ನವದೆಹಲಿ : ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲಿ ಅಕ್ರಮ ಎಸಗಿದ ಆರೋಪದ ಮೇಲೆ ಮಾಜಿ ಕೇಂದ್ರ ಸಚಿವ ದಿಲೀಪ್ ರೇಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದೆ. 1999 ರಲ್ಲಿ ದಿಲೀಪ್ ರೇ ಅವರು ಜಾರ್ಖಂಡ್ ಕಲ್ಲಿದ್ದಲು ಬ್ಲಾಕ್ ಹಂಚಿಕೆಯಲ್ಲಿ ಅಕ್ರಮ ನಡೆಸಿದ್ದಾರೆಂದು ಆರೋಪಿಸಲಾಗಿತ್ತು. ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರ್ಕಾರದಲ್ಲಿ ದಿಲೀಪ್ ರೇ ಕಲ್ಲಿದ್ದಲು ಸಚಿವರಾಗಿದ್ದರು.
ಆರೋಪ ಸಾಬೀತಾದ ಹಿನ್ನೆಲೆ ದೆಹಲಿಯ ಸಿಬಿಐ ಕೋರ್ಟ್ 3 ವರ್ಷಗಳ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿದೆ. ದಿಲೀಪ್ ರೇ ಅವರಲ್ಲದೆ ಇದೇ ಪ್ರಕರಣದಲ್ಲಿ ಇನ್ನೂ ಇಬ್ಬರಿಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ದಿಲೀಪ್ ರೇ ವಿರುದ್ಧ ಕಲ್ಲಿದ್ದಲು ಘಟಕ ಹಂಚಿಕರ ವ್ಯವಹಾರ್ ವಿಚಾರಣೆ ನಡೆಸಿದ್ದ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯ ಅಪರಾಧ ಸಂಚು ಹಾಗೂ ಇತೃ ಅಪರಾಧಗಳಡಿ ತಪ್ಪಿತಸ್ಥ ಎಂದು ಶಿಕ್ಷೆ ವಿಧಿಸಿತ್ತು. ಅಕ್ಬೋಬರ್ 6 ರಂದು ನೀಡಿದ್ದ ತೀರ್ಪಿನಂತೆ ಅವರನ್ನು ಐಪಿಸಿ ಸೆಕ್ಷನ್ 409 ಸೆಕ್ಷನ್ ನಡಿ ಶಿಕ್ಷೆಗೆ ಒಳಪಡಿಸಿತ್ತು.
ಅಕ್ಬೋಬರ್ 14 ರಂದು ಸಿಬಿಐ ಮತ್ತು ಅಪರಾಧಿಗಳಿಂದ ಅಂತಿಮ ವಾದ ವಿವಾದಗಳಿಗಾಗಿ ಮತ್ತೊಂದು ವಿಚಾರಣೆ ನಡರಸಲಾಗಿತ್ತು. ಈ ಸಂಬಂಧ ಅಂತಿಮ ತೀರ್ಪನ್ನು ಇಂದು ಪ್ರಕಟಿಸಿ ಶಿಕ್ಷೆ ವಿಧಿಸಿದೆ.