ಮುಂಬೈ : ಮಹಾರಾಷ್ಟ್ರದಲ್ಲಿ ಶಿವಸೇನೆ ಎನ್ಸಿಪಿ ಕಾಂಗ್ರೆಸ್ ಮೈತ್ರಿಗೆ ನವೆಂಬರ್ 28 ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದೆ. ಈ ಸಂದರ್ಭದಲ್ಲಿ ಉದ್ಭವ್ ಠಾಕ್ರೆ ನ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ದೇಶ ಕೊರೊನಾ ವೈರಸ್ ಕಪಿಮುಷ್ಠಿಯಲ್ಲಿದೆ. ಆದರೆ ಬಿಜೆಪಿಯೇತರ ಸರಕಾರಗಳನ್ನು ಉರುಳಿಸುವ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸುತ್ತಿದೆ. ಬಿಜೆಪಿಯ ಅಧಿಕಾರದ ಆಸೆಯಿಂದ ರಾಷ್ಟ್ರ ಅಳಿವಿನಂಚಿಗೆ ತಲುಪಿದೆ ಎಂದಿದ್ದಾರೆ.
ನಿನ್ನೆ ದಸರಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಸಿಎಂ ಠಾಕ್ರೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಲ್ಲದೆ ಬಹಿರಂಗ ಸವಾಲನ್ನು ಹಾಕಿದ್ದಾರೆ. ಮೋದಿ ಸರ್ಕಾರ ನನ್ ಸರ್ಕಾರವನ್ನು ಉರುಳಿಸಲು ಪ್ರಯತ್ನ ನಡೆಸುತ್ತಿದೆ. ನಾನು ಮುಖ್ಯಮಂತ್ರಿ ಆದ ದಿನದಿಂದಲೂ ನನ್ನ ಸರ್ಕಾರದ ಪತನದ ಭವಿಷ್ಯವನ್ನು ಕೇಳುತ್ತಿದ್ದೇಬೆ. ಸರ್ಕಾರ ಅಂದು ಪತನವಾಗುತ್ತೆ, ಇಂದು ಪತನವಾಗುತ್ತೆ ಎಂಬ ಮಾತುಗಳು ಸಾಕಷ್ಟು ಬಾರಿ ಬಂದಿವೆ. ಆದ್ರೆ ಇಲ್ಲಿವರೆಗೂ ಆ ರೀತಿ ಏನು ಆಗಿಲ್ಲ. ನಿಮಗೆ ತಾಕತ್ತಿದ್ದರೆ ನನ್ನ ಸರ್ಕಾರ ಉರುಳಿಸಿ ಎಂದು ಉದ್ಭವ್ ಠಾಕ್ರೆ ಬಿಜೆಪಿಗೆ ನೇರ ಸವಾಲು ಹಾಕಿದ್ದಾರೆ.
ಇದೇ ವೇಳೆ ಬಿಹಾರ ಚುನಾವಣೆ ಬಗ್ಗೆ ಮಾತನಾಡಿರುವ ಠಾಕ್ರೆ, ತಮ್ಮ ಮಿತ್ರಪಕ್ಷಗಳಿಗೆ ಬಿಜೆಪಿ ಮೋಸ ಮಾಡುತ್ತಿದೆ. ಎನ್ ಡಿ ಎ ಮೈತ್ರಿ ಕೂಟ ಈಗಾಗಲೇ ಅಂತ್ಯವಾಗಿದೆ. ಬಿಜೆಪಿ ನಾಯಕರುಮೊದಲಿಗೆ ಸ್ನೇಹ ಅಂತ ಹೇಳುತ್ತಾರೆ. ಆಮೇಲೆ ಹಿಂದೆಯಿಂದ ಚೂರಿ ಹಾಕುತ್ತಾರೆ. ಬಿಹಾರ ವಿಧಾನಸಭಾ ಚುನಾವಣೆಯ ಬಳಿಕವೂ ನಿತೀಶ್ ಕುಮಾರ್ ಅವರ ಕಥೆಯು ಇದೇ ರೀತಿ ಆಗುತ್ತೆ ಎಂದಿದ್ದಾರೆ.