ಬೆಂಗಳೂರು: ಕಳೆದ ಮೂರು ದಿನದಿಂದ ಬೇಡಿಕೆ ಈಡೇರಿಸುವಂತೆ ಸಾರಿಗೆ ನೌಕರರು ಒತ್ತಾಯಿಸುತ್ತಿದ್ದು, ನಿನ್ನೆಯಿಂದ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಎರಡೇ ದಿನವಾದ ಇಂದು ಕೂಡ ಸರ್ಕಾರ, ನೌಕರರ ಬೇಡಿಕೆ ಈಡೇರಿಸುವ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ. ಹೀಗಾಗಿ ನಾಳೆಯಿಂದ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
ಸಾರಿಗೆ ನೌಕರರ ಮುಷ್ಜರದ ನೇತೃತ್ವ ವಹಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ್ ಈ ಬಗ್ಗೆ ಮಾಹಿತಿ ನೀಡಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಹೊರಡಿಸಿರುವ ಪತ್ರಿಕಾ ಪ್ರಕಟಣೆ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ನೀಡಿರುವ ಹೇಳಿಕೆಗಳನ್ನ ಗಮನಿಸಿದ್ದೇನೆ. ಹಿಂಸೆಯನ್ನು ಪ್ರಚೋದಿಸುವವರು ನಾವಲ್ಲ. ಗಾಂಧಿಯ ಅಹಿಂಸಾ ತತ್ವದ ಮೇಲೆ ನಂಬಿಕೆ ಇಟ್ಟುಕೊಂಡಿದ್ದೇವೆ.
ಸಾರಿಗೆ ನೌಕರರು ಹಿಂಸಾ ಮಾರ್ಗ ಹಿಡಿಯುವ ಸುದ್ದಿಯನ್ನ ನಾವು ತಿರಸ್ಕರಿಸುತ್ತೇವೆ. ನಮ್ಮ ಸಾರಿಗೆ ನೌಕರರು ಯಾರು ಕಲ್ಲು ತೂರಾಟ ಮಾಡಿಲ್ಲ. ಅಧಿಕೃತ ಸಾಕ್ಷ್ಯ ಇದ್ರೆ ಪೊಲೀಸರು ತನಿಖೆ ಮಾಡಲಿ. ಯಾವ ಡಿಪೊ ಮುಂಭಾಗ ಸತ್ಯಾಗ್ರಹ ನಡೆಸ್ತಿದ್ದಾರೆ, ಆಯಾ ನಗರಗಳಲ್ಲಿ ಗಾಂಧಿ ಪ್ರತಿಮೆ ಇದ್ರೆ ಅಲ್ಲಿಗೆ ಶಿಫ್ಟ್ ಆಗುತ್ತದೆ. ನಮ್ಮ ಉಪವಾಸ ಸತ್ಯಾಗ್ರಹ ಮುಂದುವರೆಯುತ್ತದೆ. ಗಾಂಧಿ ಪ್ರತಿಮೆ ಇಲ್ಲದಿದ್ದರೆ ಗಾಂಧಿ ಫೋಟೋ ಇಟ್ಟು ಧರಣಿ ಮಾಡ್ತೇವೆ. ನಾಳೆ
ಬೆಳಗ್ಗೆಯಿಂದ ನಾಲ್ಕು ವಿಭಾಗದ ಎಲ್ಲಾ ನೌಕರರು ಉಪವಾಸ ಸತ್ಯಾಗ್ರಹ ಮಾಡಲಿದ್ದಾರೆ ಅಂತಾ ತಿಳಿಸಿದ್ದಾರೆ.
ಕಳೆದ ಮೂರು ದಿನದಿಂದ ಸಾರಿಗೆ ನೌಕರರು ಮುಷ್ಕರ ಮಾಡುತ್ತಿದ್ದು, ಬಸ್ ಗಳಿಲ್ಲದೆ ಜನ ಪರದಾಟ ನಡೆಸುತ್ತಿದ್ದಾರೆ. ನಾಳೆ ಕೂಡ ಮುಷ್ಕರ ಮುಂದುವರೆಯಲಿದ್ದು, ಜನ ಮತ್ತೆ ಆಟೋ, ಕ್ಯಾಬ್ ಮೇಲೆ ಅವಲಂಬಿತವಾಗಬೇಕಾದ ಅನಿವಾರ್ಯತೆ ಎದುರಾಗಿದೆ.