ಜಂಕ್ ಫುಡ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ.. ರೋಡ್ ಸೈಡ್ ಇಟ್ಟುಕೊಂಡಿರುವ ಬಗೆ ಬಗೆಯ ಆಹಾರವನ್ನು ತಿನ್ನೋದು ಅಂದ್ರೆ ಈಗಿನ ಯುವಕರಿಗೆ ಬಲು ಪ್ರೀತಿ. ಆದರಲ್ಲೂ ಪಾನಿಪೂರಿ ಅಂದ್ರೆ ಕೇಳ್ಬೇಕಾ..? ಹೆಸರೇಳಿದಾಕ್ಷಣವೇ ಬಾಯಲ್ಲಿ ನೀರುರಿಸುವಂತೆ ಮಾಡುತ್ತೆ.
ಆದರೆ, ರಸ್ತೆ ಬದಿಯಲ್ಲಿನ ಪಾನಿಪೂರಿ ತಿನ್ನುವುದು ಎಷ್ಟು ಸೂಕ್ತ..? ಈಗ ಯಾಕೆ ಈ ಪ್ರಶ್ನೆ ಕೇಳ್ತಿದೀನಿ ಅಂದ್ರೆ, ಬೀದಿಬದಿಯ ಪಾನಿಪೂರಿ ಅಂಗಡಿಗಳ ಪಾನಿ ಹಾಗೂ ಪೂರಿ ತಯಾರಿಸುವ ರಹಸ್ಯವೊಂದು ಬಯಲಾಗಿದೆ.
ಕಾಲಿನಿಂದ ತುಳಿದು ಹಿಟ್ಟು ನಾದಿ ಪೂರಿ ತಯಾರಿಸುವ, ಕೊಳಕು ನೀರಿನಿಂದ ಪಾನಿ ತಯಾರಿಸುವ ಪ್ರಕರಣಗಳ ವಿಡಿಯೋ ಸಮೇತ ಹಲವಾರು ಬಾರಿ ಪಾನಿಪೂರಿ ರಹಸ್ಯಗಳು ಬಯಲಾಗಿವೆ. ಆ ಸಾಲಿಗೆ ಈಗ ಮತ್ತೊಂದು ಪ್ರಕರಣ ಸೇರಿಕೊಂಡಿದೆ.
ಇಲ್ಲೊಂದು ಪಾನಿಪೂರಿ ಅಂಗಡಿ ಮುಂದೆ ದಿನಾ ಜನ ಮುಗಿಬಿದ್ದು ಪಾನಿಪೂರಿ ಸೇವಿಸುತ್ತಿದ್ದರು. ರುಚಿಯಾಗಿದೆ ಎಂದು ಚಪ್ಪರಿಸಿ ತಿನ್ನುತ್ತಿದ್ದ ಚಾಟ್ ಪ್ರಿಯರಿಗೆ ಇದೀಗ ಶಾಕ್ ಆಗಿದೆ.
ಯಾಕಂದ್ರೆ, ಇದೇ ಪಾನಿಪೂರಿ ಅಂಗಡಿಯವ ಪಾನಿ ತಯಾರಿಸಲು ಸಾರ್ವಜನಿಕ ಶೌಚಾಲಯದ ನೀರನ್ನು ಬಳಸುತ್ತಿದ್ದ ವಿಡಿಯೋ ತುಣುಕು ಹರಿದಾಡಿತ್ತು. ಇದರಿಂದ ಸಿಟ್ಟಿಗೆದ್ದ ಸಾರ್ವಜನಿಕರು ಅಂಗಡಿ ಮುಂದೆ ಗಲಾಟೆ ಮಾಡಿದ್ದಲ್ಲದೆ, ಅಲ್ಲಿದ್ದದ್ದನ್ನೆಲ್ಲ ಚೆಲ್ಲಾಡಿ, ಗಾಡಿ ಅಂಗಡಿಯನ್ನೂ ಜಖಂಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕೊಲ್ಹಾಪುರದ ರಂಕಾಲ ಕೆರೆ ಪಕ್ಕದ ರಸ್ತೆ ಬದಿಯಲ್ಲಿ ಮುಂಬೈ ಕೆ ಸ್ಪೆಷಲ್ ಪಾನಿಪೂರಿ ವಾಲಾ ಎಂಬ ಹೆಸರಿನ ಅಂಗಡಿಯನ್ನು ಇಟ್ಟಿದ್ದ. ಈ ಅಂಗಡಿ ಮುಂದೆ ಪಾನಿಪೂರಿ ತಿನ್ನಲು ನಿತ್ಯ ಜನಜಂಗುಳಿ ಇರುತ್ತಿತ್ತು.