ಸಹಿ ಮಾಡಿದ್ದು, ತೆಲುಗು ನಟ ಪ್ರಭಾಸ್ ಜೊತೆ ನಟಿಸುತ್ತಿದ್ದಾರೆ. ಈ ಸಿನಿಮಾಗೆ ದಿಪೀಕಾ ಪಡುಕೋಣೆ ನಾಯಕಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments