ಈಗ ಹೇಳಿ ಕೇಳಿ ಚಳಿಗಾಲ. ಮುಖ, ತುಟಿ ಬಿರುಕು ಬಿಡುತ್ತಲೇ ಇರುತ್ತದೆ. ಜೊತೆಗೆ ಉರಿಯುತ್ತಾ ಇರುತ್ತದೆ. ಆ ಉರಿಗೆ ಯಾವಾಗಪ್ಪ ಈ ಚಳಿಗಾ ಹೋಗುತ್ತೆ ಅನ್ನೋ ಬೇಸರ ಮೂಡುತ್ತೇ. ಜೊತೆಗೆ ಹೆಚ್ಚು ಮೇಕಪ್ ಕೂಡ ಮಾಡೋಕ್ ಆಗಲ್ಲ. ಮೇಕಪ್ ಮಾಡಿಲ್ಲ ಅಂದ್ರೆ ನಾವಿಷ್ಟ ಪಟ್ಟ ಕಾರ್ಯಕ್ರಮಗಳನ್ನು ಅಟೆಂಡ್ ಮಾಡೋಕೆ ಕಷ್ಟ ಆಗುತ್ತೆ ಅಲ್ವಾ. ಅದ್ಕೆಲ್ಲಾ ಚಿಂತೆ ಬೇಡ. ನಾವೊಂದಿಷ್ಟು ಟಿಪ್ಸ್ ಗಳನ್ನ ಕೊಡ್ತೀವಿ ಫಾಲೋ ಮಾಡಿ. ನಿಮ್ಮ ತುಟಿಗಳು ಇನ್ನಷ್ಟು ಚಂದ ಕಾಣುತ್ತವೆ.
ನಿಮ್ಮ ಆಹಾರ ಕ್ರಮ ಕೂಡ ನಿಮ್ಮ ತುಟಿಯ ಆರೋಗ್ಯವನ್ನ ಕಾಪಾಡುತ್ತದೆ. ವಿಟಮಿನ್ ಇ ಅಂಶ ಹೇರಳವಾಗಿರುವ ಪದಾರ್ಥಗಳು ತುಟಿಯ ಕಾಂತಿಯನ್ನ ಹೆಚ್ಚಿಸೋಕೆ ಕಾರಣವಾಗುತ್ತೆ. ಅತೀ ಉಪ್ಪು ಹಾಗೂ ಖಾರದ ಪದಾರ್ಥಗಳು ತುಟಿಯನ್ನ ಒಣಗಿಸಿ ಬಿಡುತ್ತೆ. ಹೀಗಾಗಿ ಅಂತಹ ಪದಾರ್ಥಗಳನ್ನ ಕಡಿಮೆ ತಿನ್ನಿ.
ಅತಿಯಾಗಿ ನೀರು ಕುಡಿಯೋದ್ರಿಂದ ತುಟಿಯ ಸೌಂದರ್ಯ ಇಮ್ಮಡಿಯಾಗಲಿದೆ. ಹಾಗಾಗಿ ಹೆಚ್ಚೆಚ್ಚು ನೀರು ಕುಡಿಯಿರಿ.
ಇನ್ನು ಮಲಗುವ ಮುನ್ನ ತುಟಿಗೆ ಲಿಪ್ಬಾಮ್ ಹಚ್ಚೋದನ್ನ ಮರೆಯದಿರಿ. ಬೆಳಗ್ಗೆ ಎದ್ದೊಡನೆಯೇ ಹತ್ತಿ ಇಲ್ಲವೇ ಮೃದುವಾದ ಬಟ್ಟೆ ಉಪಯೋಗಿಸಿ ತುಟಿಯ ಮೇಲೆ ಮಸಾಜ್ ಮಾಡಿ. ಇದು ನಿಮ್ಮ ತುಟಿಯಲ್ಲಿ ರಕ್ತದ ಹರಿವನ್ನ ಹೆಚ್ಚಿಸೋದ್ರ ಜೊತೆಗೆ ತುಟಿ ಇನ್ನಷ್ಟು ಮೃದು ಆಗೋಕೆ ಸಹಾಯಕಾರಿ.
ನೀವು ಯಾವ ಅಲಂಕಾರಿಕ ವಸ್ತುವನ್ನ ಬಳಸ್ತೀರಾ ಅನ್ನೋದು ಕೂಡ ನಿಮ್ಮ ತುಟಿಯ ಆರೋಗ್ಯವನ್ನ ನಿರ್ಧಾರ ಮಾಡುತ್ತೆ. ಹೀಗಾಗಿ ಯಾವ ಲಿಪ್ ಬಾಮ್ಗಳಲ್ಲಿ ವಿಟಮಿನ್ ಇ, ಆಲ್ಮಂಡ್ ಅಥವಾ ತೆಂಗಿನೆಣ್ಣೆ, ಪೆಟ್ರೋಲಿಯಂ ಜೆಲ್ಲಿ ಹೇರಳವಾಗಿರುತ್ತದೆಯೋ ಅಂತಹ ಬಾಮ್ಗಳನ್ನೇ ಬಳಕೆ ಮಾಡಿ. ಲಿಪ್ಬಾಮ್ನ ಬೆಲೆ ಹೆಚ್ಚಿದಂತೆ ಅದು ಚರ್ಮಕ್ಕೆ ಒಳ್ಳೆಯದು ಅನ್ನೋ ವಿಚಾರವನ್ನ ಮೊದಲು ತಲೆಯಿಂದ ತೆಗೆದು ಹಾಕಿ. ಕೆಲವೊಮ್ಮೆ ಕಡಿಮೆ ಬೆಲೆಯ ಲಿಪ್ಬಾಮ್ಗಳೇ ನಿಮ್ಮ ಚರ್ಮದ ಆರೋಗ್ಯಕ್ಕೆ ಹಿತವಾಗಿರಬಹುದು.
ಹೀಗೆ ಕೆಲವೊಂದು ಸಿಂಪಲ್ ಟಿಪ್ಸ್ ಗಳನ್ನ ಫಾಲೋ ಮಾಡಿ ನೀವೂ ಕೂಡ ಸುಂದರ ತುಟಿಗಳನ್ನ ಪಡೆಯಿರಿ.