Saturday, May 15, 2021
No menu items!
Home Entertainment ( Kan ) ನೀನು ನಮಗೆ ದೊಡ್ಡ ಸಮಸ್ಯೆ: ಮೆಗಾಸ್ಟಾರ್ ಚಿರಂಜೀವಿ

ನೀನು ನಮಗೆ ದೊಡ್ಡ ಸಮಸ್ಯೆ: ಮೆಗಾಸ್ಟಾರ್ ಚಿರಂಜೀವಿ

ಸೋನು ಸೂದ್ ಈಗ ಎಲ್ಲರ ನೆಚ್ಚಿನ ರಿಯಲ್ ಹೀರೋ. ಅವರ ಮಾಡಿದ ಸಹಾಯ ಸ್ಮರಾಣಾರ್ಥವಾಗಿ ಅವರಿಗೆ ಗುಡಿಯನ್ನೇ ಕಟ್ಟಿಸಿ ಪೂಜೆ ಮಾಡುತ್ತಿದ್ದಾರೆ. ಯಾಕಂದ್ರೆ ಕಷ್ಟದ ಸಮಯದಲ್ಲಿ ಸೋನು ಸೂದ್ ಮಾಡಿದ ಸಹಾಯ ಎಲ್ಲರು ನೆನೆಯುವಂತದ್ದೇ. ಈಗಲೂ ಸಹ ಕಷ್ಟ ಅಂದ್ರೆ ಎಂಥವರಿಗೂ ಈ ನಟ ಸಹಾಯ ಮಾಡಲು ಮುಂದಾಗುತ್ತಾರೆ. ಹೀಗಾಗಿ ಇವರ ಈ ಸಹಾಯ ಗುಣವೇ ಚಿತ್ರರಂಗದ ನಾಯಕರಿಗೆ ಸಂಕಷ್ಟ ತಂದೊಡ್ಡಿದೆ.

ಯಾಕಂದ್ರೆ ಸೋನು ಸೂದ್ ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದೇ ಖಳನಟನಾಗಿ. ರಿಯಲ್ ಲೈಫ್‌ನಲ್ಲಿ ಹೀರೋ ಆಗಿ ಕಾಣಿಸಿಕೊಂಡಿರುವ ಈ ನಟನಿಗೆ ತೆರೆಯ ಮೇಲೆ ಬೈದರೂ, ಹೊಡೆದರೂ ಜನ ಸಹಿಸಲ್ಲ. ಹೀಗಾಗಿ ಸಂಕಷ್ಟ ಎದುರಾಗಿದೆ. ಈ ಬಗ್ಗೆ ಮೆಗಾಸ್ಟಾರ್ ಚಿರಂಜೀವಿ ಸೋನು ಸೂದ್ ಅವರಿಗೆ ನೀವು ನಮಗೆ ದೊಡ್ಡ ಸಮಸ್ಯೆ ಆಗಿದ್ದೀರಿ ಎಂದು ಹೇಳಿದ್ದಾರೆ.

ಸೋನು ಸೂದ್ ಸದ್ಯ ಆಚಾರ್ಯ ಸಿನಿಮಾದಲ್ಲಿ ಖಳನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಎದುರು ನಟಿಸುತ್ತಿದ್ದಾರೆ. ಆದರೆ ಸೋನು ಸೂದ್ ಎದುರು ನಟಿಸುವುದು ಚಿರಂಜೀವಿಗೂ ದೊಡ್ಡ ಸಮಸ್ಯೆಯಾಗಿದೆ. ಸಿನಿಮಾದಲ್ಲಿ ಸೋನು ಸೂದ್ ಮೇಲೆ ಕೈ ಮಾಡಿದರೆ ಜನ ನಮಗೆ ಶಾಪ ಹಾಕುತ್ತಾರೆ ಎಂದು ಚಿರಂಜೀವಿ ಕೆಲವು ದೃಶ್ಯಗಳನ್ನು ಮಾಡಲು ಹಿಂದೇಟು ಹಾಕಿದ್ದಾರಂತೆ.

ಈ ಬಗ್ಗೆ ಸೋನು ಸೂದ್ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಆಕ್ಷನ್ ದೃಶ್ಯ ಚಿತ್ರೀಕರಣದ ವೇಳೆ ಚಿರಂಜೀವಿ ಅವರು ನನಗೆ ಹೊಡೆಯಬೇಕಿತ್ತು. ಆದರೆ ಚಿರಂಜೀವಿ ಹೊಡಯೆಲು ಹಿಂದೇಟು ಹಾಕಿದರು. ಯಾಕೆ ಅಂತ ಕೇಳಿದರೆ, ನೀವು ನಮ್ಮ ಚಿತ್ರದ ಭಾಗವಾಗಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದರು. ಒಂದು ವೇಳೆ ನಿಮಗೆ ಹೊಡೆದರೆ ಜನ ನಮಗೆ ಶಾಪ ಹಾಕುತ್ತಾರೆ ಎಂದು ಚಿರಂಜೀವಿ ಹೇಳಿದರು ಅಂತ ಸೋನು ಸೂದ್ ನೆನಪಿಸಿಕೊಂಡಿದ್ದಾರೆ.

ಅದೇ ಸಿನಿಮಾದಲ್ಲಿ ಚಿರಂಜೀವಿ, ಸೋನು ಸೂದ್ ಮೇಲೆ ಕಾಲು ಇಡುವ ದೃಶ್ಯವಿತ್ತಂತೆ. ಈ ದೃಶ್ಯವನ್ನು ಮಾಡಲು ಒಪ್ಪಲಿಲ್ಲವಂತೆ. ಹಾಗಾಗಿ ಆ ದೃಶ್ಯವನ್ನು ಬದಲಾಯಿಸಿ ಚಿತ್ರೀಕರಿಸಲಾಗಿದೆ ಎಂದು ಸೋನು ಸೂದ್ ಹೇಳಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments