ವಿಜಯಪುರ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳ ತುಂಬಿ ಹರಿಯುತ್ತಿದೆ. ರಾತ್ರಿ ಇಡಿ ಮಳೆ ಸುರಿದ ಪರಿಣಾಮ ಬಾಬಾನಗರ, ಬಿಜ್ಜರಗಿ ಗ್ರಾಮಗಳಲ್ಲಿ ಜೋರು ಮಳೆ ಬಂದಿದ್ದರಿಂದ ಈ ಹಳ್ಳಕ್ಕೆ ಹೆಚ್ಚು ನೀರು ಹರಿದು ಬಂದಿದೆ. ಇದರ ಪರಿಣಾಮ ಕಳ್ಳಕವಟಗಿ ಗ್ರಾಮದ ಸಂಗಮನಾಥ ದೇವಾಲಯ ಹಳ್ಳದ ನಡು ನೀರಲ್ಲಿ ಮುಳುಗಿ ಹೋಗಿದೆ.
ನಿತ್ಯ ನೂರಾರು ಭಕ್ತರು ಈ ದೇವಸ್ಥಾನಕ್ಕೆ ಬರುತ್ತಿದ್ದರು. ಈಗ ದೇವಸ್ಥಾನದಲ್ಲಿ ನೀರು ಒಳಗೆ ನುಗ್ಗಿರುವ ಕಾರಣ ಬೆಳಗ್ಗೆ ದೇವಸ್ಥಾನದಲ್ಲಿ ಪೂಜಾರಿಗಳು ಪೂಜೆ ಮಾಡಲು ಸಹ ಆಗಿಲ್ಲ. ಸಂಗಮನಾಥ ದೇವಸ್ಥಾನದ ಮೆಟ್ಟಿಲು ಮೇಲೆ ನೀರು ಹರಿದಿದ್ದು, ಇನ್ನೇರಡು ದಿನ ಕಳ್ಳಕವಟಗಿ ಗ್ರಾಮದ ಸುತ್ತಮುತ್ತ ಹೆಚ್ಚಿನ ಮಳೆಯಾದರೆ ದೇವಸ್ಥಾನ ಮುಳುಗಡೆಯಾಗುವ ಸಾಧ್ಯತೆಗಳಿವೆ.
ಇನ್ನು ಇದೇ ಹಳ್ಳವನ್ನು ದಾಟಲು ಇಲ್ಲಿನ ಗ್ರಾಮಸ್ಥರು ಹರಸಾಹಸ ಮಾಡುತ್ತಿದ್ದಾರೆ. ತುಂಬಿ ಹರಿಯುತ್ತಿರುವ ಕಾರಣ ಅದೇ ನೀರಿನಲ್ಲಿಯೇ ವಾಹನಗಳು ಓಡಾಡುತ್ತಿದ್ದೇವೆ. ಸ್ವಲ್ಪ ಯಾಮಾರಿದರೂ ಸಾಕು ವಾಹಗಳು ನೀರಿನಲ್ಲಿ ಕೊಚ್ಚಿ ಹೋಗುವ ಅತಂಕವಿದೆ. ವಾಹನಗಳನ್ನು ಸಹ ಚಾಲಕರು ಜಾಗರುಕತೆಯಿಂದ ಓಡಾಡಿಸುತ್ತಿದ್ದಾರೆ.