ಮಂಗಳೂರು : ರಾಜ್ಯದಲ್ಲಿ ಕೋವಿಡ್ 19 ಮಹಾಮಾರಿ ತನ್ನ ರುದ್ರತಾಂಡವ ತೋರಿಸುತ್ತಿದೆ. ಇಂತಹ ಸಮಯದಲ್ಲಿ ಸರ್ಕಾರ ಶಾಲೆ ತೆರಯಬೇಕೆ ಬೇಡವೇ ಎಂಬ ಗೊಂದಲ್ಲದಲ್ಲಿರೆಬೇಕಾದರೆ , ವಿದ್ಯಾಗಮ ಯೋಜನೆಯಡಿ ಪಾಠ ಮಾಡುತ್ತಿದ್ದ ಮೂಡಬಿದಿರೆಯ ಶಿಕ್ಷಕಿ ಕೊರೋನಾಗೆ ಬಲಿಯಾಗಿರುವುದು ತೀವ್ರ ಆತಂಕ್ಕಕ್ಕೀಡುಮಾಡಿದೆ.
ಶಿಕ್ಷಕಿ ಪದ್ಮಾಕ್ಷ್ಮಿ ಮೃತ ದುರ್ದೈವಿ. ಶಿಕ್ಷಕಿಗೆ ಸೆ.29 ರಂದು ಕೊರೋನಾ ದೃಢಪಟ್ಟಿತ್ತು . ಆದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಮಾಜಿ ಶಾಸಕ ಅಭಯಚಂದ್ರ ಜೈನ್ , ನಾವು ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕರ್ನಾಟಕ ಸರಕಾರದ ಘನ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರ ಜೊತೆ ಮಾತನಾಡಿ ಅವರನ್ನು ಬೆಂಗಳೂರು ಕರೆದೊಯ್ಯುವ ಸಿದ್ದತೆಯಲ್ಲಿದ್ದೆವು . ಆದರೆ ವಿಧಿಯ ಕೈವಾಡ ದಂತೆ ಅವರು ನಮ್ಮನ್ನಗಲಿದ್ದಾರೆ ಎಂದು ನೋವು ತೋಡಿಕೊಂಡರು.
ಮೃತರು ಪತಿ ಶಶಿಕಾಂತ್ ಪುತ್ರಿ ಐಶ್ವರ್ಯ ಅವರನ್ನು ಅಗಲಿದ್ದಾರೆ .ಕೊರೋನಾ ಸಮಯದಲ್ಲಿ ಶಾಲೆ ತೆರಯಬೇಕೆ ಬೇಡವೇ ಎಂಬ ಗೊಂದಲದಲ್ಲಿ ಸರ್ಕಾರ ಇರಬೇಕಾದರೆ ಇಂತಹ ಸಂಗತಿಗಳು ಸರ್ಕಾರ ಕ್ಕೆ ಮತ್ತೊಂದು ತಲೆನೋವಾಗಿ ಪರಿಣಮಿಸಿದೆ.