ರಾಮನಗರ: ಯಡಿಯೂರಪ್ಪ ಹುಚ್ಚಾಸ್ಪತ್ರೆಯಲ್ಲಿರಬೇಕಾಗಿತ್ತು. ಆದ್ರೆ ವಿಧಾನಸೌಧವೇ ಹುಚ್ಚಾಸ್ಪತ್ರೆಯಾಗಿದೆ ಎಂದಿದ್ದಾರೆ.
ಯಡಿಯೂರಪ್ಪ ಸರ್ಕಾರ ಅತಿ ಹೀನಾಯ ಸರ್ಕಾರ. ಬಿಜೆಪಿ ಸರಗಕಾರ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ವಾಟಾಳ್ ನಾಗರಾಜ್ ರಾಜ್ಯ ಸರ್ಕಾರದ ವಿರುದ್ಧ ಖಾರವಾಗಿ ಮಾತನಾಡಿದ್ದಾರೆ.
ಕರ್ನಾಟಕ ಸರ್ಕಾರಕ್ಕೆ ಬುದ್ದಿ ಇಲ್ಲ, ತಲೆಯೂ ಇಲ್ಲ. ಯಡಿಯೂರಪ್ಪ ಹುಚ್ಚಾಸ್ಪತ್ರೆಯ ಸ್ಪೆಷಲ್ ವಾರ್ಡ್ ನಲ್ಲಿ ಇರಬೇಕಾಗಿತ್ತು. ಆದ್ರೆ ವಿಧಾನಸೌಧದಲ್ಲಿ ಇದ್ದಾರೆ. ಬಿಜೆಪಿಯಲ್ಲಿ ಸಚಿವರೆಲ್ಲಾ ದಿಕ್ಕು ತಪ್ಪಿದ್ದಾರೆಂದು ವ್ಯಂಗ್ಯವಾಡಿದ್ದಾರೆ.
ಮರಾಠ ಪ್ರಾಧಿಕಾರವನ್ನು ಖಂಡಿಸಿ ವಾಟಾಳ್ ನಾಗರಾಜ್ ಇಂದು ರಾಮನಗರದಲ್ಲಿ ಪ್ರತಿಭಟನೆ ಮಾಡಿದ್ದಾರೆ. ಇದೆ ವೇಳೆ ಮರಾಠ ಪ್ರಾಧಿಕಾರವನ್ನು ಖಂಡಿಸಿ ಮೊದಲ ಹಂತದ ಪ್ರತಿಭಟನೆ ಮಾಡಿದ್ದೇವೆ. ಎರಡನೇ ಹಂತವಾಗಿ ಜನವರಿ 9ರಂದು ರಾಜ್ಯದಲ್ಲಿ ರೈಲು ತಡೆದು ಪ್ರತಿಭಟಿಸುತ್ತೇವೆ ಎಂದಿದ್ದಾರೆ.