Saturday, May 15, 2021
No menu items!
Home Karnataka ವಿಸ್ಟ್ರಾನ್ ಕಂಪನಿ ಗಲಾಟೆ; ಆ್ಯಪಲ್ ತನಿಖೆ:150 ಮಂದಿ ಬಂಧನ

ವಿಸ್ಟ್ರಾನ್ ಕಂಪನಿ ಗಲಾಟೆ; ಆ್ಯಪಲ್ ತನಿಖೆ:150 ಮಂದಿ ಬಂಧನ

ಬೆಂಗಳೂರು: ಆ್ಯಪಲ್ ಕಂಪನಿಯ ಬಿಡಿಭಾಗಗಳ ತಯಾರಿಕಾ ಕಂಪನಿಯಾದ ಕೋಲಾರ ಜಿಲ್ಲೆಯ ನರಸೀಪುರದ ವಿಸ್ಟ್ರಾನ್‌ ಆವರಣದಲ್ಲಿ ನಡೆದ ಗಲಾಟೆ ಸಂಬಂಧಿಸಿದಂತೆ ಪೊಲೀಸರು ಸುಮಾರು 150 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೇ ಆ್ಯಪಲ್ ಕಂಪನಿ ಕೂಡಾ ತನಿಖೆಗೆ ಮುಂದಾಗಿದ್ದು ಕೂಲಂಕುಷ ಪರೀಕ್ಷೆಗೆ ಇಳಿದಿದೆ.

ನಮಗೆ ಬಿಡಿಭಾಗಗಳನ್ನು, ಉತ್ಪನ್ನಗಳನ್ನು ಪೂರೈಸುವ ವ್ಯವಸ್ಥೆಯಲ್ಲಿ ಎಲ್ಲರನ್ನೂ ಘನತೆಯಿಂದ ಮತ್ತು ಗೌರವದಿಂದ ನೋಡಿಕೊಳ್ಳುವ ವಾತಾವರಣ ಇರಬೇಕು. ವಿಸ್ಟ್ರಾನ್‌ ಕಂಪನಿಯ ನರಸೀಪುರ ಘಟಕದಲ್ಲಿ ವಿಸ್ತೃತ ತನಿಖೆಯನ್ನು ತಕ್ಷಣ ಆರಂಭಿಸಿದ್ದೇವೆ. ನಾವು ಅಲ್ಲಿಗೆ ಇನ್ನಷ್ಟು ಜನರನ್ನು ರವಾನಿಸುತ್ತಿದ್ದೇವೆ ಎಂದು ಆ್ಯಪಲ್‌ ಕಂಪನಿಯು ಇ-ಮೇಲ್‌ ಮೂಲಕ ಕಳುಹಿಸಿರುವ ಹೇಳಿಕೆಯಲ್ಲಿ ತಿಳಿಸಿದೆ.

ಸರಿಯಾಗಿ ವೇತನ ನೀಡದ ಹಿನ್ನೆಲೆಯಲ್ಲಿ ಆ್ಯಪಲ್ ಮೊಬೈಲ್ ಬಿಡಿಭಾಗಗಳ ಉತ್ಪಾದನಾ ಘಟಕವಾದ ವಿಸ್ಟ್ರಾನ್ ಇನ್ಫೊಟೆಕ್ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕೆಲ ಕಾರ್ಮಿಕರು ಗುಂಪುಗೂಡಿ ಗಲಾಟೆ ಮಾಡಿದ್ದರು ಹಾಗೂ ಕಂಪನಿಯ ಆಸ್ತಿಪಾಸ್ತಿಗಳನ್ನು ನಾಶ ಮಾಡಿದ್ದರು.

ವೇತನ ಮತ್ತು ಸೌಲಭ್ಯಗಳು, ವೇತನವನ್ನು ಕಾಲಕಾಲಕ್ಕೆ ಸರಿಯಾಗಿ ಪಾವತಿಸುವುದು ಸೇರಿದಂತೆ ಎಲ್ಲ ಕಾನೂನುಗಳನ್ನು ಪೂರೈಕೆದಾರರು ಪಾಲಿಸಬೇಕು ಎಂದು ಆಯಪಲ್‌ನ ನಿಯಮಗಳು ಹೇಳುತ್ತವೆ. ಆದರೆ ವಿಸ್ಟ್ರಾನ್ ಕಂಪನಿಯಲ್ಲಿ ಇದರ ಲೋಪವಾಗಿದೆ ಎಂದು ಗುತ್ತಿಗೆ ನೌಕರರು ಪ್ರತಿಭಟನೆಗೆ ಇಳಿದಿದ್ದರು ಮತ್ತು ಅಪಾರ ಪ್ರಮಾಣದ ಆಸ್ತಿಪಾಸ್ತಿ ಹಾನಿ ಮಾಡಿದ್ದರು.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments