Saturday, May 15, 2021
No menu items!
Home Entertainment ( Kan ) ಸಾಹಸ ಸಿಂಹನ ಬಗ್ಗೆ ಮಾತಾಡಿದ ತೆಲುಗು ನಟನ ವಿರುದ್ಧ ಭಾರೀ ಆಕ್ರೋಶ

ಸಾಹಸ ಸಿಂಹನ ಬಗ್ಗೆ ಮಾತಾಡಿದ ತೆಲುಗು ನಟನ ವಿರುದ್ಧ ಭಾರೀ ಆಕ್ರೋಶ

ಬೆಂಗಳೂರು: ಸಾಹಸ ಸಿಂಹ ವಿಷ್ಣುವರ್ಧನ್ ಅವರು ಇಲ್ಲ ಅಂತ ಅನ್ನಿಸೇ ಇಲ್ಲ. ಅವರ ಕಲೆಯಿಂದ ಎಲ್ಲರಲ್ಲೂ ಜೀವಂತವಾಗಿದ್ದಾರೆ. ಕನ್ನಡದ ಮೇರು ನಟರಲ್ಲಿ ವಿಷ್ಣುವರ್ಧನ್ ಕೂಡ ಒಬ್ಬರು. ಹೀಗಿರುವಾಗ ಅವರ ಬಗ್ಗೆ ಬೇರೆ ಭಾಷೆಯ ನಟರೊಬ್ಬರು ಏನೇನೋ ಮಾತಾಡಿದ್ದಾರೆ. ಈ ಮಾತು ಕನ್ನಡಿಗರನ್ನು ರೊಚ್ಚಿಗೇಳಿಸಿದೆ. ತೆಲುಗು ನಟ ಪ್ರಚಾರಕ್ಕಾಗಿ ನಟ ವಿಷ್ಣುವರ್ಧನ್ ಹೆಸರು ಬಳಸಿಕೊಂಡಿದ್ದಾರೆ. ಈ ನಟನ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದಾಗಬೇಕು ಎಂದು ಡಾ ವಿಷ್ಣು ಸೇನಾ ಸಮಿತಿ ದೂರು ಸಲ್ಲಿಸಿದೆ.

ತೆಲುಗು ಸಿನಿಮಾ ನಟ ವಿಜಯ್ ರಂಗರಾಜ್ ಸಂದರ್ಶನದಲ್ಲಿ ನಟ ವಿಷ್ಣುವರ್ಧನ್ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ. ಇದು ಸಾಹಸಸಿಂಹ ಅಭಿಮಾನಿಗಳನ್ನು ಕೆರಳಿಸಿದೆ. ಅವರ ವ್ಯಕ್ತಿತ್ವದ ಬಗ್ಗೆ ತೆಲುಗು ನಟ ಆಡಿರುವ ಮಾತು ನಿಜಕ್ಕೂ ಖಂಡನೀಯವಾಗಿದೆ.

ಅವರ ಈ ಮಾತು ವಿಷ್ಣುವರ್ಧನ್ ಅವರ ಅಳಿಯ ಅನಿರುದ್ದ್ ಗೂ ಬೇಸರ ತರಿಸಿದ್ದು, ಈ ಬಗ್ಗೆ ವಿಡಿಯೋ ಮಾಡಿದ್ದು, ರಂಗರಾಜು ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ. ವಿಷ್ಣು ಅಪ್ಪೋರಾ ಬಗ್ಗೆ ಈ ರೀತಿ ಮಾತಾಡೋದು ಎಷ್ಟು ಸರಿ. ರಂಗರಾಜು ಅನ್ನೋರು ಅಪ್ಪೋರಾ ಬಗ್ಗೆ ಮಾತಾಡಿರೋದು ಬೇಸರ ಆಗಿದೆ, ಕೋಪನು ಬಂದಿದೆ. ಎಷ್ಟೋ ಜನಕ್ಕೆ ಅಪ್ಪೋರು ಅವರ ಕಷ್ಟದ ಸಮಯದಲ್ಲಿ ಸಹಾಯ ಮಾಡಿದ್ದಾರೆ. ದ್ರೆ ಸಹಾಯ ಮಾಡಿರು ನಾನು ಮಾಡಿದೆ ಅಂತ ಹೇಳಬೇಡಿ ಎಂದಿದ್ದಾರೆ. ಅಂತವರ ಬಗ್ಗೆ ಈ ರೀತಿ ಮಾತಾಡಿರೋದು ನಿಜಕ್ಕೂ ಬೇಸರ ತರಿಸಿದೆ. ಸಿಂಹನ ಕಾಲರ್ ಹಿಡಿಯೋಕೆ ಯಾರಿಂದ ಸಾಧ್ಯ..? ಅಂದ್ರೆ ಅಷ್ಟು ಸುಲಭನಾ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ ಇಷ್ಟು ದಿನ ಯಾಕೆ ಸುಮ್ನೆ ಇರಬೇಕಾಗಿತ್ತು. ಅವರು ಇದ್ದಾಗಲೇ ಈ ಬಗ್ಗೆ ಹೇಳಬಹುದಾಗಿತ್ತಲ್ಲವಾ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ. ಟ್ವೀಟ್ಟರ್ನಲ್ಲಿ ತೆಲುಗು ನಟನ ವಿರುದ್ಧ ಹರಿಹಾಯ್ದಿರುವ ನಟ ಜಗ್ಗೇಶ್, ನತದೃಷ್ಟ ಶಿಕಾಮಣಿ! ಕಾಲವಾದ ಸಾಧಕರ ಬಗ್ಗೆ ಕುಚೇಷ್ಟೆ ಮಾತಾಡುವ ಗುಣದವ ಎಲ್ಲಿಯು ಸಲ್ಲದವ! ಅದರಲ್ಲು ಇವ ಕಲಾವಿದನಂತೆ ಈ ದರಿದ್ರ ಮುಖ ಯಾವ ಚಿತ್ರದಲ್ಲು ನೋಡಿದ ನೆನಪಿಲ್ಲಾ!ಕನ್ನಡದ ಹೃದಯಗಳೆ ಇವನ ಅನಿಷ್ಟ ಸೊಲ್ಲು ಅಡುಗುವಂತೆ ಕನ್ನಡಿಗರ ಧೂಷಣೆಗೆ ಹಿಂಜರಿಯುವಂತೆ ಉತ್ತರಿಸಿ! ಇವನ ಉದ್ದಟತನ ಮಾತಿಗೆ ಕ್ಷಮೆಯಿಲ್ಲಾ! ಸತ್ತವರು ದೇವರಸಮ!ದುಃಖವಾಯಿತು! ಎಂದು ಟ್ವೀಟ್ ಮಾಡಿದ್ದಾರೆ

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments