Wednesday, October 27, 2021
No menu items!
Home Latest ದಂತಕಥೆ, ಕಾಲ್ಚೆಂಡಿನ ಮಾಂತ್ರಿಕ ದಿ।ಡಿಯಾಗೋ ಮರಡೋನಾ ಪುಟ್ಬಾಲ್ ಲೋಕದ ಬ್ಯಾಡ್ ಬಾಯ್..!

ದಂತಕಥೆ, ಕಾಲ್ಚೆಂಡಿನ ಮಾಂತ್ರಿಕ ದಿ।ಡಿಯಾಗೋ ಮರಡೋನಾ ಪುಟ್ಬಾಲ್ ಲೋಕದ ಬ್ಯಾಡ್ ಬಾಯ್..!

ಅರ್ಜೆಂಟೀನಾ ಪುಟ್ಬಾಲ್ ಲೋಕದ ದಂತಕಥೆ ಡಿಯಾಗೋ ಮರಡೋನಾ ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕಾಲ್ಚೆಂಡಿನ ಲೋಕದಲ್ಲಿ ಜಾದೂ ಲೋಕವನ್ನೇ ಸೃಷ್ಟಿ ಮಾಡಿದ್ದ ಪುಟ್ಬಾಲ್ ಲೋಕದ ದಿಗ್ಗಜನ ಮರಣಕ್ಕೆ ಪ್ರಂಪಚದ ಕ್ರೀಡಾಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಇತಿಹಾಸದಲ್ಲಿ ಐತಿಹಾಸಿಕ ಸಾಧನೆ ಮಾಡಿರುವ ಮರಡೋನಾರ ಬದುಕಲ್ಲಿ ಹಲವು ಸ್ವಾರಸ್ಯಕರ ಘಟನೆಗಳು, ವಿವಾದಾತ್ಮಕ ಘಟನೆಗಳು ನಡೆದು ಹೋಗಿದ್ದವು.ಕಡು ಬಡತನದಲ್ಲೇ ಬೆಳೆದು ಬಂದ ಅವರು ಬದಿಗಾಲಿನಲ್ಲೇ ಚೆಂಡುಗಳನ್ನು ಒದೆಯುತ್ತಾ ಫೆಬ್ರುವರಿ 27ರಂದು ಹಂಗೇರಿ ವಿರುದ್ಧ ಫುಟ್‌ಬಾಲ್ ಪಂದ್ಯವಾಡುವ ಮೂಲಕ ಅಂತರರಾಷ್ಟ್ರೀಯ ಪಂದ್ಯಗಳಿಗೆ ಪದಾರ್ಪಣೆ ಮಾಡಿದರು. ತದನಂತರ ಇವರ ಅಮೋಘ ಸಾಧನೆಗೆ ಫುಟ್‌ಬಾಲ್ ದೇವರೆಂದೇ ಮರಡೋನ ಕರೆಯಲ್ಪಟ್ಟರು.

ಫುಟ್​ಬಾಲ್ ಜಗತ್ತಿನ ಬ್ಯಾಡ್​ ಬ್ಯಾಯ್ ಎಂದೇ ಕರೆಸಿಕೊಳ್ತಿದ್ದ ಮರಡೋನಾ ಅವರನ್ನ ‘ದೋಷಪೂರಿತ ಪ್ರತಿಭೆ’ ಅಂದವರೂ ಇದ್ದಾರೆ. ಹೀಗಿದ್ದೂ ಅವರನ್ನ ಬೆಂಬಲಿಸುವವರ ಸಂಖ್ಯೆ ಮಾತ್ರ ಲೆಕ್ಕಕ್ಕೆ ಸಿಗಲ್ಲ. ಅದಕ್ಕೆ ಕಾರಣ ಅವರ ಮಿಂಚಿನ ಆಟ, ಅವರಿಗಿದ್ದ ಅತ್ಯದ್ಭುತ ಪ್ರತಿಭೆ.

1986ರಲ್ಲಿ ಅರ್ಜೆಂಟೀನಾ ಮತ್ತು ಇಂಗ್ಲೆಂಡ್ ನಡುವಿನ ಕ್ವಾರ್ಟರ್-ಫೈನಲ್ ಪಂದ್ಯದ ವೇಳೆ ಕೈಯಿಂದ ಗೋಲು ಹೊಡೆದು ವಿವಾದಾತ್ಮಕ ಗೋಲ್ ಒಂದನ್ನ ಗಳಿಸಿದರು. ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ವಿವಾದಾತ್ಮಕ ಗೋಲು ಇದಾಗಿದೆ ಅಂತಾ ಹೇಳಲಾಗುತ್ತದೆ.1982ರಲ್ಲಿ ಮಾದಕ ದ್ರವ್ಯ ವಸ್ತುಗಳನ್ನ ಸೇವನೆ ಮಾಡಿ ಸಿಕ್ಕಿಹಾಕಿಕೊಂಡರು. 1991ರಲ್ಲೂ ಸಿಕ್ಕಿಬಿದ್ದರು. ಇದರಿಂದ 15 ತಿಂಗಳ ಕಾಲ ನಿಷೇಧಕ್ಕೆ ಒಳಗಾದರು. ಅಲ್ಲದೇ 1994ರ ಫುಟ್​ಬಾಲ್ ವಿಶ್ವಕಪ್​​ನಲ್ಲಿ ಡ್ರಗ್ಸ್​ ಸೇವಿಸಿರೋದು ದೃಢಪಟ್ಟ ಹಿನ್ನೆಲೆಯಲ್ಲಿ ಅವರನ್ನ ಮನೆಗೆ ಕಳುಹಿಸಲಾಗಿತ್ತು.

ನವೆಂಬರ್ 11ರಿಂದ ಆಸ್ಪತ್ರೆಯಲ್ಲಿದ್ದ 60 ವರ್ಷದ ಮರಡೋನಾಗೆ ಕೆಲ ದಿನಗಳ ಹಿಂದಷ್ಟೇ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಇದರ ಮಧ್ಯೆ ನಿನ್ನೆ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments