Tuesday, June 15, 2021
No menu items!
Home Kasaragod ಕಾಸರಗೋಡು: ಸೋಮವಾರ 56, ಈವರೆಗೆ ಒಟ್ಟು 7250 ಮಂದಿಗೆ ಕೋವಿಡ್

ಕಾಸರಗೋಡು: ಸೋಮವಾರ 56, ಈವರೆಗೆ ಒಟ್ಟು 7250 ಮಂದಿಗೆ ಕೋವಿಡ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 56 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 52 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. ಇಬ್ಬರು ವಿದೇಶದಿಂದ, ಇಬ್ಬರು ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ 7250 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಅವರು ಹೇಳಿದರು.

ಪಾಸಿಟಿವ್ ಆದವರ ಲೆಕ್ಕ: ಕಾಸರಗೋಡು ನಗರಸಭೆ 6, ಮಧೂರು ಪಂಚಾಯತ್ 6, ಮಂಗಲ್ಪಾಡಿ ಪಂಚಾಯತ್ 9, ಬದಿಯಡ್ಕ ಪಂಚಾಯತ್ 2, ಮಂಜೇಶ್ವರ ಪಂಚಾಯತ್ 2, ಪೈವಳಿಕೆ ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 1, ಮುಳಿಯಾರು ಪಂಚಾಯತ್ 1, ಮೊಗ್ರಾಲ್ ಪುತ್ತೂರು ಪಂಚಾಯತ್ 1, ವರ್ಕಾಡಿ ಪಂಚಾಯತ್ 1, ಚೆಂಗಳ ಪಂಚಾಯತ್ 1, ಕಾಞಂಗಾಡ್ ನಗರಸಭೆ 3, ಉದುಮಾ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 6, ಅಜಾನೂರು ಪಂಚಾಯತ್ 5, ಪಡನ್ನ ಪಂಚಾಯತ್ 1, ಪಿಲಿಕೋಡ್ ಪಂಚಾಯತ್ 1, ವಲಿಯ ಪರಂಬ ಪಂಚಾಯತ್ 1, ಈಸ್ಟ್ ಏಳೇರಿ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 4, ಕೋಡೋಂ-ಬೇಳೂರು ಪಂಚಾಯತ್ 1 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.

135 ಮಂದಿಗೆ ಕೋವಿಡ್ ನೆಗೆಟಿವ್: ಜಿಲ್ಲೆಯಲ್ಲಿ ಸೋಮವಾರ 135 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಕಾಸರಗೋಡು ನಗರಸಭೆ 17, ಮಧೂರು ಪಂಚಾಯತ್ 2, ಚೆಮ್ನಾಡ್ ಪಂಚಾಯತ್ 5, ಚೆಂಗಳ ಪಂಚಾಯತ್ 1, ಮಂಗಲ್ಪಾಡಿ ಪಂಚಾಯತ್ 1, ಮುಳಿಯಾರು ಪಂಚಾಯತ್ 12, ದೇಲಂಪಾಡಿ 5, ಕುಂಬಳೆ ಪಂಚಾಯತ್ 2, ಕುತ್ತಿಕೋಲು ಪಂಚಾಯತ್ 2, ಕಾಞಂಗಾಡ್ ನಗರಸಭೆ 16, ಅಜಾನೂರು ಪಂಚಾಯತ್ 21, ಪಳ್ಳಿಕ್ಕರೆ ಪಂಚಾಯತ್ 5, ಕಳ್ಳಾರ್ ಪಂಚಾಯತ್ 4, ಪಿಲಿಕೋಡ್ ಪಂಚಾಯತ್ 1, ಉದುಮಾ ಪಂಚಾಯತ್ 4, ಮಡಿಕೈ ಪಂಚಾಯತ್ 4, ನೀಲೇಶ್ವರ ನಗರಸಭೆ 7, ಕಿನಾನೂರು-ಕರಿಂದಲಂ ಪಂಚಾಯತ್ 3, ಕೋಡೋಂ-ಬೇಳೂರು ಪಂಚಾಯತ್ 3, ವಲಿಯಪರಂಬ ಪಂಚಾಯತ್ 1, ವೆಸ್ಟ್ ಏಳೇರಿ ಪಂಚಾಯತ್ 1, ಆಲಕ್ಕೋಡ್ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 6, ಕಯ್ಯೂರು-ಚೀಮೇನಿ ಪಂಚಾಯತ್ 6, ಚೆರುವತ್ತೂರು ಪಂಚಾಯತ್ 3, ಈಸ್ಟ್ ಏಳೇರಿ ಪಂಚಾಯತ್ 2 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.

5288 ಮಂದಿ ಮೇಲೆ ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 5288 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. 4052 ಮಂದಿ ಮನೆಗಳಲ್ಲಿ, 1236 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 557 ಮಂದಿ ನಿಗಾ ಪ್ರವೇಶಿಸಿದ್ದಾರೆ. 512 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 243 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 47 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.

7250 ಮಂದಿಗೆ ಕೋವಿಡ್ ಪಾಸಿಟಿವ್: ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 7250 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 6168 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದೆ. 621 ಮಂದಿ ವಿದೇಶದಿಂದ, 461 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. 5322 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಸದರಿ 1872 ಮಂದಿ ಕೋವಿಡ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 56 ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments