Friday, September 24, 2021
No menu items!
Home Bharata ಮೋದಿ ಮಹತ್ವದ ನಿರ್ಧಾರ; ನೋಟ್ ಬ್ಯಾನ್ ಗೆ ಇಂದಿಗೆ ನಾಲ್ಕು ವರ್ಷ

ಮೋದಿ ಮಹತ್ವದ ನಿರ್ಧಾರ; ನೋಟ್ ಬ್ಯಾನ್ ಗೆ ಇಂದಿಗೆ ನಾಲ್ಕು ವರ್ಷ

ನವದೆಹಲಿ: 2016 ನ.8 ರಂದು ಮಿತ್ರೋ ಎಂದು ಮಾಧ್ಯಮದ ಮುಂದೆ ಬಂದು ನಿಂತ ಪ್ರಧಾನಿ ನರೇಂದ್ರ ಮೋದಿ, ದೇಶದ ಎಲ್ಲಾ ಪ್ರಜೆಗಳ ಅದರಲ್ಲೂ ಕಪ್ಪು ಹಣ ಶೇಖರಿಸಿಟ್ಟಿದ್ದವರ ಎದೆ ಬಡಿತ ಹೆಚ್ಚಿಸಿದ್ದರು. ಕೇವಲ ಕೆಲವೇ ಸೆಕೆಂಡ್ ಗಳ ಅವರ ಭಾಷಣ ಭಾರತದ ಆರ್ಥಿಕ ದಿಕ್ಕನ್ನೇ ಬದಲಾಯಿಸಿತ್ತು. ಹೌದು ಪ್ರಧಾನಿ ಮೋದಿ ಅವತ್ತು ಅಂತಹದೊಂದು ಮಹತ್ವದ ನಿರ್ಧಾರ ಘೋಶಿಸಿದ್ದರು.

ಅಂದು ಸಾಯಂಕಾಲ 8 ಗಂಟೆಗೆ ಮಹತ್ವದ ನಿರ್ಧಾರ ಪ್ರಕಟಿಸಿ ನೋಟ್ ಬ್ಯಾನ್ ಘೋಷಣೆ ಮಾಡಿದ್ದರು.ಏಕಾಏಕಿ ಜಾರಿಗೆ ತಂದ ನಿಯಮ ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗಿತ್ತು. ಜನಸಾಮಾನ್ಯರು ತತ್ತರಿಸಿದ್ದರು. ನೋಟ್ ಬ್ಯಾನ್ ಆರಂಭದ ದಿನಗಳಲ್ಲಿ ಹಣದ ಕೊರತೆ, ಚಿಲ್ಲರೆ ಸಮಸ್ಯೆ ತೀವ್ರತರವಾಗಿ ಕಾಡಿತ್ತು. ನಂತರ ಹಂತ, ಹಂತವಾಗಿ ಪರಿಸ್ಥಿತಿ ಸುಧಾರಿಸಿತ್ತು.ಬ್ಯಾಂಕ್ ಗಳ ಮುಂದೆ ಎಟಿಎಂಗಳ ಮುಂದೆ ಜನ ದಿನವಿಡೀ ಕ್ಯೂ ನಿಂತಿದ್ದನ್ನ ಇನ್ನೂ ಮರೆತಿಲ್ಲ.

ಈ ಕುರಿತಂತೆ ಇಂದು ಹೇಳಿಕೆ ಬಿಡುಗಡೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಡಿಮಾನಿಟೈಸೇಷನ್​ ಕಪ್ಪು ಹಣವನ್ನು ಕಡಿಮೆ ಮಾಡುವಲ್ಲಿ, ತೆರಿಗೆ ಪಾವತಿ ಹೆಚ್ಚಿಸುವಲ್ಲಿ ಹಾಗೂ ಪಾರದರ್ಶಕತೆಯನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ, ತೆರಿಗೆ ಪಾವತಿಸದೇ ಇರುವ 13 ಸಾವಿರ ಕೋಟಿ ರೂ.ಗೂ ಮಿಕ್ಕಿದ ಸೆಲ್ಫ್​ ಅಸೆಸ್​​ಮೆಂಟ್​ ಟ್ಯಾಕ್ಸ್​ ತೆರಿಗೆ ಇದರಿಂದಾಗಿಯೇ ಸಂಗ್ರಹವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments