Wednesday, June 16, 2021
No menu items!
Home Latest ಟ್ಯಾಟೂ ಹುಚ್ಚಿಗೆ ಬಿದ್ದು ಕೇಸು ಜಡಿಸಿಕೊಂಡ ಶಿಕ್ಷಕ - ಇವನನ್ನು ನೋಡಿದ ಮಕ್ಕಳಿಗೆಲ್ಲ ಜ್ವರ ಬಂದಿತ್ತು!

ಟ್ಯಾಟೂ ಹುಚ್ಚಿಗೆ ಬಿದ್ದು ಕೇಸು ಜಡಿಸಿಕೊಂಡ ಶಿಕ್ಷಕ – ಇವನನ್ನು ನೋಡಿದ ಮಕ್ಕಳಿಗೆಲ್ಲ ಜ್ವರ ಬಂದಿತ್ತು!

ಶಿಕ್ಷಕ ವೃತ್ತಿ ಅನ್ನೋದು ಪವಿತ್ರವಾದ ವೃತ್ತಿಗಳಲ್ಲೊಂದಾಗಿ ಗುರುತಿಸಿಕೊಂಡಿದೆ. ನಮ್ಮ ದೇಶದಲ್ಲಿ ಮಾತ್ರವಲ್ಲದೇ ಬೇರೆಲ್ಲ ದೇಶಗಳಲ್ಲಿಯೂ ಕೂಡಾ ಈ ವೃತ್ತಿಯ ಬಗೆಗೊಂದು ಗೌರವಾದರ ಇದ್ದೇ ಇದೆ. ಈ ವೃತ್ತಿಯನ್ನು ಕೂಡಾ ಬಹುತೇಕರು ಅಂಥಾ ಗೌರವ ಉಳಿಯುವಂತೆಯೇ ನಿರ್ವಹಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಆದರೆ ಅತಿರೇಕ ಎಂಬುದು ಯಾರಲ್ಲಿ ಯಾವ ಬಗೆಯಲ್ಲಾದರೂ ಉದ್ಭವಿಸಬಹುದು. ಅಂಥಾದ್ದೇ ಅತಿರೇಕದಿಂದ ಟ್ಯಾಟೂ ಹುಚ್ಚಿಗೆ ಬಿದ್ದಿದ್ದ ಪರ್ಷಿಯಾದ ಶಿಕ್ಷಕನೊಬ್ಬ ಕೇಸು ಜಡಿಸಿಕೊಂಡು ಕೆಲಸವನ್ನೇ ಕಳೆದುಕೊಂಡಿದ್ದಾನೆ.

ಹೀಗೆ ವಿಚಿತ್ರವಾದ ಟ್ಯಾಟೂ ಹುಟ್ಟಿನಿಂದಲೇ ವಿಶ್ವ ವಿಖ್ಯಾತಿ, ಕುಖ್ಯಾತಿ ಗಳಿಸಿಕೊಂಡಿರುವಾತ ಸಿಲ್ವಾಯ್ನ್ ಹೆಲೈನ್. ಈತ ಆರಂಭದಿಂದಲೂ ಸ್ಟೈಲಿಶ್ ಆಸಾಮಿ. ಆದ್ರೆ ಅದೇಕೋ ಶಿಕ್ಷಕ ವೃತ್ತಿಯನ್ನು ಆರಿಸಿಕೊಂಡಿದ್ದ. ಪ್ರತಿಷ್ಟಿತ ಶಾಲೆಯೊಂದರಲ್ಲಿ ಆತ ಶಿಕ್ಷಕನಾಗಿ ಸೇರಿಕೊಂಡಿದ್ದ. ಒಂದಷ್ಟು ವರ್ಷಗಳ ಕಾಲ ಚೆಂದಗೆ ಆ ವೃತ್ತಿಯನ್ನ ನಿರ್ವಹಿಸಿದ್ದ.

ಇಂಥಾ ಆಸಾಮಿಗೆ ಇತ್ತೀಚೆಗೆ ಅದೇನಾಯ್ತೋ ಗೊತ್ತಿಲ್ಲ, ಇದ್ದಕ್ಕಿದ್ದಂತೆ ಟ್ಯಾಟೂ ಹುಚ್ಚು ಅಂಟಿಕೊಂಡಿತ್ತು. ನಿಧಾನಕ್ಕೆ ದೇಹದ ಒಂದೊಂದೇ ಭಾಗಗಳಿಗೆ ಟ್ಯಾಟೂ ಹಾಕಿಸಲಾರಂಭಿಸಿದೆದ. ಆಡಳಿತ ಮಂಡಳಿ ಟ್ಯಾಟೂ ಬಗ್ಗೆ ಅಷ್ಟಾಗಿಯೇನೂ ತಲೆ ಕೆಡಿಸಿಕೊಂಡಿರಲಿಲ್ಲ. ಆದರೆ ಒಂದಷ್ಟು ದಿನ ರಜೆ ಹಾಕಿದವನೇ ಮೈ ತುಂಬಾ ಟ್ಯಾಟೂ ಹಾಕಿಸಿಕೊಂಡು ಅದೇ ಅವತಾರದಲ್ಲಿ ಆತ ಶಾಲೆಗೆ ಬಂದಿದ್ದಾನೆ. ಅದೇನು ಅಂತಿಂಥಾ ಟ್ಯಾಟೂ ಅಲ್ಲ. ಆತನ ದೇಹದ ಪ್ರತೀ ಅಂಗಗಳನ್ನೂ ಟ್ಯಾಟೂಗಳೇ ಕವರ್ ಮಾಡಿದ್ದವು.

ಮುಖ ಮತ್ತು ಕಣ್ಣುಗಳ ಮೇಲೂ ಟ್ಯಾಟೂ ಚಿತ್ತಾರ ಮಾಡಿಕೊಂಡಿದ್ದ. ಕಣ್ಣಿಗೆ ಆಪರೇಷನ್ ಮಾಡಿಸಿ ಬಿಳಿ ಭಾಗವೂ ಕಪ್ಪಾಗುವಂತೆ ಮಾಡಿಕೊಂಡಿದ್ದ. ಥೇಟು ದೆವ್ವದಂತೆ ಕಾಣಿಸೋ ಈತನನ್ನು ಕಂಡು ಮಕ್ಕಳೆಲ್ಲ ಬೆಚ್ಚಿ ಬಿದ್ದಿವೆಯಂತೆ. ಕೆಲ ಮಕ್ಕಳು ಜ್ವರದಿಂದ ಹಾಸಿಗೆ ಹಿಡಿದು ನರಳಾಡಿವೆ. ಈ ಬಗ್ಗೆ ಕೆಲ ಪೋಷಕರು ದೂರು ನೀಡಿ ಆ ಶಿಕ್ಷಕನ ವಿರುದ್ಧ ಕೇಸು ಜಡಿದಿದ್ದಾರೆ. ಇದೀಗ ಆಡಳಿತ ಮಂಡಳಿ ಕೂಡಾ ಆತನನ್ನು ಕೆಲಸದಿಂದ ಕಿತ್ತು ಹಾಕಿದೆ. ಸದ್ಯಕ್ಕೆ ಆತ ಜೈಲುಪಾಲಾಗಿದ್ದಾನಂತೆ!

Kinaarehttp://kinaare.in
ಕಿನಾರೆ

LEAVE A REPLY

Please enter your comment!
Please enter your name here

Most Popular

ಅಗತ್ಯದ ಸಾಮಾಗ್ರಿಗಳನ್ನು ಮನೆಗೆ ತಲಪಿಸಲಿದೆ ಸಪ್ಲೈ ಕೋ

ಕಾಸರಗೋಡು: ಲಾಕ್ ಡೌನ್ ಅವಧಿಯಲ್ಲಿ ಸಪ್ಲೈಕೋ ಕುಟುಂಬಶ್ರೀಯೊಂದಿಗೆ ಕೈ ಜೋಡಿಸಿ ಕಾಸರಗೋಡು ಜಿಲ್ಲೆಯ ಆಯ್ದ ಮಾರಾಟ ಮಳಿಗೆಗಳ ಮುಖಾಂತರ ಮನೆಗಳಿಗೇ ಅಗತ್ಯದ ಸಾಮಾಗ್ರಿ ವಿತರಣೆ ನಡೆಸಸುವ ಸೌಲಭ್ಯ ನೀಡಲಿದೆ. ವಾಟ್ಸ್ ಆಪ್ ನಂಬರ್...

ಕಾಸರಗೋಡು 919 ಮಂದಿಗೆ ಕೋವಿಡ್ ಪಾಸಿಟಿವ್, 825 ನೆಗೆಟಿವ್

ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 919 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 825 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. ನಿಗಾ: ಕಾಸರಗೋಡು ಜಿಲ್ಲೆಯಲ್ಲಿ 19388 ಮಂದಿ ನಿಗಾದಲ್ಲಿದ್ದಾರೆ....

ഓക്സിജൻ ശേഖരത്തിന്റെ മേൽനോട്ടം: ജില്ലാ തല സമിതി, വാർ റൂം രൂപീകരിച്ചു

കാസർഗോഡ്: ജില്ലയിലെ ഓക്സിജൻ ശേഖരം, അതിന്റെ ഉപയോഗം എന്നിവയുടെ മേൽനോട്ടത്തിനും നിരീക്ഷണത്തിനുമായി ജില്ലാ ദുരന്ത നിവാരണ അതോറിറ്റി ജില്ലാതല സമിതി രൂപീകരിച്ചു. ജില്ലയിലെ എല്ലാ ആരോഗ്യ സ്ഥാപനങ്ങൾക്കും ഓക്സിജൻ തടസ്സമില്ലാതെ ലഭ്യമാക്കാൻ ഓക്സിജൻ വാർ...

കേരളത്തിന് പുറത്തേക്ക് ഓക്സിജൻ കൊണ്ടു പോകാൻ കഴിയില്ല: പിണറായി വിജയൻ

തിരുവനന്തപുരം: ചൊവ്വാഴ്ച മുതൽ കേരളത്തിനു പുറത്തേക്ക് ഓക്സിജൻ കൊണ്ടുപോകാൻ കഴിയാത്ത സാഹചര്യമാണെന്നു പ്രധാനമന്ത്രി നരേന്ദ്ര മോദിയെ കത്തിലൂടെ അറിയിച്ചതായി മുഖ്യമന്ത്രി പിണറായി വിജയൻ (Pinarayi Vijayan) ആക്റ്റീവ് കേസുകൾ മേയ് 15 ഓടെ...

Recent Comments