ಮುಂಬೈ: ಖ್ಯಾತ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ತಮ್ಮ ಅಂಗಾಂಗ ದಾನ ಮಾಡಲು ಸಿದ್ಧವಾಗಿದ್ದಾರೆ. ಈಗಾಗಲೇ ದಾನ ಮಾಡಲು ಪ್ರತಿಜ್ಞೆ ಮಾಡಿದ್ದು, ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ನೈಸರ್ಗಿಕ ವಿಪತ್ತು ಅಥವಾ ಯಾವುದೇ ಕಷ್ಟಕರ ಪರಿಸ್ಥಿತಿಯ ಸಂದರ್ಭಗಳಲ್ಲಿ ಮುಂದೆ ಬಂದು ಅನೇಕ ರೀತಿಯ ಸಹಾಯಹಸ್ತ ಚಾಚುತ್ತಿರುವ ಅಮಿತಾಬ್ ಇದೀಗ ತಮ್ಮ ಅಂಗವನ್ನು ದಾನ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅಂಗದಾನ ಮಾಡುವ ಬಗ್ಗೆ ಅವರು ಟ್ವಿಟರ್ ಖಾತೆಯಲ್ಲಿ ಘೋಷಣೆ ಮಾಡಿದ್ದು, ಇದಕ್ಕೆ ಲಕ್ಷಾಂತರ ಮಂದಿ ಮೆಚ್ಚುಗೆ ಸೂಚಿಸಿದ್ದಾರೆ.
ಅಂಗದಾನ ಮಾಡಲು ನಾನು ಪ್ರತಿಜ್ಞೆ ಮಾಡಿರುವೆ. ಹೀಗಾಗಿ ಅದರ ಪವಿತ್ರತೆಯನ್ನು ಸಾರುವ ಸಲುವಾಗಿಯೇ ಈ ಹಸಿರು ರಿಬ್ಬನ್ ಧರಿಸಿದ್ದೇನೆ ಎಂದಿದ್ದಾರೆ. ತಮ್ಮ ಫೋಟೋ ಒಂದನ್ನು ಅಪ್ಲೋಡ್ ಮಾಡಿರುವ ಅಮಿತಾಭ್ ಅವರು, ಕೋಟ್ ಮೇಲೆ ಹಸಿರು ರಿಬ್ಬನ್ ಧರಿಸಿದ್ದಾರೆ.
T 3675 – I am a pledged ORGAN DONOR .. I wear the green ribbon of its sanctity !!🙏 pic.twitter.com/EIxUJzkGU6
— Amitabh Bachchan (@SrBachchan) September 29, 2020