2020 ವರ್ಷ ಮುಗಿಯೋದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ವರ್ಷ ಕೆಲವು ವಾಟ್ಸಾಪ್ ಬಳಕೆದಾರರಿಗೆ ತುಂಬಾ ಬೇಸರವಾಗಲಿದೆ. ಏಕೆಂದರೆ ಜನವರಿ 1 ರಿಂದ ವಾಟ್ಸಾಪ್ ಕೆಲವೊಂದು ಫೋನ್ಗಳಲ್ಲಿ ಕೆಲಸ ಮಾಡುವುದಿಲ್ಲ. ಆದ್ದರಿಂದ ಕೆಲವು ಆಂಡ್ರಾಯ್ಡ್ ಮತ್ತು ಐಒಎಸ್ ಫೋನ್ಗಳಲ್ಲಿ ವಾಟ್ಸಾಪ್ ಚಾಲನೆ ನಿಲ್ಲುತ್ತದೆ. ನೀವು ಐಒಎಸ್ 9 ರ ಕಡಿಮೆ ಆವೃತ್ತಿಯನ್ನು ಹೊಂದಿದ್ದರೆ ಮತ್ತು ನೀವು ಆಂಡ್ರಾಯ್ಡ್ 4.0.3 ಆಪರೇಟಿಂಗ್ ಸಿಸ್ಟಂನಲ್ಲಿ ಕೆಲಸ ಮಾಡುತ್ತಿದ್ದರೆ ವಾಟ್ಸಾಪ್ ನಿಮ್ಮ ಫೋನ್ನಲ್ಲಿ ವರ್ಕ್ ಆಗಲ್ಲ.
ಏಕೆಂದರೆ ಹೆಚ್ಚಿನ ಐಫೋನ್ಗಳು ಮತ್ತು ಆಂಡ್ರಾಯ್ಡ್ ಫೋನ್ಗಳು ಹೊಸ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತವೆ. ಆದಾಗ್ಯೂ ನೀವು ಇನ್ನೂ ಹಳೆಯ ಆಪರೇಟಿಂಗ್ ಸಿಸ್ಟಂನಲ್ಲಿ ಚಾಲನೆಯಲ್ಲಿರುವ ಸ್ಮಾರ್ಟ್ಫೋನ್ ಬಳಸುತ್ತಿದ್ದರೆ ಈ ಸೇವೆ ಅಡ್ಡಿಪಡಿಸುವ ಮೊದಲು ಬನಿಮ್ಮ ಹಳೆಯ ಮೊಬೈಲ್ ಫೋನನ್ನು ಅಪ್ಗ್ರೇಡ್ ಮಾಡಲು ವಾಟ್ಸಾಪ್ ಶಿಫಾರಸು ಮಾಡುತ್ತದೆ. ಅಂದ್ರೆ ಈ ವರ್ಷ ಮುಗಿಯುವ ಮುಂಚೆಯೇ ಹೊಸ ಫೋನನ್ನು ಬಳಸಿರಿ.
iPhone 4S, iPhone 5, the iPhone 5S, the iPhone 6, and the iPhone 6S ಅನ್ನು ಬಳಸುವ ಜನರು ತಮ್ಮ ಆಪರೇಟಿಂಗ್ ಸಿಸ್ಟಮ್ ಅನ್ನು ಐಒಎಸ್ 9 ಅಥವಾ ನಂತರ ವಾಟ್ಸಾಪ್ ಬಳಕೆಯನ್ನು ಮುಂದುವರಿಸಲು ನವೀಕರಿಸಬೇಕಾಗುತ್ತದೆ.
ಈ ಪಟ್ಟಿಯಲ್ಲಿ ಹೆಚ್ಟಿಸಿ ಡಿಸೈರ್, ಎಲ್ಜಿ ಆಪ್ಟಿಮಸ್ ಬ್ಲ್ಯಾಕ್, ಮೊಟೊರೊಲಾ ಡ್ರಾಯಿಡ್ ರೇಜರ್ ಮತ್ತು ಸ್ಯಾಮ್ಸಂಗ್ ಗ್ಯಾಲಕ್ಸಿ ಎಸ್ 2 ( HTC Desire, LG Optimus Black, Motorola Droid Razr ಮತ್ತು Samsung Galaxy S2) ಸೇರಿವೆ.