Saturday, December 4, 2021
No menu items!
Home Entertainment ( Kan ) ಚಿತ್ರಮಂದಿರ ತೆರೆದ ಮೊದಲ ದಿನದ ಶೋಗೆ ಎಷ್ಟು ಮಂದಿ ಬಂದಿದ್ರು ಗೊತ್ತಾ..?

ಚಿತ್ರಮಂದಿರ ತೆರೆದ ಮೊದಲ ದಿನದ ಶೋಗೆ ಎಷ್ಟು ಮಂದಿ ಬಂದಿದ್ರು ಗೊತ್ತಾ..?

ಕೊರೊನಾ ಕಾರಣದಿಂದ ಮುಚ್ಚಿದ್ದ ಚಿತ್ರಮಂದಿರಗಳನ್ನು ಅನ್ ಲಾಕ್ 5 ಜಾರಿಯಾದ ಕಾರಣ ಆರಂಭ ಮಾಡಲಾಗಿದೆ. ಇಂದಿನಿಂದ ಚಿತ್ರಮಂದಿರಗಳು ಮತ್ತು ಮಲ್ಟಿಫ್ಲೆಕ್ಸ್ ಗಳನ್ನು ತೆರೆಯಲಾಗಿದೆ. ಕೊರೊನಾ ಭಯದ ನಡುವೆ ಪ್ರೇಕ್ಷಕರು ಸಿನಿಮಾ ಥಿಯೇಟರ್ ನತ್ತ ಬರುತ್ತಾರಾ ಎಂಬ ಅನುಮಾನದಲ್ಲೇ ಕೆಲವು ಸಿನಿಮಾಗಳನ್ನ ಮರು ಬಿಡುಗಡೆ ಮಾಡಲಾಗಿತ್ತು. ಆದ್ರೆ ಮೊದಲ ದಿನವೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇಂದು ರಮೇಶ್ ಅರವಿಂದ್ ಅಭಿನಯದ ಶಿವಾಜಿ ಸೂರತ್ಕಲ್, ಡಾರ್ಲಿಂಗ್ ಕೃಷ್ಣ, ಮಿಲನ ಅಭಿನಯದ ಲವ್ ಮಾಕ್ಟೇಲ್, ದಿಯಾ, 5 ಅಡಿ 7 ಅಂಗುಲ, ವಜ್ರಮುಖಿ, ಕಾಣದಂತೆ ಮಾಯವಾದನು ರೀ ರಿಲೀಸ್ ಆಗಿತ್ತು. ಎಸ್ಪಿ ರಸ್ತೆಯ ಶಾರದಾ ಥಿಯೇಟರ್ನಲ್ಲಿ ಜಯಮ್ಮನ ಮಗ ಖ್ಯಾತಿಯ ನಿರ್ದೇಶಕ ವಿಕಾಸ್ ನಾಯಕನಾಗಿ ನಟಿಸಿ, ನಿರ್ದೇಶಿಸಿದ್ದ ಕಾಣದಂತೆ ಮಾಯವಾದನು ಸಿನಿಮಾ ಪ್ರದರ್ಶನವಿತ್ತು. ಬೆಳಗ್ಗೆ ಮತ್ತು ಮಧ್ಯಾಹ್ನ ಎರಡು ಶೋಗಳಿದ್ದವು. ಬೆಳಗಿನ ಶೋಗೆ ಕೇವಲ 9 ಮಂದಿ ಪ್ರೇಕ್ಷಕರು ಬಂದಿದ್ದರು.

ಇನ್ನು ಬ್ರೂಕ್ ಲೀಡೋ ಮಾಲ್ ನಲ್ಲಿರುವ ಐನಾಕ್ಸ್ ನಲ್ಲಿ ಥಪ್ಪಡ್ ಹಿಂದಿ ಸಿನಿಮಾ ರಿಲೀಸ್ ಆಗಿತ್ತು. ಆದ್ರೆ ಆ ಸಿನಿಮಾಗೆ ಒಂದು ಟಿಕೆಟ್ ಮಾತ್ರ ಬುಕ್ ಆಗಿತ್ತು. ಐನಾಕ್ಸ್ ನಲ್ಲಿ ಒಬ್ಬ ಪ್ರೇಕ್ಷಕನಿಗಾಗಿ ಸಿನಿಮಾವನ್ನ ಪ್ರದರ್ಶನ ಮಾಡಲಾಗಿದೆ.

ಮೊದಲ ದಿನವೇ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮುಂದಿನ ದಿನಗಳ ಬಗ್ಗೆ ಚಿಂತೆಗೀಡು ಮಾಡಿದೆ. ವೀಕೆಂಡ್ ನಲ್ಲಿ ಪ್ರೇಕ್ಷಕರ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ವೀಕೆಂಡ್ ನಲ್ಲಿಯಾದ್ರು ಜನ ಬರ್ತಾರಾ ಅಂತ ಕಾಯುತ್ತಿದ್ದಾರೆ.

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments