Friday, September 24, 2021
No menu items!
Home Karnataka ಮೈಸೂರಿನಲ್ಲೊಂದು ಶ್ರೀಗಂಧದ ಮ್ಯೂಸಿಯಂ

ಮೈಸೂರಿನಲ್ಲೊಂದು ಶ್ರೀಗಂಧದ ಮ್ಯೂಸಿಯಂ

ಮೈಸೂರು: ಕರ್ನಾಟಕಕ್ಕೆ ಶ್ರೀಗಂಧದ ನಾಡು ಎಂಬ ಹೆಸರು ಬರಲು ಕಾರಣ ಮೈಸೂರು ಸಂಸ್ಥಾನ ನೀಡಿದ ಕೊಡುಗೆ. ಹಾಗಾಗಿ ರಾಜ್ಯದ ಶ್ರೀಗಂಧ ದೇಶಕ್ಕೆ ಮಾದರಿ. ಇನ್ನು ಸಂಸ್ಥಾನದ ರಾಜರು ದೇಶದಲ್ಲಿಯೇ ಮೊದಲ ಬಾರಿಗೆ ಮೈಸೂರಿನಲ್ಲಿ ಆರಂಭಿಸಲಾಗಿದ್ದ ಶ್ರೀಗಂಧದ ಡಿಪೋವನ್ನು ಇದೀಗ ಮ್ಯೂಸಿಯಂಯನ್ನಾಗಿ ಮಾಡಲಾಗುತ್ತದೆ. ಈ ಮೂಲಕ ರಾಜ್ಯದ ಶ್ರೀಗಂಧದ ವಿಸ್ತಾರವನ್ನು ಮತ್ತಷ್ಟು ಪಸರಿಸಲು ತಯಾರಿ ನಡೆಸಿಕೊಳ್ಳಲಾಗುತ್ತಿದೆ.

1908ರಲ್ಲಿ ಮೈಸೂರು ಮಹಾರಾಜರು ಇಲ್ಲಿ ಶ್ರೀಗಂಧದ ಡಿಪೋ ತೆರೆಯುವ ಮೂಲಕ ಹೆಗ್ಗುರುತು ಸ್ಥಾಪಿಸಿದರು. ಇದು ದೇಶದಲ್ಲೇ ಮೊದಲ ಶ್ರೀಗಂಧದ ಡಿಪೋ ಎಂಬ ಖ್ಯಾತಿ ಕೂಡ ಗಳಿಸಿತು. ಈಗ ಇದೇ ಡಿಪೋ ಅರಮನೆಯಲ್ಲಿ ಶ್ರೀಗಂಧದ ಮ್ಯೂಸಿಯಂ ಆಗಿ ಪರಿವರ್ತನೆಯಾಗುತ್ತಿದೆ. ಸಾರ್ವಜನಿಕರಲ್ಲಿ ಶ್ರೀಗಂಧದ ಬಗ್ಗೆ ತಿಳಿವಳಿಕೆ ನೀಡುವುದು, ರೈತರಿಗೆ ಶ್ರೀಗಂಧವನ್ನು ಹೆಚ್ಚು ಹೆಚ್ಚು ಬೆಳೆಯುವಂತೆ ಪ್ರೇರೇಪಿಸುವುದು ಇದರ ಮೂಲಕ ಉದ್ದೇಶವಾಗಿದೆ.

ರೈತರು ಒಂದೇ ಒಂದು ಹೆಕ್ಟೇರ್​ನಲ್ಲಿ ಅಚ್ಚುಕಟ್ಟಾಗಿ ಶ್ರೀಗಂಧ ಬೆಳೆದರೆ ಆರ್ಥಿಕ ಅಭಿವೃದ್ಧಿ ಹೊಂದಲು ತುಂಬಾ ಸಹಾಯ ಆಗುತ್ತದೆ. ಜೊತೆಗೆ ವಿದೇಶಿ ವಿನಿಮಯವನ್ನು ಸಹ ಗಳಿಸಬಹುದು. ಈ ರೀತಿ ಒಂದು ಸಾರಿ ಶ್ರೀಗಂಧ ಬೆಳೆದರೆ ಅವರ ಜೀವನ ಮಟ್ಟವೂ ಸುಧಾರಿಸುತ್ತದೆ ಎನ್ನುತ್ತಾರೆ ಅರಣ್ಯ ಭವನದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್ ಸ್ವಾಮಿ.

ಶ್ರೀಗಂಧ ಮರ ಬಲಿತು ಕಟಾವಿಗೆ ಬಂದಾಗ ಅದರ ಒಳಗಡೆ ಇರುವ ಚೇಗಾದಲ್ಲಿ ಎಣ್ಣೆ ಅಂಶ ಇರುತ್ತದೆ. ಇದಕ್ಕೆ ತುಂಬಾ ಬೇಡಿಕೆ ಇದೆ. ಕೇರಳ, ತಮಿಳುನಾಡು, ಕರ್ನಾಟಕದಲ್ಲಿ ಹೆಚ್ಚಾಗಿ ಶ್ರೀಗಂಧ ಮರಗಳನ್ನು ಬೆಳೆಯುತ್ತಾರೆ. ಆದರೆ, ಅತ್ಯಂತ ಉತ್ಕೃಷ್ಟ ಶ್ರೀಗಂಧದ ಗುಣ ಹೊಂದಿರುವ ಮರ ಬೆಳೆಯುವುದು ಮೈಸೂರು ಭಾಗದಲ್ಲಿ ಮಾತ್ರ. ಪ್ರಪಂಚದ ಎಲ್ಲಿಯೂ ಸಿಗದ ಶ್ರೀಗಂಧ ಈ ಭಾಗದಲ್ಲಿ ಮಾತ್ರ ಸಿಗುತ್ತದೆ. ಹಾಗಾಗಿ ಮೈಸೂರನ್ನು ಶ್ರೀಗಂಧದ ಬೀಡು ಎಂದು ಕರೆಯುತ್ತಾರೆ. ಇದನ್ನು ಉಳಿಸಿಕೊಂಡು ಹೋಗುವ ಸಲುವಾಗಿ ಹಾಗೆಯೇ ನಶಿಸಿ ಹೋಗುತ್ತಿರುವ ಶ್ರೀಗಂಧದ ಬೆಳೆಯ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಈ ಶ್ರೀಗಂಧದ ಮ್ಯೂಸಿಯಂ ಆರಂಭಿಸಲಾಗುತ್ತಿದೆ ಎಂದು ಇದರ ಉದ್ದೇಶ ವಿವರಿಸಿದರು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments