ಬೆಂಗಳೂರು : ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಮರಣದ ನಂತರ ಹುಟ್ಟಿಕೊಂಡ ಡ್ರಗ್ಸ್ ಬಿರುಗಾಳಿ ಸದ್ಯಕ್ಕೆ ತಣ್ಣಗಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಸದ್ಯ ಇದೇ ವಿಚಾರ ಬಾಲಿವುಡ್ ನಟ ವಿವೇಕ್ ಒಬೇರಾಯ್ ಕೊರಳಿಗೂ ಉರುಳಾಗುವ ಸಾಧ್ಯತೆಗಳು ದಟ್ಟವಾಗಿವೆ.
ಸ್ಯಾಂಡಲ್ ವುಡ್ ಡ್ರಗ್ ಕೇಸ್ ನ ಎ 6 ಆರೋಪಿ ಆದಿತ್ಯ ಆಳ್ವ ಗೆ ಆಶ್ರಯ ನೀಡಿರುವ ಆರೋಪದ ಮೇಲೆ ವಿವೇಕ್ ಒಬೇರಾಯ್ ಮನೆಯ ಮೇಲೆ NCB ದಾಳಿ ನಡೆಸಿತ್ತು. ಇದೀಗ ವಿಚಾರಣೆಗೆ ಹಾಜಾರಾಗುವಂತೆ ಒಬೇರಾಯ್ ದಂಪತಿಗೆ ನೋಟೀಸ್ ಜಾರಿ ಮಾಡಿದೆ.
ಮೊದಲ ನೊಟೀಸ್ ಗೆ ಒಬೇರಾಯ್ ಪತ್ನಿ ಪ್ರಿಯಾಂಕ್ ಆಳ್ವ ಹಾಜಾರಾಗದೇ ಇದ್ದಿದುರಿಂದ ಮತ್ತೊಮ್ಮೆ ನೋಟೀಸ್ ಜಾರಿ ಮಾಡಲಾಗಿದೆ.ಈ ಮೂಲಕ ಸಿಸಿಬಿ ವಿವೇಕ್ ಒಬೇರಾಯ್ ದಂಪತಿಗೆ ಬಿಗ್ ಶಾಕ್ ನೀಡಿದೆ.
ಇತ್ತ ಡ್ರಗ್ಸ್ ಕೇಸ್ ವಿಚಾರವಾಗಿ ನಟಿಯಾರದ ಸಂಜನಾ ಮತ್ತು ರಾಗಿಣಿ ದ್ವಿವೇದಿ ಇದೀಗಾಗಲೇಜೈಲು ಪಾಲಾಗಿದ್ದಾರೆ .ತನಿಖೆ ತೀವ್ರಗತಿಯಲ್ಲಿ ಸಾಗುತ್ತಿದ್ದು ಮುಂದೆ ಯಾರ್ಯಾರು ಜೈಲು ಪಾಲಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ.