Wednesday, October 27, 2021
No menu items!
Home Bharata ಹಬ್ಬದ ಸಂಭ್ರಮಕ್ಕೆ ರಿಲಯನ್ಸ್ ಜ್ಯುವೆಲ್ಸ್ನ ʻಉತ್ಕಲಾʼ ಅನಾವರಣ : ಒಡಿಶಾದ ಸಾಂಸ್ಕೃತಿಕ ಸಂಪ್ರದಾಯಗಳಿಂದ ಸ್ಫೂರ್ತಿ

ಹಬ್ಬದ ಸಂಭ್ರಮಕ್ಕೆ ರಿಲಯನ್ಸ್ ಜ್ಯುವೆಲ್ಸ್ನ ʻಉತ್ಕಲಾʼ ಅನಾವರಣ : ಒಡಿಶಾದ ಸಾಂಸ್ಕೃತಿಕ ಸಂಪ್ರದಾಯಗಳಿಂದ ಸ್ಫೂರ್ತಿ

ಮುಂಬೈ: ಭಾರತದ ಅತ್ಯಂತ ವಿಶ್ವಾಸನೀಯ ಆಭರಣಗಳ ಬ್ರ್ಯಾಂಡ್ ರಿಲಯನ್ಸ್ ಜ್ಯುವೆಲ್ಸ್ ಈ ಹಬ್ಬದ ಋತುವಿನ ಆರಂಭವನ್ನು ಇನ್ನಷ್ಟು ಚೆಂದವಾಗಿಸಲು ‘ಉತ್ಕಲಾʼ ಎಂಬ ಉತ್ಕೃಷ್ಟ ಆಭರಣಗಳ ಶ್ರೇಣಿಯನ್ನು ಪರಿಚಯಿಸುತ್ತಿದೆ. ಈ ಸಂಗ್ರಹವು ಒಡಿಶಾದ ಸಾಂಸ್ಕೃತಿಕ ಸಂಪ್ರದಾಯಗಳಿಂದ ಸ್ಫೂರ್ತಿ ಪಡೆದಿದ್ದು, ಈ ರಾಜ್ಯದ ಕಲೆ, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಅದ್ಭುತವಾಗಿ ಮೇಳೈಸಿದ ಅನನ್ಯವಾದ ಚಿತ್ರಕಲೆ, ಕಲಾಕೃತಿಗಳು ಮತ್ತು ವಿನ್ಯಾಸಗಳ ನೈಜ ಸಂಗಮವಾಗಿದೆ.

ಈ ಉತ್ಕೃಷ್ಟವಾದ ಸಂಗ್ರಹವು ಅದ್ಭುತವಾದ ವಿನ್ಯಾಸಗಳನ್ನು ಹೊಂದಿದ್ದು, ಗ್ರಾಹಕರು ವೈವಿಧ್ಯಮಯವಾದ ಸೂಕ್ಷ್ಮವಾಗಿ ಮತ್ತು ಕಲಾತ್ಮಕವಾಗಿ ರಚಿಸಲಾದ ಆಭರಣಗಳನ್ನು ಕಾಣಬಹುದು. ಈ ಸುಗಮವಾದ ಕಲೆಗೆ ಕೋನಾರ್ಕ್ ಸೂರ್ಯ ದೇವಾಲಯ, ಮುಕ್ತೇಶ್ವರ ದೇವಾಲಯ, ಪುರಿ ಜಗನ್ನಾಥ ದೇವಾಲಯದ, ಸೀಂತಿ ನಾಟ್ಯದ, ವಿನೂತನವಾದ ಪಟ್ಟಚಿತ್ರ ಕಲಾಕೃತಿಗಳು ಮತ್ತು ಬಾಯ್ತಾ ಬಂಧನ ಕಡಲ ಪರಂಪರೆಗಳು ಸ್ಫೂರ್ತಿ ನೀಡಿವೆ.

ಚೋಕರ್ ಸೆಟ್ ನಿಂದ ಚಿಕ್ಕ ನೆಕ್ಲೇಸ್ ಮತ್ತು ಉದ್ದನೆಯ ಸೂಕ್ಷ್ಮವಾದ ಮತ್ತು ಉತ್ಕೃಷ್ಟವಾದ ನೆಕ್ಲೇಸ್ ಸೆಟ್ ವರೆಗೆ, ಇಲ್ಲಿ ಎಲ್ಲಾ ಸಂದರ್ಭಗಳಿಗೂ ಒದಗುವ ಮತ್ತು ಎಲ್ಲರಿಗೂ ಎಟಕುವ ದರಗಳಲ್ಲಿ ಆಭರಣಗಳಿವೆ. ಚಿನ್ನದ ಸಂಗ್ರಹದ ವಿನ್ಯಾಸಗಳನ್ನು 22 ಕ್ಯಾರೆಟ್ ಚಿನ್ನದಿಂದ ಮಾಡಲಾಗಿದ್ದು, ಪ್ರಾಚೀನ ಮತ್ತು ಹಳದಿ ಚಿನ್ನದ ಫಿನಿಶ್ಗಳ ಅದ್ಭುತವಾದ ಸಾಂಪ್ರದಾಯಿಕ ಶೈಲಿಯ ಆಭರಣಗಳನ್ನು ಹೊಂದಿದ್ದು, ಹಳದಿ ಚಿನ್ನ ಮತ್ತು ಪ್ರಾಚೀನ ಫಿನಿಶ್ ನಲ್ಲಿ ಸೂಕ್ಷ್ಮವಾದ ಫಿಲಿಗ್ರಿ ಮಾದರಿಯ ಆಭರಣಗಳೂ ಇವೆ. 18 ಕೆಟಿ ಚಿನ್ನದಲ್ಲಿ ಡೈಮಂಡ್ ಅನ್ನು ಪೋಣಿಸಲಾಗಿದ್ದು ಹಬ್ಬದ ಸಂದರ್ಭದಲ್ಲಿ ಮತ್ತು ಸಮಕಾಲೀನ ನೋಟಕ್ಕೆ ಇದು ಹೆಚ್ಚು ಸೂಕ್ತವಾಗಿದೆ.

ಈ ಕುರಿತು ಮಾತನಾಡಿದ ರಿಲಯನ್ಸ್ ಜ್ಯುವೆಲ್ಸ್ ವಕ್ತಾರರು, ಭಾರತದಲ್ಲಿ ಸಂಭ್ರಮಿಸಲಾಗುವ ಅತ್ಯಂತ ಮುಖ್ಯವಾದ ಹಬ್ಬಗಳಲ್ಲಿ ದೀಪಾವಳಿ ಒಂದು. ಧನ್ತೇರಾಸ್ಗೆ ಚಿನ್ನದ ಆಭರಣಗಳನ್ನು ಕೊಳ್ಳುವುದು ಶ್ರೇಷ್ಠವೆಂದು ಪರಿಗಣಿಸಲಾಗುತ್ತದೆ. ಈ ಸಂದರ್ಭದಲ್ಲಿ ಉತ್ಕಲಾವನ್ನು ಪರಿಚಯಿಸಲು ನಮಗೆ ಖುಷಿಯಾಗುತ್ತಿದೆ; ನಮ್ಮ ದೇವಾಲಯಗಳ ಆಭರಣದ ವಿನ್ಯಾಸದ ಪರಂಪರೆಯನ್ನು ಮುಂದುವರೆಸುವ ಅದ್ಭುತವಾದ ವಿನ್ಯಾಸದ ಸಂಗ್ರಹವಿದು. ಪ್ರತಿ ಚಿನ್ನದ ಮತ್ತು ವಜ್ರದ ನೆಕ್ಲೇಸ್, ಓಲೆಗಳು ಮತ್ತು ಸೆಟ್ಗಳು ಅನನ್ಯವಾಗಿದ್ದು, ಒಡಿಶಾದ ವಿಭಿನ್ನವಾದ ಕಲೆ ಮತ್ತು ಇತಿಹಾಸವನ್ನು ಪ್ರತಿನಿಧಿಸುತ್ತದೆ. ಧನ್ತೇರಾಸ್ ಹಬ್ಬದ ಶುಭ ಸಮಯದಲ್ಲಿ ಈ ಸಂಗ್ರಹವನ್ನು ನೀಡುವುದರಿಂದ ಇದು ಮತ್ತೂ ವಿಶೇಷವಾಗಿದೆ, ಮತ್ತು ನಮ್ಮ ಅಭಿಮಾನಿಗಳು ಇದನ್ನು ಧರಿಸಿ, ಎಲ್ಲರಿಗೂ ಸ್ಮರಣೀಯರಾಗಿತ್ತಾರೆಂದು ಆಶಿಸುತ್ತೇವೆ ಎಂದರು.

ಉತ್ಕಲಾ ಸಂಗ್ರಹದಲ್ಲಿ ಪ್ರತಿ ಆಭರಣವೂ ಒಂದು ನಿಪುಣ ಕಲಾಚಾತುರ್ಯದ ಗುರುತಾಗಿದ್ದು, ರಿಲಯನ್ಸ್ ಜ್ಯುವೆಲ್ಸ್ ಬ್ರ್ಯಾಂಡ್ ನ ನಿರಂತರ ಗುಣಮಟ್ಟ ಮತ್ತು ವಿಶ್ವಾಸದ ಪ್ರತೀಕವಾಗಿದೆ. ಉತ್ಕಲಾ ಸಂಗ್ರಹವು ಭಾರತದಾದ್ಯಂತ ರಿಲಯನ್ಸ್ ಜ್ಯುವೆಲ್ಸ್ ಮಳಿಗೆಗಳಲ್ಲಿ 17 ಅಕ್ಟೋಬರ್ ನಿಂದ ಲಭ್ಯವಿರುತ್ತದೆ. ಇದಲ್ಲದೆ, 16 ನವೆಂಬರ್ 2020ವರೆಗೆ, ಚಿನ್ನಾಭರಣಗಳು ಮತ್ತು ಚಿನ್ನದ ನಾಣ್ಯಗಳ ತಯಾರಿಕೆ ವೆಚ್ಚಗಳ ಮೇಲೆ 30% ರಷ್ಟು ರಿಯಾಯಿತಿಯನ್ನು ಮತ್ತು ವಜ್ರಾಭರಣಗಳ ಬಿಲ್ ಮೌಲ್ಯದ ಮೇಲೆ 30%ವರೆಗೆ ರಿಯಾಯಿತಿಯನ್ನು, ಎಲ್ಲಾ ಗ್ರಾಹಕರಿಗೂ ನೀಡಲಾಗುತ್ತಿದೆ. ಇದಕ್ಕೆ ಷರತ್ತುಗಳು, ನಿಯಮ ಅನ್ವಯಿಸುತ್ತವೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments