ಬೆಂಗಳೂರು : ದೇಶವೇ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅಂದ್ರೆ ಅದು ಯಶ್ ಅಭಿನಯದ ಕೆಜಿಎಫ್ ಸಿನಿಮಾ. ಆ ಸಿನಿಮಾ ರಿಲೀಸ್ ಆಗಿ ಎರಡು ವರ್ಷಗಳೇ ಆಗ್ತಾ ಬರ್ತಿದೆ. ಚಾಪ್ಟರ್ 2 ಗಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಕೊರೊನಾ ಎಂಬ ಮಾರಾಣಾಂತಿಕ ವೈರಸ್ ಬಂದು ಸಿನಿಪ್ರೇಕ್ಷಕರ ಆಸೆಗೆ ತಣ್ಣೀರೆರಚಿದೆ. ಸದ್ಯ ಅನ್ ಲಾಕ್ ಪ್ರಕ್ರಿಯೆಯಲ್ಲಿ ಥಿಯೇಟರ್ ಗಳು ಓಪನ್ ಆಗಿದ್ದು, ದೊಡ್ಡ ದೊಡ್ಡ ಸ್ಟಾರ್ ಚಿತ್ರಗಳು ಇನ್ನು ರಿಲೀಸ್ ಆಗಿಲ್ಲ. ಆದ್ರೆ ಈ ಮಧ್ಯೆ ಕೆಜಿಎಫ್ 2 ಸಿನಿಮಾದ ಟೀಸರ್ ಗಾಗಿ ಟ್ವಿಟ್ಟರ್ ನಲ್ಲಿ ಅಭಿಯಾನ ಶುರು ಮಾಡಿಕೊಂಡಿದ್ದಾರೆ.
Every Yash Boss Fans To #KGFTeam@prashanth_neel @Karthik1423 #WeNeedKGF2Teaser #KGFChapter2 pic.twitter.com/PQDUzNgWtZ
— ಕನ್ನಡಿಗ ರಾಕೇಶ್ ಗೌಡ (@RakhiYashCult) October 23, 2020
ಹೌದು, ಯಶ್ ಅಭಿನಯದ ಕೆಜಿಎಫ್ 2 ಸಿನಿಮಾಗಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ. ಇತ್ತೀಚೆಗಷ್ಟೆ ನಾಯಕಿ ಶ್ರೀನಿಧಿ ಶೆಟ್ಟಿ ಅವರ ಹುಟ್ಟುಹಬ್ಬದಂದು ಉಡುಗೊರೆಯಾಗಿ ಒಂದು ಪೋಸ್ಟರ್ ಬಿಡುಗಡೆ ಮಾಡಿದ್ದರು. ಶೂಟಿಂಗ್ ಆರಂಭವಾದಾಗ ಮಾತ್ರ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತಿದೆ. ಅದನ್ನು ಬಿಟ್ಟರೆ ಮತ್ತಾವುದೇ ಸರ್ಪ್ರೈಸ್ ನೀಡಿಲ್ಲ. ಇದರಿಂದಾಗಿ ಯಶ್ ಅಭಿಮಾನಿಗಳು ತಾಳ್ಮೆ ಕಳೆದುಕೊಂಡು ಈಗ ಟ್ವಿಟರ್ನಲ್ಲಿ ಮತ್ತೆ ಅಭಿಯಾನ ಆರಂಭಿಸಿದ್ದಾರೆ. ಟ್ವಿಟರ್ನಲ್ಲಿ #WeNeedKGF2Teaser ಎಂಬ ಅಭಿಯಾನ ಶುರು ಮಾಡಿದ್ದಾರೆ.