ನವದೆಹಲಿ : ಐಪಿಎಲ್ ನಲ್ಲಿ ನಿರಂತರ ಸೋಲು ಕಂಡಿದ್ದ ಧೋನಿ ಮಗಳಿಗೆ ಅತ್ಯಾಚಾರದ ಬೆದರಿಕೆ ಬಂದಿತ್ತು. ಈ ವಿಚಾರಕ್ಕೆ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆನಂತರ ಪೊಲೀಸರು ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಅರೆಸ್ಟ್ ಮಾಡಿದ್ದರು. ಇದೀಗ ಅದೇ ದಾರಿಯಯಲ್ಲಿ ಮತ್ತೊಬ್ಬ ನಟ ವಿಜಯ್ ಸೇತುಪತಿಗೆ ಬೆದರಿಕೆ ಹಾಕಿದ್ದಾನೆ.
ಮುತ್ತಯ್ಯ ಮುರಳೀಧರನ್ ಬಯೋಪಿಕ್ ‘800’ ಚಿತ್ರದಿಂದ ವಿಜಯ್ ಸೇತುಪತಿ ಹೊರ ನಡೆದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿ ಖಚಿತ ಪಡಿಸಿದ್ದಾರೆ. ಈ ಬೆನ್ನಲ್ಲೇ ಸೇತುಪತಿ ಅವರನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿದ್ದು, ಅವರ ಮಗಳನ್ನು ಅತ್ಯಾಚಾರ ಮಾಡುವ ಬೆದರಿಕೆ ಸಂದೇಶವೊಂದನ್ನು ಕಳುಹಿಸಿದ್ದಾರೆ. ನೆಟ್ಟಿಗರೇ ಕೆಟ್ಟ ಕಮೆಂಟ್ ಮಾಡಿದವನ ವಿರುದ್ಧ ಕಿಡಿಕಾರಿದ್ದಾರೆ. ನೆಟ್ಟಿಗರು ಮಾತ್ರವಲ್ಲ ಸಿನಿಮಾ ಮಂದಿಯು ಸಹ ಅಸಮಾಧಾನ ಹೊರಹಾಕಿದ್ದಾರೆ.
ಗಾಯಕಿ ಚಿನ್ಮಯಿ ಶ್ರೀಪಾದ್ ಬೆದರಿಕೆ ಟ್ವೀಟ್ ಅನ್ನು ಸ್ಕ್ರೀನ್ಶಾಟ್ ತೆಗೆದು ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಚೆನ್ನೈ ಪೊಲೀಸರಿಗೆ ಟ್ಯಾಗ್ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದಾರೆ. ವ್ಯಕ್ತಿಯೊಬ್ಬ ಸಾರ್ವಜನಿಕವಾಗಿಯೇ ಮಕ್ಕಳ ಅತ್ಯಾಚಾರ ಬೆದರಿಕೆ ಹಾಕುವುದು ಒಂದು ಅಪರಾಧ. ಈ ವ್ಯವಸ್ಥೆಯಲ್ಲಿ ಯಾರೂ ಇದನ್ನು ಬದಲಾಯಿಸಲು ಆಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಈ ಮೋಸದ ಸಮಾಜ ಇದನ್ನೇಕೆ ಮಾಡುತ್ತಿದೆ? ಇಂತಹ ಘಟನೆಗಳು ನಡೆದಾಗ ಮೌನವಾಗಿ ನೋಡುವುದೇಕೆ? ಅತ್ಯಾಚಾರ ಬೆದರಿಕೆ ಹಾಕುವಂತೆ ವ್ಯಕ್ತಿಯನ್ನು ಹೇಗೆ ಬೆಳೆಸಲಾಗುತ್ತದೆ? ವಯಸ್ಕರು ಕತ್ತೆ ಕಿರುಬಗಳ ರೀತಿಯಲ್ಲಿ ವರ್ತಿಸುವಾಗಿ ಮಹಿಳೆಯರು ಮತ್ತು ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆ. ಇಷ್ಟೆಲ್ಲ ಗೊತ್ತಿದ್ದರೂ ಏನೂ ಕ್ರಮ ಕೈಗೊಳ್ಳದೇ ಮೌನವಾಗಿ ನೋಡುವವರಿಗೆ ನಾಚಿಕೆಯಾಗಬೇಕು ಎಂದು ಚಿನ್ಮಯಿ ಮತ್ತೊಂದು ಟ್ವೀಟ್ನಲ್ಲಿ ಖಂಡಿಸಿದ್ದಾರೆ.
ಕೆಟ್ ಲೋಕ ಕಂಡ ಅತ್ಯುತ್ತಮ ಸ್ಪಿನ್ನರ್ ,ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಜೀವನಾಧಾರಿತ ‘800’ ಚಿತ್ರದಿಂದ ನಟ ವಿಜಯ್ ಸೇತುಪತಿ ಹೊರನಡೆದಿದ್ದಾರೆ. ಅಭಿಮಾನಿಗಳಿಂದ ಭಾರೀ ಆಕ್ರೋಶ ಹೊರಬಿದ್ದ ಬೆನ್ನಲ್ಲೇ ವಿಜಯ್ ಸೇತುಪತಿ ಈ ನಿರ್ಧಾರ ಕೈಗೊಂಡಿದ್ದಾರೆ.
ವಿಶ್ವಶ್ರೇಷ್ಠ ಕ್ರಿಕೆಟ್ ಬೌಲರ್ ಮುತ್ತಯ್ಯ ಮುರಳೀಧರನ್ ಬಯೋಪಿಕ್ ಚಿತ್ರದಲ್ಲಿ ಮುರಳೀಧರನ್ ಪಾತ್ರ ಮಾಡುವುದಾಗಿ ತಮಿಳು ನಟ ವಿಜಯ್ ಸೇತುಪತಿ ಒಪ್ಪಿಕೊಂಡಿದ್ದರು. ಆದರೆ ಅಭಿಮಾನಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿತ್ರದಿಂದ ಹಿಂದೆ ಸರಿದಿದ್ದಾರೆ.
ಶ್ರೀಲಂಕಾ ದಲ್ಲಿರುವ ತಮಿಳರ ಮೇಲೆ ಅಲ್ಲಿನ ಸರ್ಕಾರ ದಬ್ಬಾಳಿಕೆ ನಡೆಸಿದೆ. ಇಂತಹ ಸಮಯದಲ್ಲಿ ಮುರಳೀಧರನ್ ಯಾವುದೇ ಮಾತನ್ನು ಆಡಿರಲಿಲ್ಲ. ಇದೀಗ ಅವರ ಬಯೋಪಿಕ್ ಚಿತ್ರಕ್ಕೆ ತಮಿಳು ನಟರೇಕೆ ಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಒಂದು ವೇಳೆ ವಿಜಯ್’ 800 ‘ ಸಿನಿಮಾದಲ್ಲಿ ನಟಿಸಿದರೆ ಮುಂದಿನ ಅವರ ಭವಿಷ್ಯ ತಮಿಳು ಚಿತ್ರ ರಂಗದಲ್ಲಿ ಡೋಲಾಯಮಾನ ಆಗುವ ಸ್ಥಿತಿಯೂ ಬಂದೊರಗುವ ಸಾಧ್ಯತೆಗಳು ನಿಚ್ಚಳವಾಗಿತ್ತು. ಇದನ್ನೆಲ್ಲಾ ಅರಿತ ನಟ ವಿಜಯ್ ಸೇತುಪತಿ ಇದೀಗ “800” ಸಿನಿಮಾಕ್ಕೆ ಗುಡ್ ಬೈ ಹೇಳಿದ್ದಾರೆ.