ಬೆಂಗಳೂರು: ಫೇಸ್ ಬುಕ್ ನಲ್ಲಿ ಕೆಲ ದಿನಗಳಿಂದ ಡಾಲಿ ಧನಂಜಯ್ ಸಿನಿಮಾಗೆ ಕಲಾವಿದರು ಬೇಕಾಗಿದ್ದಾರೆ ಎಂಬ ಪೋಸ್ಟ್ವೊಂದು ಹರಿದಾಡುತ್ತಿದೆ. ಆ ಪೋಸ್ಟ್ ನಟನ ಧನಂಜಯ್ ಗಮನಕ್ಕೂ ಬಂದಿದ್ದು, ಅದಕ್ಕೆ ಸ್ಪಷ್ಟನೆ ನೀಡಿ, ಅಭಿಮಾನಿಗಳಿಗೆ ಮೋಸ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.
ಆಕಾಶ್ ಗೌಡ ಎನ್ನುವ ವ್ಯಕ್ತಿ ಡಾಲಿ ಧನಂಜಯ್ ಪೋಟೋಗಳನ್ನು ಬಳಸಿ, ನಮ್ಮ ಹೊಸ ಸಿನಿಮಾಗೆ ತಂದೆ, ಮಹಿಳೆ, ಪೋಷಕ ಪಾತ್ರದಲ್ಲಿ ಅಭಿನಯಿಸುವವರು ಬೇಕಾಗಿದ್ದಾರೆ. ಸಿನಿಮಾದಲ್ಲಿ ಡಾಲಿ ಸರ್ ನಟಿಸಲಿದ್ದು, ಆಸಕ್ತರು ಸಂಪರ್ಕಿಸಿ ಎಂದು ಪೋಸ್ಟ್ ಹಾಕಿದ್ದಾರೆ. ಇದೇ ಪೋಸ್ಟನ್ನು ಶೇರ್ ಮಾಡಿ ಡಾಲಿ ಧನಂಜಯ್ ಇಂಥವನ್ನೆಲ್ಲಾ ನಂಬಬೇಡಿ ಎಂದು ಅಭಿಮಾನಿಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಡಾಲಿ ಧನಂಜಯ್, ಈ ತರಹದ ಪೋಸ್ಟ್ಗಳನ್ನು ನಂಬಿ ಮೋಸ ಹೋಗಬೇಡಿ. ಈ ರೀತಿಯ ಎರಡು ಮೂರು ಘಟನೆಗಳು ಗಮನಕ್ಕೆ ಬಂದಿವೆ. ಜೋಪಾನವಾಗಿರಿ, ಯಾವುದನ್ನೇ ನಂಬುವ ಮುನ್ನ ಅದನ್ನು ಒಂದು ಬಾರಿ ಪರೀಕ್ಷೆ ಮಾಡಿ. ಅದರಲ್ಲೂ ಯಾವುದನ್ನಾದರೂ ಮತ್ತು ಯಾರಾನ್ನದರೂ ಸೋಶಿಯಲ್ ಮೀಡಿಯಾದಲ್ಲಿ ನಂಬುವ ಮೊದಲು ಎಲ್ಲವನ್ನೂ ಪರಿಶೀಲಿಸಿ ಎಂದು ಬರೆದುಕೊಂಡಿದ್ದಾರೆ.
ಈ ತರಹ post ಗಳನ್ನು ನಂಬಿ ಮೋಸ ಹೋಗಬೇಡಿ. ಈ ತರಹ ಎರಡು ಮೂರು ಘಟನೆಗಳು ಗಮನಕ್ಕೆ ಬಂದಿವೆ. Be aware, verify everything before trusting anything and anyone on social media🙏 pic.twitter.com/UWXKaIguYu
— Dhananjaya (@Dhananjayaka) December 7, 2020
ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಅದರಲ್ಲೂ ಫೇಸ್ ಬುಕ್ ನಲ್ಲಿ ಈ ರೀತಿಯ ಹಣ ಮಾಡುವ ದಾರಿಗಳನ್ನು ಕೆಲವೊಬ್ಬರು ಹುಡುಕಿದ್ದಾರೆ. ಅಂಥ ಮೋಸಗಾರರ ಮಾತನ್ನು ನಂಬಿದ ಅದೆಷ್ಟೋ ಅಮಾಯಕರು ಹಣವನ್ನು ಕಳೆದುಕೊಂಡಿದ್ದಾರೆ. ಯಾರನ್ನೇ ನಂಬುವ ಮೊದಲು ಒಮ್ಮೆ ಯೋಚಿಸಿ ನಂಬುವುದು ಉತ್ತಮ. ಯಾವ ಕ್ಷೇತ್ರದಲ್ಲಿ ಅದೇನೆ ಆಸಕ್ತಿ ಇದ್ದರು ಅದು ಬೇರೊಬ್ಬರಿಗೆ ಬಂಡವಾಳವಾಗಬಾರದು.