ಬೆಂಗಳೂರು: ಕೆಜಿ ಹಳ್ಳಿ ಡಿಜೆ ಹಳ್ಳಿ ಗಲಭೆಯಲ್ಲಿ ಅಖಂಡ ಶ್ರೀನಿವಾಸ್ ಮನೆ ಧ್ವಂಸವಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಚಾರವಾಗಿ ಅಖಂಡ ಶ್ರೀನಿವಾಸ್ ಹೇಳಿಕೆ ನೀಡಿದ್ದರು. ಆ ಹೇಳಿಕೆಗೆ ಆಕ್ರೋಶಭರಿತರಾಗಿದ್ದ ಡಿ ಕೆ ಶಿವಕುಮಾರ್ ಎಲ್ಲೆಲ್ಲೋ ಹೇಳಿಕೆ ಕೊಡೋದು ಅಲ್ಲ. ನನ್ನ ಮನೆಗೆ ಅಥವಾ ಕೆಪಿಸಿಸಿ ಕಚೇರಿಗೆ ಬಂದು ನನ್ನನ್ನು ಭೇಟಿಯಾಗಬೇಕಿತ್ತು ಎಂದು ಹೇಳಿದ್ದರು. ಇದೀಗ ಡಿಕೆಶಿ ಅವರ ಮಾತಿಗೆ ಅಖಂಡ ಶ್ರೀನಿವಾಸ್ ಕೂಡ ತಿರುಗೇಟು ನೀಡಿದ್ದಾರೆ.
ನಾನು ಈ ಮೊದಲು ಎರೆಡೆರಡು ಬಾರಿ ಅವರ ಮನೆಗೆ ಭೇಟಿ ನೀಡಿದ್ದೆ. ನಾಳೆಯೂ ಅವರನ್ನು ಭೇಟಿ ಮಾಡುತ್ತೇನೆ. ಸಿದ್ದರಾಮಯ್ಯ, ಜಮೀರ್ ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಸುಟ್ಟಿರೋದು ನನ್ನ ಮನೆ. ದುಃಖ ಆಗುವುದಿಲ್ಲವಾ..? ನಮ್ಮ ಪಕ್ದ ಅಧ್ಯಕ್ಷರನ್ನು ಭೇಟಿ ಮಾಡಿ ನ್ಯಾಯ ಕೇಳುತ್ತೇನೆ ಎಂದಿದ್ದಾರೆ.
ನಿನ್ನೆ ರಾತ್ರಿ ಸಂಪತ್ ರಾಜ್ ಅರೆಸ್ಟ್ ಆಗಿದ್ದು, ಇಂದು ಬೆಳಗ್ಗೆ ಮಾತನಾಡಿದ್ದ ಅಖಂಡ ಶ್ರೀನಿವಾಸ್, ಪೊಲೀಸರು ಹಾಗೂ ಮಾಧ್ಯಮದವರ ಸಹಕಾರದಿಂದ ಆರೋಪಿಗಳು ಬಂಧನವಾಗಿದೆ. ಇದು ಸತ್ಯಕ್ಕಾದ ಗೆಲುವು. ತಪ್ಪು ಮಾಡಿದವರು ತಲೆ ಮರೆಸಿಕೊಂಡು ತಿರುಗುತ್ತಾರೆ. ಆದರೆ ಏನು ಮಾಡದವರು ನೇರವಾಗಿರುತ್ತಾರೆ. ಸಂಪತ್ ರಾಜ್ ವಿಚಾರದಲ್ಲಿ ಇದೇಕೋ ಉಲ್ಟಾ ಆಗಿದೆ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಡಿ ಕೆ ಶಿವಕುಮಾರ್, ಮನೆಗೆ ಬಂದು ಮಾತನಾಡಬೇಕು ಎಂದಿದ್ದರು.