ಕೋಲಾರ: ರಾಜ್ಯದಲ್ಲಿ ಇವಿಎಂ ಯಂತ್ರಗಳನ್ನು ಬ್ಯಾನ್ ಮಾಡಬೇಕೆಂದು ಕಾಂಗ್ರೆಸ್ ಪಕ್ಷ ಹೇಳುತ್ತಲಿದೆ. ಈ ಬೆನ್ನಲ್ಲೇ ಕಾಂಗ್ರೆಸ್ ನವರೇ ಆದ ರಮೇಶ್ ಕುಮಾರ್ ಇವಿಎಂ ಯಂತ್ರದ ಪರವಾಗಿ ಮಾತನಾಡಿದ್ದಾರೆ.
ಕೋಲಾರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇವಿಎಂ ಯಂತ್ರದ ಮೂಲಕವೇ ನಾನು ಕೂಡ ಗೆದ್ದಿದ್ದೇನೆ. ಬಿಹಾರ ಎಲೆಕ್ಷನ್ ಹಾಗೂ ರಾಜ್ಯ ಬೈ ಎಲೆಕ್ಷನ್ ನಲ್ಲಿ ಜನರೇ ಕಾಂಗ್ರೆಸ್ ಬೇಡವೆಂದು ತೀರ್ಪು ನೀಡಿದ್ದಾರೆ ಎಂದು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ದುಡುಕಿ ಮಾತನಾಡುವುದು, ಆವೇಷದಿಂದ ಮಾತಾಡುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಇವಿಎಂ ದೋಷದ ಬಗ್ಗೆ ಹೇಳಿಕೆ ಕೊಡುವುದು ಸಮಂಜಸವಲ್ಲ ಎಂದಿದ್ದಾರೆ.