Thursday, August 5, 2021
No menu items!
Home Latest ಸೋಲಿನ ಹಾದಿಯಲ್ಲಿ ಟ್ರಂಪ್: ಅಮೆರಿಕದ ಹಲವೆಡೆ ಪ್ರತಿಭಟನೆ..!

ಸೋಲಿನ ಹಾದಿಯಲ್ಲಿ ಟ್ರಂಪ್: ಅಮೆರಿಕದ ಹಲವೆಡೆ ಪ್ರತಿಭಟನೆ..!

ವಾಷಿಂಗ್ಟನ್: ಟ್ರಂಪ್ ಮತ್ತು ಬಿಡೆನ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದ್ದು, ಬಿಡೆನ್ ಗೆಲುವಿನ ಸನಿಹದಲ್ಲಿದ್ದಾರೆ.
ಮತ ಎಣಿಕೆ ಮುಂದುವರೆದಿದ್ದು, ಟ್ರಂಪ್ ಮತ್ತು ಬೈಡನ್ ಇಬ್ಬರೂ ಅಮೆರಿಕದ ಪ್ರಮುಖ ರಾಜ್ಯಗಳನ್ನು ಗೆದ್ದಿದ್ದಾರೆ. ಆದರೆ ಶ್ವೇತಭವನ ಸ್ಪರ್ಧೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು 538 ಸದಸ್ಯರ ಎಲೆಕ್ಟ್ರೋಲ್ ಕಾಲೇಜ್ ನಿರ್ಧರಿಸಲಿದೆ.

ಡೆಮೋಕ್ರಾಟಿಕ್ ಅಭ್ಯರ್ಥಿ ಜೋ ಬೈಡನ್ ಅಮೆರಿಕ ಅಧ್ಯಕ್ಷರಾಗಲಿರುವುದು ನಿಚ್ಚಳಗೊಳ್ಳುತ್ತಿದೆ. ಈವರೆಗೆ ಬೈಡೆನ್ ಅವರು 253 ಎಲಕ್ಟ್ರೋಲ್ ಮತ ಪಡೆದುಕೊಂಡಿದ್ದು, ಟ್ರಂಪ್ 213 ಮತ ಗಳಿಸಿದ್ದಾರೆ. ಇನ್ನೂ ಮತಗಳ ಎಣಿಕೆ ಪ್ರಕ್ರಿಯೆ ನಡೆಯುತ್ತಿದೆ. ಕೆಲವೇ ಗಂಟೆಗಳಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಸ್ಪಷ್ಟವಾಗುತ್ತದೆ.

ಡೊನಾಲ್ಡ್ ಟ್ರಂಪ್ ಬಹುಮತ ಮ್ಯಾಜಿಕ್ ನಂಬರ್ ತಲುಪಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಅಮೆರಿಕದ ಹಲವೆಡೆ ಈಗ ಹಿಂಸಾಚಾರ ಆರಂಭವಾಗಿದೆ. ಟ್ರಂಪ್ ಹಿನ್ನಡೆ ಹಿನ್ನೆಲೆಯಲ್ಲಿ ಈಗಾಗಲೇ ಅಮೆರಿಕದೆಲ್ಲೆಡೆ ರಿಪಬ್ಲಿಕನ್ ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ.

ಭಾರತೀಯ ಕಾಲಮಾನ ಗುರುವಾರ ಮಧ್ಯಾಹ್ನ 2 ಗಂಟೆವರೆಗಿನ ಮತ ಎಣಿಕೆ ಲೆಕ್ಕಾಚಾರಗಳ ಪ್ರಕಾರ, ಟ್ರಂಪ್ ಬಹುಮತ ಪಡೆಯಲು ಕನಿಷ್ಟ 56 ಎಲೆಕ್ಟ್ರೋಲ್ ಮತಗಳು ಬೇಕು. ಆದ್ರೆ, ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರು ಬಹುಮತ ಗಿಟ್ಟಿಸಲು ಕೇವಲ 6 ಎಲೆಕ್ಟ್ರೋಲ್ ಮತಗಳು ಸಾಕಾಗಿದೆ. ಈ ಪೈಕಿ ನವೆಡಾ ರಾಜ್ಯದಲ್ಲಿ 6 ಎಲೆಕ್ಟ್ರೋಲ್ ಮತಗಳಿದ್ದು, ಈ ಪೈಕಿ 2ರಲ್ಲಿ ಬಿಡೆನ್ ಮುನ್ನಡೆಯಲ್ಲಿದ್ದಾರೆ.

ಜಾರ್ಜಿಯಾ, ನಾರ್ಥ್ ಕೆರೋಲಿನಾ, ಪೆನ್ಸೆಲ್ವೇನಿಯಾ ಹಾಗೂ ಅಲಾಸ್ಕಾ ರಾಜ್ಯಗಳಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಟ್ರಂಪ್ ಮುನ್ನಡೆಯಲ್ಲಿದ್ದಾರೆ. ಮತ ಎಣಿಕೆ ಪ್ರಗತಿಯಲ್ಲಿರುವ ಐದೂ ರಾಜ್ಯಗಳ ಎಲ್ಲಾ ಎಲೆಕ್ಟ್ರೋಲ್ ಮತಗಳೂ ಟ್ರಂಪ್ ಅವರಿಗೇ ಬಂದರೂ ಕೂಡಾ ಮತ್ತೊಮ್ಮೆ ಅವರು ಅಧ್ಯಕ್ಷ ಪದವಿಗೆ ಏರಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments