Monday, June 14, 2021
No menu items!
Home Latest ಕೋಳಿ ಸಾಕಲು ಮುಂದಾದ ಎಂ ಎಸ್ ಧೋನಿ..!

ಕೋಳಿ ಸಾಕಲು ಮುಂದಾದ ಎಂ ಎಸ್ ಧೋನಿ..!

ಭೋಪಾಲ್: ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ಧೋನಿ ಈ ವರ್ಷ ವಿದಾಯವನ್ನು ಹೇಳಿದ್ದು ಈಗ ಐಪಿಎಲ್ನಲ್ಲಿ ಮಾತ್ರವೇ ಕಾಣಿಸಿಕೊಳ್ಳತ್ತಿದ್ದಾರೆ. ಐಪಿಎಲ್ 13ನೇ ಆವೃತ್ತಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಧೋನಿ ತವರಿಗೆ ಆಗಮಿಸಿದ್ದು, ಕೋಳಿ ಸಾಕಾಣಿಕೆ ಮಾಡಲು ನಿರ್ಧರಿಸಿದ್ದಾರೆ.

ತಮ್ಮ ಕೃಷಿ ಜಮೀನಿಗೆ ಧೋನಿ ಕಡಕ್ನಾಥ್ ತಳಿಯ 2 ಸಾವಿರ ಮರಿಗಳ ಖರೀದಿಗೆ ಈಗಾಗಲೇ ಆರ್ಡರ್ ಕೊಟ್ಟಿದ್ದಾರೆ. ಡಿಸೆಂಬರ್ 15ಕ್ಕೆ 2000 ಮರಿಗಳು ಧೋನಿ ಅವರ ಕೈಸೇರಲಿವೆ. ಕೋಳಿ ಸಾಕಾಣಿಕೆಗೆ ಮುಂದಾಗಿರುವ ಧೋನಿ ಕಡಕ್ನಾಥ್ ಕೋಳಿ ಸಂಶೋಧನ ಕೇಂದ್ರದ ನಿರ್ದೇಶಕರಾಗಿರುವ ಐಎಸ್ ತೋಮರ್ ಅವರನ್ನು ಸಂಪರ್ಕಿಸಿದ್ದಾರೆ. ಕೋಳಿ ಸಾಕಾಣಿಕೆ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.

ಜಬುವಾದ ಕಡಕ್ನಾತ್ ಕೋಳಿ ಸಂಶೋಧನಾ ಕೇಂದ್ರದ ನಿರ್ದೇಶಕ ಮಾಧ್ಯಮಗಳಿಗೆ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಆರಂಭದಲ್ಲಿ ಧೋನಿ ಗೆಳೆಯರ ಮೂಲಕ ತನ್ನನ್ನು ಸಂಪರ್ಕಿಸಿದ್ದರು. ಆದರೆ ಆ ಸಮದರ್ಭದಲ್ಲಿ ಕಳುಹಿಸಿಕೊಡಲು ಸಾಧ್ಯವಾಗದ ಕಾರಣ ತಾಂಡ್ಲಾದ ರೈತರನ್ನು ಸಂಪರ್ಕಿಸಲು ತಿಳಿಸಿದ್ದರು.

ಕಡಕ್ನಾಥ್ ಕೋಳಿಗಳು ದಪ್ಪವಾಗಿ ಬೆಳೆಯುತ್ತವೆ. ವಿಶೇಷವೆಂದರೆ ಈ ಕೋಳಿಗಳಲ್ಲಿ ಕೊಬ್ಬು ಇರುವುದಿಲ್ಲ. ನಾಲ್ಕು ತಿಂಗಳಲ್ಲಿ 1-1.8 ಕೆ.ಜಿವರೆಗೆ ಬೆಳೆಯುವ ಈ ಕೋಳಿಗಳು 1500-1800 ರೂಪಾಯಿಗೆ ಮಾರಾಟವಾಗುತ್ತವೆ. ಈ ಕೋಳಿಗಳು ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿರುತ್ತವೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments