Thursday, May 13, 2021
No menu items!
Home Latest ಲಸಿಕೆ ಬಗ್ಗೆ ನಂಬಿಕೆ ಮೂಡಿಸಲು ನೇರ ಪ್ರಸಾರದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ ಕಮಲಾ ಹ್ಯಾರಿಸ್

ಲಸಿಕೆ ಬಗ್ಗೆ ನಂಬಿಕೆ ಮೂಡಿಸಲು ನೇರ ಪ್ರಸಾರದಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ ಕಮಲಾ ಹ್ಯಾರಿಸ್

ವಾಷಿಂಗ್ಟನ್: ಜನವರಿ 20 ರಂದು ಅಧಿಕಾರ ಸ್ವೀಕರಿಸಲಿರುವ ಕಮಲಾ ಹ್ಯಾರಿಸ್ , ಅಮೆರಿಕದ ಮೊದಲ ಇಂಡೋ-ಅಮೆರಿಕನ್ ಉಪಾಧ್ಯಕ್ಷೆ ಎಂಬ ಖ್ಯಾತಿಗೆ ಪಾತ್ರರಾಗಲಿದ್ದಾರೆ. ಮೊದಲ ಮಹಿಳಾ ಉಪಾಧ್ಯಕ್ಷೆಯೂ ಕೂಡ ಇವರಾಗಿದ್ದಾರೆ. ಈ ಬೆನ್ನಲ್ಲೆ ಆಫ್ರಿಕನ್-ಅಮೆರಿಕ ಜನರಲ್ಲಿ ಲಸಿಕೆ ಅಭಿಯಾನದ ಬಗ್ಗೆ ನಂಬಿಕೆ ಮೂಡಿಸುವ ಪ್ರಯತ್ನ ನಡೆಸಿದ್ದು, ಟಿವಿ ನೇರಪ್ರಸಾರದಲ್ಲಿ ಕೊವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ.

ಆಫ್ರಿಕನ್-ಅಮೆರಿಕನ್ ಜನಸಂಖ್ಯೆ ಹೆಚ್ಚಾಗಿರುವ ವಾಂಷಿಗ್ಟಂನ್ ಡಿಸಿಯ ಆರೋಗ್ಯ ಕೇಂದ್ರದಲ್ಲಿ ಮಾಸ್ಕ್ ತೊಟ್ಟಿದ್ದ ಕಮಲಾ ಹ್ಯಾರಿಸ್ ತಮ್ಮ ಮೊದಲ ಎರಡು ಡೋಸ್ ಲಸಿಕೆ ಸ್ವೀಕರಿಸಿದರು.

ದೇಶದಾದ್ಯಂತ ಆಫ್ರಿಕನ್-ಅಮೇರಿಕನ್ ಸಮುದಾಯವು ಕೋವಿಡ್ -19 ಮಹಾಮಾರಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಸಾವು ಮತ್ತು ಅನಾರೋಗ್ಯವನ್ನು ಕಂಡಿದೆ. ಇದು ಆದಷ್ಟು ಬೇಗ ಲಸಿಕೆ ನಿರೀಕ್ಷೆಯಲ್ಲಿದ್ದ ಸಮುದಾಯ ಎಂದು ಸಮೀಕ್ಷೆ ಸಹ ಹೇಳಿತ್ತು.

“ನಿಮ್ಮ ಸಮುದಾಯದಲ್ಲಿಯೇ ನೀವು ಲಸಿಕೆ ತೆಗೆದುಕೊಳ್ಳಬಹುದು ಎಂದು ಜನರಿಗೆ ನೆನಪಿಸಲು ನಾನು ಬಯಸುತ್ತೇನೆ, ಅಲ್ಲಿ ನಿಮಗೆ ತಿಳಿದಿರುವ ಜನರಿಂದಲೇ ನೀವು ಲಸಿಕೆಯನ್ನು ಸ್ವೀಕರಿಸುತ್ತೀರಿ” ಎಂದು ಅಮೆರಿಕದ ಸಂಸ್ಥೆ ಮಾಡರ್ನಾ ತಯಾರಿಸಿದ ಲಸಿಕೆ ಸ್ವೀಕರಿಸಿದ ಬಳಿಕ ಕಮಲಾ ಹ್ಯಾರಿಸ್ ಹೇಳಿದ್ದಾರೆ.

ಆಫ್ರಿಕನ್-ಅಮೆರಿಕನ್ ಜನಸಂಖ್ಯೆ ಹೆಚ್ಚಿರುವ ವಾಷಿಂಗ್ಟನ್ ಡಿಸಿಯ ಆರೋಗ್ಯ ಕೇಂದ್ರದಲ್ಲಿ ಮೊದಲ ಎರಡು ಡೋಸ್ ಲಸಿಕೆ ಸ್ವೀಕರಿಸಿದ್ದಾರೆ. ಈ ರೂಪಾಂತರಿ ಕೊರೊನಾ ಸೋಂಕು ಇತರೆ ಸೋಂಕುಗಳಿಗಿಂತ ಹೆಚ್ಚು ಅನಾರೋಗ್ಯವನ್ನು ಸೃಷ್ಟಿಸುವುದಿಲ್ಲ ಎಂದು ಅಧ್ಯಯನವೊಂದು ಹೇಳಿದೆ.

ಡಿಸೆಂಬರ್ ತಿಂಗಳ ಮಧ್ಯಭಾಗದಲ್ಲಿ ಇಂಗ್ಲೆಂಡ್ನಲ್ಲಿ ಕಾಣಿಸಿಕೊಂಡ ಹೊಸಮಾದರಿಯ ವೈರಸ್ ವೇಗವಾಗಿ ಹರಡಬಹುದು ಎಂಬ ವಿಜ್ಞಾನಿಗಳ ಹೇಳಿಕೆ ಬೆನ್ನಲ್ಲೇ ಇತರೆ ದೇಶಗಳು ಬ್ರಿಟನ್ನಿಂದ ಬರುವ ಪ್ರಯಾಣಿಕರಿಗೆ ನಿರ್ಬಂಧ ಹೇರಿವೆ. ಈ ಮಧ್ಯೆ, ಭಾರತವು ಸೇರಿದಂತೆ ಹಲವು ದೇಶಗಳಲ್ಲಿ ಹೊಸ ಮಾದರಿಯ ಸೋಂಕು ಪತ್ತೆಯಾಗಿದದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments