ವಿಜಯಪುರ : ಸರ್ಕಾರಿ ನೌಕರನೋರ್ವ ಹುಡುಗಿಗೆ ಲವ್ ಸೆಕ್ಸ್ ದೋಖಾ ಮಾಡಿರುವ ಘಟನೆ ಐತಿಹಾಸಿಕ ಗುಮ್ಮಟನಗರಿಯಲ್ಲಿ ನಡೆದಿದೆ .
ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಶೇಗುಣಸಿ ಗ್ರಾಮದ ಆಶಾ ಚಿಗರಿ ಮೋಸ ಹೋಗಿರುವ ಹುಡ್ಡಿ . ಮಂಡ್ಯ ಜಿಲ್ಲೆಯಲ್ಲಿ ತಲಾಟಿ ನೌಕರನಾಗಿರುವ ಹಣಮಂತ ರೂಗಿ ಮೋಸ ಮಾಡಿದ್ದಾನೆ.
ಕಳೆದ ಮೂರ್ನಾಲ್ಕು ವರ್ಷಗಳಿಂದ ಹಣಮಂತ ಮತ್ತು ಆಶಾ ಅನ್ನೋನ್ಯವಾಗಿ ಪ್ರೀತಿಯ ಲೋಕದಲ್ಲಿ ಒಂದಾಗಿದ್ದು , ವಾಟ್ಸಫ್ ನಲ್ಲಿ ಬಣ್ಣ ಬಣ್ಣದ ಮಾತುಗಳಿಂದ ಆಶಾಳನ್ನು ಮರುಳು ಮಾಡಿ ದೈಹಿಕ ಸಂಪರ್ಕ ಕೂಡ ಬೆಳೆಸಿದರು . ಮೂರು ವರ್ಷಗಳ ಲವ್ ಗೆ ಹಣಮಂತ ಇದೀಗ ಕೈ ಕೊಟ್ಟಿದ್ದಾನೆ ಎಂದು ಆಶಾ ಹೇಳುತ್ತಿದ್ದಾಳೆ .
ಇನ್ನು ಹಲವು ದಿನಗಳಿಂದ ಹಣಮಂತನಿಗೆ ಆಶಾ ಕಾಲ್ ಮಾಡಿದ್ರೆ ಎಲ್ಲ ನಂಬರಗಳನ್ನು ಬ್ಲಾಕ್ ಮಾಡಿದ್ದಾನೆ . ಸುಮಾರು 30 ನಂಬರ್ ಬ್ಲಾಕ್ ನಲ್ಲಿ ಹಾಕಿದ್ದಾನೆ ಎಂದು ಆಶಾ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದೇನೆ . ಇನ್ನು ನನಗೆ ಪೊಲೀಸರು ನ್ಯಾಯ ಕೊಡಿಸಲಿಲ್ಲಂದ್ರೇ ಎಸ್ಪಿ ಕಚೇರಿ ಎದುರು ಆತ್ಮಹತ್ಯೆಗೆ ಶರಣಾಗುತ್ತೇನೆ . ಅಲ್ಲದೇ , ಮಹಿಳಾ ವಿಜಯಪುರ ಪೊಲೀ ಠಾಣೆಗೂ ದೂರು ನೀಡಲು ಬಂದಿದ್ದೇನೆ ಎಂದಿದ್ದಾಳೆ .